ಕೋವಿಡ್-19 ಲಸಿಕೆಗೆ ಡಿಸೆಂಬರ್ 31 ರವರೆಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಿದ ಸರ್ಕಾರ

ಕೇಂದ್ರ ಸರ್ಕಾರ ಆಮದಾಗುವ ಕೋವಿಡ್ -19 ಲಸಿಕೆಗಳ ಮೇಲಿನ ಕಸ್ಟಮ್ಸ್ ಸುಂಕದಿಂದ ಡಿಸೆಂಬರ್ 31 ರವರೆಗೆ ಮೂರು ತಿಂಗಳವರೆಗೆ ವಿನಾಯಿತಿ ನೀಡಿದೆ. ಇದು ದೇಶೀಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಬೆಲೆ ಅಗ್ಗವಾಗಿಸುತ್ತದೆ.
ಮಹಿಳೆಯೊಬ್ಬರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವ ಚಿತ್ರ
ಮಹಿಳೆಯೊಬ್ಬರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಆಮದಾಗುವ ಕೋವಿಡ್ -19 ಲಸಿಕೆಗಳ ಮೇಲಿನ ಕಸ್ಟಮ್ಸ್ ಸುಂಕದಿಂದ ಡಿಸೆಂಬರ್ 31 ರವರೆಗೆ ಮೂರು ತಿಂಗಳವರೆಗೆ ವಿನಾಯಿತಿ ನೀಡಿದೆ. ಇದು ದೇಶೀಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಬೆಲೆ ಅಗ್ಗವಾಗಿಸುತ್ತದೆ.

ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್(CBIC) ಸೆಪ್ಟೆಂಬರ್ 29 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಕೋವಿಡ್ ಲಸಿಕೆಯ ಮೇಲಿನ ಈ ವಿನಾಯಿತಿ ಅಕ್ಟೋಬರ್ 1, 2021 ರಿಂದ ಜಾರಿಗೆ ಬರುತ್ತದೆ ಮತ್ತು ಡಿಸೆಂಬರ್ 31, 2021 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.

ಈ ಮೊದಲು ಏಪ್ರಿಲ್‌ನಲ್ಲಿ, ಕೇಂದ್ರ ಸರ್ಕಾರ ಆಮದಾಗುವ ಕೋವಿಡ್ ಲಸಿಕೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಮೂರು ತಿಂಗಳವರೆಗೆ ವಿನಾಯಿತಿ ನೀಡಿತ್ತು. ಮೂರು ತಿಂಗಳ ಅವಧಿಯ ಮುಕ್ತಾಯವಾದ ನಂತರ, ಆಮದಾಗುವ ಕೋವಿಡ್-19 ಲಸಿಕೆಗಳ ಮೇಲೆ ಶೇಕಡಾ 10 ರಷ್ಟು ಕಸ್ಟಮ್ಸ್ ಸುಂಕ ವಿಧಿಸಿತ್ತು.

ಈಗ ಸರ್ಕಾರ ಮತ್ತೆ ಆಮದು ಸುಂಕ ವಿನಾಯಿತಿ ನೀಡಿರುವುದರಿಂದ ವಿದೇಶಿ ಲಸಿಕೆಗಳ ದರ ಸಹ ದೇಶೀಯವಾಗಿ ತಯಾರಿಸಿದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಗೆ ಪೂರಕವಾಗಿರುತ್ತದೆ. 

ಪ್ರಸ್ತುತ, ಭಾರತ ರಷ್ಯಾ ತಯಾರಿಸಿದ ಸ್ಪುಟ್ನಿಕ್ ವಿ ಲಸಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com