‘ಅಶ್ನೀರ್ ಎಲ್ಲ ಹಣವನ್ನು ಕದ್ದಿದ್ದಾನೆ’: ಭಾರತ್‌ಪೇ ಸಿಇಒ ಹೊಸ ಆರೋಪ
ಭಾರತ್‌ಪೇ ಸಂಸ್ಥಾಪಕ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಹಾಗೂ ಪ್ರಸ್ತುತ ಆಡಳಿತ ಮಂಡಳಿ ನಡುವಿನ ಕಾರ್ಪೊರೇಟ್ ಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು,...
Published: 08th April 2022 03:56 PM | Last Updated: 08th April 2022 05:33 PM | A+A A-

ಸುಹೇಲ್ ಸಮೀರ್
ಬೆಂಗಳೂರು: ಭಾರತ್‌ಪೇ ಸಂಸ್ಥಾಪಕ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಹಾಗೂ ಪ್ರಸ್ತುತ ಆಡಳಿತ ಮಂಡಳಿ ನಡುವಿನ ಕಾರ್ಪೊರೇಟ್ ಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಗುರುವಾರ ಭಾರತ್‌ಪೇ ಉದ್ಯೋಗಿಯೊಬ್ಬರಿಗೆ ಸಂಬಳ ಪಾವತಿಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಶ್ನೀರ್ ಗ್ರೋವರ್ ಮತ್ತು ಭಾರತ್‌ಪೇ ಸಿಇಒ ಸುಹೇಲ್ ಸಮೀರ್ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದೆ.
ಭಾರತ್‌ಪೇನ ಹಿರಿಯ ಅಸೋಸಿಯೇಟ್ ಐಟಿ ಕರಣ್ ಸರ್ಕಿ ಅವರು ಮಾರ್ಚ್ ತಿಂಗಳ ಸಂಬಳ ಸ್ವೀಕರಿಸಿಲ್ಲ ಎಂದು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ "ಭಾರತ್‌ಪೇನ ಎಲ್ಲಾ ಹಳೆಯ ನಿರ್ವಾಹಕ ಸಿಬ್ಬಂದಿಯನ್ನು ನೀವು ಯಾವುದೇ ಕಾರಣ ನೀಡದೆ ವಜಾಗೊಳಿಸಿದ್ದೀರಿ ಮತ್ತು ಅವರ ಸಂಬಳವನ್ನು ನೀಡಿಲ್ಲ" ಎಂದು ಹೇಳಿದ್ದರು. ಈ ಪೋಸ್ಟ್ ಕಲವೇ ಕ್ಷಣಗಳಲ್ಲಿ ಇತರ ಉದ್ಯೋಗಿಗಳ ಮತ್ತು ಅಶ್ನೀರ್ ಗ್ರೋವರ್ ಅವರ ಗಮನ ಸೆಳೆಯಿತು.
ಹರ್ಸಿಮ್ರಾನ್ ಕೌರ್(ಭಾರತ್‌ಪೇಯಲ್ಲಿ ಹಣಕಾಸು ನಿಯಂತ್ರಣದ ಮುಖ್ಯಸ್ಥೆ) ಮತ್ತು ಸುಹೇಲ್ ಸಮೀರ್ ಅವರನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ ಗ್ರೋವರ್ ಅವರು, “ಜನರೇ ದಯವಿಟ್ಟು ಇದನ್ನು ನೋಡಿ. ಏನು ಮಾಡದಿದ್ದರೂ ಮೊದಲು ಅವರ ಸಂಬಳವನ್ನು ಮೊದಲು ಪಾವತಿಸಬೇಕು ಎಂದಿದ್ದಾರೆ. ಗ್ರೋವರ್ ಅವರ ಸಹೋದರಿ ಆಶಿಮಾ ಗ್ರೋವರ್ ಕೂಡ ಈ ಸಂಭಾಷಣೆಗೆ ಸೇರಿಕೊಂಡಿದ್ದು "ಇದು ದುಃಖದ ವಿಚಾರ... ಅದು ನಾಚಿಕೆಯಿಲ್ಲದ ಗ್ರೂಪ್!" ಎಂದು ಆಶಿಮಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮೀರ್ ಅವರು “ತೇರೆ ಭಾಯ್ ನೆ ಸಾರಾ ಪೈಸಾ ಚುರಾ ಲಿಯಾ(ನಿಮ್ಮ ಸಹೋದರ ಎಲ್ಲಾ ಹಣವನ್ನು ಕದ್ದನು). ಈಗ ಸಂಬಳ ನೀಡಲು ಹಣ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಲಿಂಕ್ಡ್‌ಇನ್ ಫಾಲೋ ಮಾಡುವ ಹಲವರು ಸಿಇಒನಿಂದ ತಾವು ಇಂತಹ ಕೆಟ್ಟ ಕಾಮೆಂಟ್ ನಿರಿಕ್ಷೀಸಿರಲಿಲ್ಲ ಎಂದು ಹೇಳಿದ್ದಾರೆ. ತೀವ್ರ ಹಿನ್ನಡೆಯ ನಂತರ ಕ್ಷಮೆಯಾಚಿಸಿದ ಸಮೀರ್ ಅವರು ಎಲ್ಲರೂ ತಾಳ್ಮೆಯಿಂದಿರಿ ಮತ್ತು ವದಂತಿಗಳಿಂದ ದೂರವಿರಿ ಎಂದು ಮನವಿ ಮಾಡಿದ್ದಾರೆ.