ಡಿಮ್ಯಾಟ್ ಅಕೌಂಟ್ ಇದೆಯೇ? ಹಾಗಾದ್ರೆ KYC ವಿವರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ?
ಷೇರುಪೇಟೆಯಲ್ಲಿ ವ್ಯವಹಾರ ಮಾಡುವವರಿಗೆ ಡಿಮ್ಯಾಟ್ ಗೊತ್ತೇ ಇರುತ್ತದೆ. ಆದ್ರೆ, ಇತ್ತೀಚೆಗೆ ಬಂದಿರುವ ಆನ್ ಲೈನ್ ಮೊಬೈಲ್ ಸ್ಟಾಕ್ ಆ್ಯಪ್ ನಿಂದಾಗಿ ಕೆವೈಸಿ ಸಲ್ಲಿಸುವುದು ಸುಲಭವಾಗಿದ್ದು, ಹೂಡಿಕೆದಾರರಿಗೆ ಕೊಂಚ ರಿಲೀಫ್ ಕೊಟ್ಟಿದೆ.
Published: 05th April 2022 04:35 PM | Last Updated: 05th April 2022 04:58 PM | A+A A-

ಡಿಮ್ಯಾಟ್ ಖಾತೆ ಕೆವೈಸಿ
ಬೆಂಗಳೂರು: ಷೇರುಪೇಟೆಯಲ್ಲಿ ವ್ಯವಹಾರ ಮಾಡುವವರಿಗೆ ಡಿಮ್ಯಾಟ್ ಗೊತ್ತೇ ಇರುತ್ತದೆ. ಆದ್ರೆ, ಇತ್ತೀಚೆಗೆ ಬಂದಿರುವ ಆನ್ ಲೈನ್ ಮೊಬೈಲ್ ಸ್ಟಾಕ್ ಆ್ಯಪ್ ನಿಂದಾಗಿ ಕೆವೈಸಿ ಸಲ್ಲಿಸುವುದು ಸುಲಭವಾಗಿದ್ದು, ಹೂಡಿಕೆದಾರರಿಗೆ ಕೊಂಚ ರಿಲೀಫ್ ಕೊಟ್ಟಿದೆ.
ಹೊಸ ವಿಚಾರ ಏನು ಅಂದ್ರೆ ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆಗಳ KYC ಮಾಡುವ ಗಡುವನ್ನು SEBI ಜೂನ್ 30, 2022 ರವರೆಗೆ ವಿಸ್ತರಿಸಿದೆ. ಅಂದರೆ ಈಗ ನೀವು ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಾಗಿ ಕೆವೈಸಿ ಅನ್ನು ಜೂನ್ 30 ರವರೆಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ಮೊದಲು ಈ ಗಡುವು 31 ಮಾರ್ಚ್ 2022 ಆಗಿತ್ತು.
ಕೆವೈಸಿ ಮಾಡದಿದ್ದರೆ ಏನಾಗುತ್ತೆ?
ಮಾರುಕಟ್ಟೆ ನಿಯಂತ್ರಕ ಸೆಬಿ ಹೊಸ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆಯುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ಪ್ರಕಾರ, ನೀವು ಡಿಮ್ಯಾಟ್ ಖಾತೆಯನ್ನು ಹೊಂದಿದ್ದರೆ, ನಂತರ ನೀವು ಅದನ್ನು 30 ಜೂನ್ 2022 ರೊಳಗೆ KYC ಅಪ್ಡೇಟ್ ಮಾಡಬೇಕಾಗುತ್ತದೆ. KYC ಮಾಡದಿದ್ದರೆ ಡಿಮ್ಯಾಟ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ನಿಮ್ಮ ಡಿಮ್ಯಾಟ್ ಖಾತೆ ನಿಷ್ಕ್ರೀಯಗೊಂಡರೆ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ಕಂಪನಿಯ ಷೇರುಗಳನ್ನು ಖರೀದಿಸಿದ್ರೂ ಈ ಷೇರುಗಳನ್ನು ಖಾತೆಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. KYC ಪೂರ್ಣಗೊಂಡ ನಂತರ ಮತ್ತು ಪರಿಶೀಲಿಸಿದ ನಂತರವೇ ಖರೀದಿಸಿದ ಷೇರುಗಳನ್ನು ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಡಿಮ್ಯಾಟ್ ಖಾತೆಯಲ್ಲಿ ಕೆವೈಸಿ ಪೂರ್ಣ ಮಾಡಲು ಆರು ಮಾಹಿತಿಗಳ ಅಗತ್ಯವಿರುತ್ತದೆ. ಆದರೆ ಎಲ್ಲಾ ಡಿಮ್ಯಾಟ್ ಖಾತೆಗಳಲ್ಲೂ ಇನ್ನು 6 KYC ಮಾನದಂಡಗಳೊಂದಿಗೆ ನವೀಕರಣ ಮಾಡಿಲ್ಲ. ಡಿಮ್ಯಾಟ್ ಖಾತೆದಾರರು ಈ ಆರು KYC ವೈಶಿಷ್ಟ್ಯಗಳನ್ನು ಸೆಬಿ ನಿಯಮದ ಪ್ರಕಾರ ನವೀಕರಿಸುವ ಅಗತ್ಯವಿದೆ.
ಆ ಮಾಹಿತಿಗಳು ಯಾವುವು?
ಹೆಸರು, ವಿಳಾಸ, ಪ್ಯಾನ್, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆದಾಯ ಮಿತಿಯನ್ನು ಒಳಗೊಂಡಿರುತ್ತದೆ. ಜೂನ್ 1, 2021 ರಿಂದ ಜಾರಿಗೆ ಬರುವಂತೆ ತೆರೆಯಲಾದ ಹೊಸ ಡಿಮ್ಯಾಟ್ ಖಾತೆಗಳಿಗೆ ಎಲ್ಲಾ 6-KYC ಮಾಹಿತಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದು ಅನಿವಾರ್ಯವಾಗಿದೆ. ಆಧಾರ್ ಹಾಗೂ ಪ್ಯಾನ್ ಕಾರ್ಡನ್ನು ಲಿಂಕ್ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಇದು 30 ಜೂನ್ 2022 ರವರೆಗೆ ರೂ 500 ಆಗಿರುತ್ತದೆ. ಇದಾದ ನಂತರ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಮಾರ್ಚ್ 31, 2023ರ ನಂತರವೂ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.