8 ತಿಂಗಳ ನಂತರ ದಾಖಲೆ ಬರೆದ ಸೆನ್ಸೆಕ್ಸ್: 60 ಸಾವಿರ ಗಡಿ ದಾಟಿದ ಮುಂಬೈ ಷೇರು ಪೇಟೆ ಸೂಚ್ಯಂಕ 

ಈ ವರ್ಷದ ಜನವರಿಯಲ್ಲಿ 50 ಸಾವಿರದಲ್ಲಿದ್ದ ಸೆನ್ಸೆಕ್ಸ್ ನಂತರ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ 60 ಸಾವಿರದ ಗಡಿ ದಾಟಿದೆ. ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿಯನ್ನು ದಾಟಿತ್ತು. ಇದೀಗ 10 ಸಾವಿರ ಅಂಕಗಳಷ್ಟು ಏರಿಕೆ ಕಂಡು ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ವರ್ಷದ ಜನವರಿಯಲ್ಲಿ 50 ಸಾವಿರದಲ್ಲಿದ್ದ ಸೆನ್ಸೆಕ್ಸ್ ನಂತರ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ 60 ಸಾವಿರದ ಗಡಿ ದಾಟಿದೆ. ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿಯನ್ನು ದಾಟಿತ್ತು. ಇದೀಗ 10 ಸಾವಿರ ಅಂಕಗಳಷ್ಟು ಏರಿಕೆ ಕಂಡು ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

2003ರಿಂದ 2007ರವರೆಗೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕಂಡ ಏರಿಕೆಯನ್ನು ನಾವು ಮತ್ತೆ ಕಾಣುತ್ತಿದ್ದೇವೆ. ಇನ್ನು 2-3 ವರ್ಷಗಳವರೆಗೆ ಇದು ಮುಂದುವರಿಯಬಹುದು ಎಂದು ಸ್ವಸ್ಥಿಕ್ ಇನ್ವೆಸ್ಟ್ ಮೆಂಟ್ ನ ಮುಖ್ಯ ಸಂಶೋಧಕ ಸಂತೋಷ್ ಮೀನಾ ತಿಳಿಸಿದ್ದಾರೆ.ಹಾಗೆಂದು ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಹೀಗಾಗಿ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕೆಂದು ಕೂಡ ಅವರು ಹೇಳಿದ್ದಾರೆ.

ಮುಂಬೈ ಷೇರು ಮಾರುಕಟ್ಟೆ ಪ್ರಸಕ್ತ ವರ್ಷದಲ್ಲಿ ಶೇಕಡಾ 25ಕ್ಕಿಂತ ಅಧಿಕ ಏರಿಕೆ ಕಂಡುಬಂದಿದೆ. ಎವರ್‌ಗ್ರಾಂಡೆ ಸಾಲದ ಬಿಕ್ಕಟ್ಟು ಸುತ್ತಮುತ್ತಲಿನ ಆತಂಕಗಳು ಕಡಿಮೆಯಾದ ನಂತರ ಅಪಾಯದ ಪ್ರಮಾಣ ಸುಧಾರಿಸಿದ್ದರಿಂದ ಸೆನ್ಸೆಕ್ಸ್ 60 ಸಾವಿರ ಅಂಕಗಳಿಗೆ ಏರಿಕೆಯಾಗಿದೆ. ಬಿಎಸ್‌ಇ ಮೊದಲ ಗಂಟೆಯಲ್ಲಿ ಶೇ 60ರಷ್ಟು ಷೇರುಗಳು ಪ್ರಗತಿ ಕಾಣುತ್ತಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಮಾರುಕಟ್ಟೆ ತಂತ್ರಜ್ಞ ಆನಂದ್ ಜೇಮ್ಸ್ ಹೇಳಿದ್ದಾರೆ.

ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿ ದಾಟಿದ ನಂತರ ಫೆಬ್ರವರಿ 5ರಂದು ಅಂತರಾಷ್ಟ್ರೀಯ ದಿನದ ವಹಿವಾಟಿನಲ್ಲಿ 51,000 ಅಂಕಗಳನ್ನು ಮುಟ್ಟುವ ಮೂಲಕ ಸೆಪ್ಟೆಂಬರ್ 16 ರಂದು 59,000 ಮಟ್ಟವನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಮುಂದಿನ ಒಂದೆರಡು ವರ್ಷಗಳಲ್ಲಿ ಘನ ಆರ್ಥಿಕ ಚೇತರಿಕೆ ಮತ್ತು ನಿರಂತರ ಬೆಳವಣಿಗೆಯ ನಿರೀಕ್ಷೆಗಳು ಹೂಡಿಕೆಗಳನ್ನು ಉತ್ಸುಕರನ್ನಾಗಿ ಮಾಡಲಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ನ ರಿಟೇಲ್ ಸಿಇಒ ಸಂದೀಪ್ ಭಾರದ್ವಾಜ್ ಹೇಳಿದ್ದಾರೆ.

ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೋತಿಲಾಲ್ ಓಸ್ವಾಲ್, ಈಕ್ವಿಟಿ ಮಾರುಕಟ್ಟೆಯು ಇಂದು ಐತಿಹಾಸಿಕ ದಿನವನ್ನು ಹೊಂದಿದ್ದು, ಸೆನ್ಸೆಕ್ಸ್ 60,000 ದಾಟಿದ್ದು ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದರು.

ದೇಶೀಯ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಜಾಗತಿಕ ಸೂಚನೆಗಳು, ಎಫ್ಐಐ/ಡಿಐಐಗಳಿಂದ ಬಲವಾದ ಒಳಹರಿವು, ಉತ್ತಮ ಕಾರ್ಪೊರೇಟ್ ಗಳಿಕೆಗಳು,ಕೋವಿಡ್ -19 ಸೋಂಕು ಕಡಿಮೆಯಾಗುತ್ತಿರುವುದು, ಉತ್ಸಾಹಭರಿತ ಕಾರ್ಪೊರೇಟ್ ಮತ್ತು ಬಂಡವಾಳದ ಕಡಿಮೆ ವೆಚ್ಚದಿಂದ ಸೆನ್ಸೆಕ್ಸ್ ನಲ್ಲಿ ಏರಿಕೆ ಕಂಡುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com