ಇನ್ಫೋಸಿಸ್, ಟಿಸಿಎಸ್ ಗೆ ಕೆಲಸ ಬಿಡುತ್ತಿರುವವರದ್ದೇ ಸಮಸ್ಯೆ: ಪ್ರತಿಭೆಗಳ ಹುಡುಕಾಟಕ್ಕೆ ಪೈಪೋಟಿ!
ಭಾರತದ ಎರಡು ಪ್ರಮುಖ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಹಾಗೂ ಇನ್ಫೋಸಿಸ್ ನಲ್ಲಿ ಉದ್ಯೋಗ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು ಐಟಿ ಸಂಸ್ಥೆಗಳ ನಡುವೆ ಪ್ರತಿಭೆಗಳನ್ನು ನೇಮೆಕ ಮಾಡಿಕೊಳ್ಳುವ ಪೈಪೋಟಿ ಉಂಟಾಗಿದೆ.
Published: 15th April 2022 02:12 PM | Last Updated: 15th April 2022 03:29 PM | A+A A-

ಉದ್ಯೋಗ (ಸಂಗ್ರಹ ಚಿತ್ರ)
ಬೆಂಗಳೂರು: ಭಾರತದ ಎರಡು ಪ್ರಮುಖ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಹಾಗೂ ಇನ್ಫೋಸಿಸ್ ನಲ್ಲಿ ಉದ್ಯೋಗ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು ಐಟಿ ಸಂಸ್ಥೆಗಳ ನಡುವೆ ಪ್ರತಿಭೆಗಳನ್ನು ನೇಮೆಕ ಮಾಡಿಕೊಳ್ಳುವ ಪೈಪೋಟಿ ಉಂಟಾಗಿದೆ.
ನಿರ್ದಿಷ್ಟ ಅವಧಿಯಲ್ಲಿ ಕೆಲಸ ತೊರೆದವರ ಸಂಖ್ಯೆ (attrition rate) ಇನ್ಫೋಸಿಸ್ ನಲ್ಲಿ ಕಳೆದ 12 ತಿಂಗಳಿನಿಂದ ಶೇ.27.7 ರಷ್ಟಿದ್ದರೆ. ಡಿಸೆಂಬರ್ ನಲ್ಲಿ ಶೇ.25.5 ರಷ್ಟಿತ್ತು ಇದಕ್ಕೂ ಮುನ್ನ 2021 ರ ಮಾರ್ಚ್ ನಲ್ಲಿ ಶೇ.10.9 ರಷ್ಟಿತ್ತು.
ಟಿಸಿಎಸ್ ಸಂಸ್ಥೆಯ attrition rate ನಾಲ್ಕನೇ ತ್ರೈಮಾಸಿಕದಲ್ಲಿ ಶೇ.17.4 ರಷ್ಟಿದ್ದರೆ, ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.15.3 ರಷ್ಟಿತ್ತು. ಸಂಸ್ಥೆಯನ್ನು ಸ್ವಯಂಪ್ರೇರಿತರಾಗಿ ತೊರೆಯುತ್ತಿರುವವರ ಸಂಖ್ಯೆ ಇನ್ನೂ ಹೆಚ್ಚಾಗುವ ಲಕ್ಷಣಗಳನ್ನು ಟಿಸಿಎಸ್ ಹೊಂದಿದೆ.
2022 ನೇ ಆರ್ಥಿಕ ವರ್ಷದ 4 ನೇ ತ್ರೈಮಾಸಿಕದಲ್ಲಿ ಐಟಿ ಸಂಸ್ಥೆಗಳು , ಬೆಳವಣಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಡಿಜಿಟಲ್ ಸೇವೆಗಳಿಗೆ ಸಂಬಂಧಿಸಿದ ಯೋಜನೆಯನ್ನು ಪಡೆಯಲು ಮುಂಚೂಣಿಯಲ್ಲಿರುವ ಡಿಜಿಟಲ್ ಹಾಗೂ ಕ್ಲೌಡ್ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುತ್ತಿವೆ. ಭವಿಷ್ಯದ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕಬಲ್ಲ ಕೌಶಲ್ಯ ಹೊಂದಿರುವ ಕಾರ್ಯಪಡೆಯನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿಗಳ ನಡುವೆ ಈಗಾಗಲೇ ಟ್ಯಾಲೆಂಟ್ ವಾರ್ ಪ್ರಾರಂಭವಾಗಿವೆ ಎಂದು ಕ್ವೆಸ್ ಸ್ಟಾಫಿಂಗ್ ನ ಸಿಇಒ ವಿಜಯ್ ಶಿವರಾಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ವರ್ಕ್ ಫ್ರಂ ಹೋಂ ಸೂಕ್ತವಲ್ಲ: ಇನ್ಫೋಸಿಸ್ ನಾರಾಯಣಮೂರ್ತಿ
ಬ್ರೋಕರೇಜ್ ಕಂಪನಿಯ ಆನಂದ್ ರಾಥಿ ಈ ಬಗ್ಗೆ ಮಾತನಾಡಿದ್ದು ಅಟ್ರಿಷನ್ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಲ್ಲಿದೆ. 2023 ನೇ ವರ್ಷದಲ್ಲಿ ಅದು ಅನುಕೂಲಕರ ಸ್ಥಿತಿಗೆ ತಿರುಗುವ ವಿಶ್ವಾಸವಿದೆ. ಎಲ್ಲಾ ಐಟಿ ಕಂಪನಿಗಳೂ ಗಮನವನ್ನು ಹೊಸಬರನ್ನು ನೇಮಿಸಿಕೊಳ್ಳುವುದರ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.
2022 ನೇ ಆರ್ಥಿಕ ವರ್ಷದಲ್ಲಿ ಟಿಸಿಎಸ್ 1 ಲಕ್ಷ ಹೊಸಬರನ್ನು (ಆಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುವವರು) ನೇಮಕ ಮಾಡಿಕೊಂಡರೆ, ಇನ್ಫೋಸಿಸ್ 85,000 ಫ್ರೆಷರ್ ಗಳನ್ನು ಕಳೆದ ವರ್ಷ ನೇಮಕ ಮಾಡಿಕೊಂಡಿದೆ. 2023 ರಲ್ಲಿ ಈ ಸಂಸ್ಥೆ ಇನ್ನೂ 50,000 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ.
ಇನ್ನು ಟಿಸಿಎಸ್ ಕೂಡಾ 2023 ರಲ್ಲಿ 40,000 ಮಂದಿಯನ್ನು ಹೊಸದಾಗಿ ಉದ್ಯೋಗಕ್ಕೆ ತೆಗೆದುಕೊಳ್ಳಲು ಯೋಜನೆ ಹೊಂದಿದೆ.
ಟಿಸಿಎಸ್ ನ ಸಿಇಒ ರಾಜೇಶ್ ಗೋಪಿನಾಥನ್ ಈ ಬಗ್ಗೆ ಮಾತನಾಡಿದ್ದು, ಕ್ಷೇತ್ರದಲ್ಲಿ ನಮಗೆ ಪೂರೈಕೆ ಮತ್ತು ಬೇಡಿಕೆಯ ಅಸಮತೋಲನ ಕಂಡುಬರುತ್ತಿದೆ. ಕ್ಷೇತ್ರಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳುವುದು ಅವರಿಂದ ಉತ್ಪಾದಕತೆಯನ್ನು ಹೊರತೆಗೆಯುವಂತೆ ಮಾಡುವುದು ದೀರ್ಘಾವಧಿಯ ಚಟುವಟಿಕೆ ಎಂದು ಹೇಳಿದ್ದಾರೆ. ಐಟಿ ಪ್ರೊಫೆಷನಲ್ ಗಳಿಗೆ ದಿಢೀರ್ ಬೇಡಿಕೆ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಾಂಡ್ಸ್ಟಾಡ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ - ಸಿಬ್ಬಂದಿ ಮತ್ತು ರಾಂಡ್ಸ್ಟಾಡ್ ಟೆಕ್ನಾಲಜೀಸ್, ಯೆಶಬ್ ಗಿರಿ, ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಐಟಿ ಪ್ರೊಫೆಷನಲ್ ಗಳಿಗೆ 2.5 ಆಫರ್ ಗಳಿವೆ. ಈ ರೀತಿಯ ಲಭ್ಯತೆ ಯುವ ವೃತ್ತಿಪರರನ್ನು ಹೊಸ ಪೀಳಿಗೆಯ ಸ್ಟಾರ್ಟ್ ಅಪ್ ಗಳತ್ತ ಗಮನ ಹರಿಸುವಂತೆ ಮಾಡುತ್ತಿದೆ" ಎಂದು ಹೇಳಿದ್ದಾರೆ.