ಡಿಎಚ್‌ಎಫ್‌ಎಲ್ ಪ್ರಕರಣ: ಜಾಮೀನು ಕೋರಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಪತ್ನಿ, ಪುತ್ರಿಯರು ಹೈಕೋರ್ಟ್ ಮೊರೆ

ಖಾಸಗಿ ಬ್ಯಾಂಕ್ ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಮತ್ತು ಪುತ್ರಿಯರಾದ ರೋಷನಿ ಹಾಗೂ ರಾಧಾ ಕಪೂರ್...
ರಾಣಾ ಕಪೂರ್
ರಾಣಾ ಕಪೂರ್

ಮುಂಬೈ: ಖಾಸಗಿ ಬ್ಯಾಂಕ್ ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಮತ್ತು ಪುತ್ರಿಯರಾದ ರೋಷನಿ ಹಾಗೂ ರಾಧಾ ಕಪೂರ್ ಖನ್ನಾ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 18ರಂದು ಸಿಬಿಐ ವಿಶೇಷ ನ್ಯಾಯಾಲಯ ಈ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈಗ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಣಾ ಕಂಪೂರ್ ಕುಟುಂಬ ಇಂದು ಬಾಂಬೆ ಹೈಕೋರ್ಟ್ ಮೊರೆ ಹೋಗಿದೆ. 

ಈ ಮೂವರು ತುರ್ತು ಜಾಮೀನು ಕೋರಿ ನ್ಯಾಯಮೂರ್ತಿ ಭಾರತಿ ಡಂಗ್ರೆ ಅವರ ಏಕ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದು, ಬುಧವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಬಾಂಬೆ ಹೈಕೋರ್ಟ್ ಹೇಳಿದೆ.

ಡಿಎಚ್‌ಎಫ್‌ಎಲ್ ಗೆ ಸಂಬಂಧಿಸಿರುವ ಒಂದು ಸಂಸ್ಥೆಯಿಂದ ಕಪೂರ್, ಅವರ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳಿಂದ 600 ಕೋಟಿ ರುಪಾಯಿ ಪಡೆದಿದ್ದರು. ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರು ಬೃಹತ್ ಸಾಲಗಳನ್ನು ಮಂಜೂರು ಮಾಡಲು ಕಿಕ್‌ಬ್ಯಾಕ್ ಆಗಿ ತಾವು ನಿಯಂತ್ರಿಸುತ್ತಿರುವ ಕಂಪನಿಗಳ ಮೂಲಕ 4,300 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿಲಾಗಿದೆ.

ನ್ಯೂಯಾರ್ಕ್, ಲಂಡನ್ ಹಾಗೂ ಮುಂಬೈನಲ್ಲಿರುವ ರಾಣಾ ಕಪೂರ್ ಹಾಗೂ ಕುಟುಂಬಸ್ಥರಿಗೆ ಸೇರಿದ ಸರಿ ಸುಮಾರು 2,200 ಕೋಟಿ ರು ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳಿಂದ ತಿಳಿದು ಬಂದಿದೆ. ಇನ್ನೊಂದೆಡೆ, ರಾಣಾ ಕಪೂರ್, ಡಿಎಚ್‌ಎಫ್‌ಎಲ್ ಮತ್ತು ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಚಾರ್ಜ್‌ಶೀಟ್ ದಾಖಲಿಸಿ, ತನಿಖೆ ಮುಂದುವರೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com