ಇನ್ನೂ ಹೆಚ್ಚಿನ ಜಿಎಸ್ ಟಿ ದರ ಏರಿಕೆ ಎದುರಿಸಲು ಸಿದ್ಧರಾಗಿ!

 45 ನೇ ಜಿಎಸ್ ಟಿ ಕೌನ್ಸಿಲ್ ಸಭೆ ಹಲವು ಸರಕು ಹಾಗೂ ಸೇವೆಗಳ ತೆರಿಗೆಯನ್ನು ಹೆಚ್ಚಿಸಿದ್ದರೂ ಇದು ಆರಂಭವಷ್ಟೆ.
ಜಿಎಸ್ ಟಿ
ಜಿಎಸ್ ಟಿ

ನವದೆಹಲಿ: 45 ನೇ ಜಿಎಸ್ ಟಿ ಕೌನ್ಸಿಲ್ ಸಭೆ ಹಲವು ಸರಕು ಹಾಗೂ ಸೇವೆಗಳ ತೆರಿಗೆಯನ್ನು ಹೆಚ್ಚಿಸಿದ್ದರೂ ಇದು ಆರಂಭವಷ್ಟೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಪ್ರಕಾರ ನೋಡುವುದಾದರೆ, ಸೆ.18 ರಂದು ಜಾರಿಗೊಳಿಸಿದ ಜಿಎಸ್ ಟಿ ದರ ಏರಿಕೆಗಳು ಆರಂಭವಷ್ಟೇ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದರ ಏರಿಕೆಗೆ ಸಿದ್ಧರಾಗಬೇಕಾಗುತ್ತದೆ.

ಇದೇ ವೇಳೆ ಕೇಂದ್ರ ವಿತ್ತ ಸಚಿವರು ರಾಜ್ಯಗಳಿಗೆ ಪರಿಹಾರವನ್ನು ಜೂ.2022 ನ್ನು ಮೀರಿ ವಿಸ್ತರಣೆ ಮಾಡದೇ ಇರುವುದಕ್ಕೆ ಕಾರಣ ತಿಳಿಸಿದ್ದು,  ಜಿಎಸ್ ಟಿ ಜಾರಿಗೊಳ್ಳುವ ವೇಳೆಗೆ ರೆವೆನ್ಯೂ ನ್ಯೂಟ್ರಲ್ ರೇಟ್ (ಆರ್ ಎನ್ಆರ್) ಪ್ರಸ್ತಾವನೆ ಶೇ.15.3 ರಷ್ಟು ಇತ್ತು. ಆದರೆ ಈಗ ಸರಾಸರಿ ಜಿಎಸ್ ಟಿ ಗಾತ್ರ ಶೇ.11.6 ರಷ್ಟು ಮಾತ್ರ ಇದೆ. ರಾಜ್ಯಗಳಿಗೆ ಆರ್ಥಿಕ ಪರಿಸ್ಥಿತಿಯ ಕುರಿತು ತಿಳಿಸಲು ಸಭೆಯಲ್ಲಿ ಪ್ರಸ್ತುತಿಯನ್ನು ಮಂಡಿಸಲಾಗಿದೆ" ಎಂದು ಸೀತಾರಾಮನ್ ತಿಳಿಸಿದ್ದಾರೆ.

ಆದಾಯ ವೃದ್ಧಿ ದೃಷ್ಟಿಯಿಂದ ದರಗಳನ್ನು ಕ್ರಮಬದ್ಧಗೊಳಿಸುವುದು ಹಾಗೂ ವಿನಾಯಿತಿಯನ್ನು ಪರಿಶೀಲನೆ ಮಾಡುವುದಕ್ಕಾಗಿ ಜಿಎಸ್ ಟಿ ಪರಿಷತ್ ಗ್ರೂಪ್ ಆಫ್ ಮಿನಿಸ್ಟರ್ (ಸಚಿವರ ಗುಂಪು) ಸ್ಥಾಪನೆ ಮಾಡಲು ನಿರ್ಧರಿಸಿದೆ. 

ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ ಅದಿರುಗಳ ಮೇಲಿನ ಜಿಎಸ್ ಟಿ ಯನ್ನು 5% ರಿಂದ 18% ಕ್ಕೆ ಹೆಚ್ಚಿಸಲಾಗಿದೆ. ನಿರ್ದಿಷ್ಟಪಡಿಸಿದ ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಅವುಗಳ ಭಾಗಗಳ ಮೇಲಿನ ಜಿಎಸ್ ಟಿ  5% ರಿಂದ 12% ಕ್ಕೆ ಹೆಚ್ಚಾಗಿದೆ; ಪೆಟ್ಟಿಗೆಗಳು, ಚೀಲಗಳ ಮೇಲಿನ ದರವನ್ನು 12% ರಿಂದ 18% ಕ್ಕೆ ಹೆಚ್ಚಿಸಲಾಗಿದೆ; ಭಾಗಗಳು ಮತ್ತು ಲೋಕೋಮೋಟಿವ್‌ಗಳ ದರವನ್ನು 12% ರಿಂದ 18% ಕ್ಕೆ ಬದಲಾಗಿದೆ. ಚಲನಚಿತ್ರಗಳ ಪ್ರಸಾರಕ್ಕೆ ಜಿಎಸ್‌ಟಿ 12% ರಿಂದ 18% ಕ್ಕೆ ಏರಿಸಲಾಗಿದೆ. ಈ ಪೈಕಿ ಹಲವು ದರಗಳು ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ನ ನೀತಿಯ ಭಾಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com