ಪೆಪ್ಸಿ ವಿರುದ್ಧ ರೆಡ್ ಬುಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಪೆಪ್ಸಿ ಸಂಸ್ಥೆ ಹೊರತಂದಿದ್ದ 'ಸ್ಟಿಂಗ್' ಎಂಬ ಎನರ್ಜಿ ಡ್ರಿಂಕ್ ಜಾಹೀರಾತಿನಲ್ಲಿ 'Stimulates Mind. Energizes Body' ಎನ್ನುವ ಟ್ಯಾಗ್ ಲೈನ್ ಬಳಸಿತ್ತು.
Published: 11th April 2022 12:25 PM | Last Updated: 11th April 2022 12:25 PM | A+A A-

ದೆಹಲಿ ಹೈಕೋರ್ಟ್
ನವದೆಹಲಿ: ಪೆಪ್ಸಿ ಕಂಪನಿ ವಿರುದ್ಧ , ಎನರ್ಜಿ ಪಾನೀಯ ತಯಾರಕ ರೆಡ್ ಬುಲ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: ಕೇರಳ: ನಿಂಬೆ ಹಣ್ಣು ಬೆಲೆ ದಾಖಲೆ ಏರಿಕೆ; ಬೇಸಗೆಗೆ ಗ್ರಾಹಕರ ಮೇಲೆ ಬರೆ
ಪೆಪ್ಸಿ ಸಂಸ್ಥೆ ಹೊರತಂದಿದ್ದ 'ಸ್ಟಿಂಗ್' ಎಂಬ ಎನರ್ಜಿ ಡ್ರಿಂಕ್ ಜಾಹೀರಾತಿನಲ್ಲಿ 'Stimulates Mind. Energizes Body' ಎನ್ನುವ ಟ್ಯಾಗ್ ಲೈನ್ ಬಳಸಿತ್ತು. ಇದರ ವಿರುದ್ಧ ರೆಡ್ ಬುಲ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು. ರೆಡ್ ಬುಲ್ ಸಂಸ್ಥೆಗೆ ಪೈಪೋಟಿ ನೀಡಲು ಪೆಪ್ಸಿ ಸಂಸ್ಥೆ ಸ್ಟಿಂಗ್ ಪೇಯ ಹೊರತಂದಿತ್ತು.
ಇದನ್ನೂ ಓದಿ: ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿ ಎಂದ ಜೆರೋದಾ ಕಂಪನಿ!
ಪೆಪ್ಸಿ ಸಂಸ್ಥೆಯ ಸ್ಟಿಂಗ್ ಪೇಯ ಜಾಹೀರಾತಿನ ಟ್ಯಾಗ್ ಲೈನ್ ತನ್ನ ಸಂಸ್ಥೆಯ ಉತ್ಪನ್ನದ ಟ್ಯಾಗ್ ಲೈನ್ ಜೊತೆ ಮ್ಯಾಚ್ ಆಗುತ್ತಿರುವುದಾಗಿ ರೆಡ್ ಬುಲ್ ಅರ್ಜಿಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ಸದ್ಯದಲ್ಲಿಯೇ ಎಲ್ಲಾ ಬ್ಯಾಂಕ್ ಎಟಿಎಂಗಳಲ್ಲಿ ಕಾರ್ಡುರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯ: ಆರ್ ಬಿಐ ಗವರ್ನರ್
ಆದರೆ ವಿಚಾರಣೆ ವೇಳೆ ರೆಡ್ ಬುಲ್ ಸಂಸ್ಥೆ ತನ್ನ ದೂರನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ವಿಂಡರ್ಜಿ ಇಂಡಿಯಾ 2022: ಅಂತಾರಾಷ್ಟ್ರೀಯ ಪವನ ಶಕ್ತಿ ವ್ಯಾಪಾರ ಮೇಳ ಮತ್ತು ಸಮ್ಮೇಳನಕ್ಕೆ ಮುಹೂರ್ತ ನಿಗದಿ