ದೇಶಾದ್ಯಂತ ಡೀಸೆಲ್ ದರ ಏರಿಕೆ: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ಬೆಲೆ

ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್​ ದರದಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದ್ದು, ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್​ ದರದಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದ್ದು, ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ. 

ಭಾನುವಾರ ಪ್ರತಿ ಲೀಟರ್​ ಮೇಲೆ 23ರಿಂದ 27 ಪೈಸೆವರೆಗೂ ಡೀಸೆಲ್ ದರ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​​ ಪೆಟ್ರೋಲ್​ ಬೆಲೆ 101.19 ರೂ. ಇದೆ. 88.82 ರೂಪಾಯಿ ಇದ್ದ ಡೀಸೆಲ್​ ದರ 89.07 ರೂ.ಗೆ ಏರಿಕೆಯಾಗಿದೆ (25 ಪೈಸೆ). 

ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್​ ಡೀಸೆಲ್ ಬೆಲೆ 94.53ಕ್ಕೆ ಹೆಚ್ಚಳವಾಗಿದೆ.

ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ಮೇಲೆ 27 ಪೈಸೆ, ಚೆನ್ನೈನಲ್ಲಿ 23 ಪೈಸೆ ಹಾಗೂ ಕೋಲ್ಕತ್ತಾದಲ್ಲಿ 25 ಪೈಸೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com