ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್: ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ದರ ನಿಗದಿ
ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಲು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
Published: 26th April 2022 08:58 AM | Last Updated: 26th April 2022 02:58 PM | A+A A-

ಎಲಾನ್ ಮಸ್ಕ್
ನ್ಯೂಯಾರ್ಕ್: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಲು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ಟ್ವಿಟರ್ನ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ.
ಎಲಾನ್ ಮಸ್ಕ್ ಅವರು ಟ್ವಿಟರ್ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್ (₹4149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸುವುದರೊಂದಿಗೆ, ಕಂಪನಿ ಪೂರ್ತಿಯಾಗಿ ಇದೀಗ ಎಲಾನ್ ಮಸ್ಕ್ ಪಾಲಾಗಿದೆ.
ಇದನ್ನೂ ಓದಿ: ಟ್ವಿಟರ್ ಮಂಡಳಿ ಸೇರಲು ಎಲಾನ್ ಮಸ್ಕ್ ನಿರಾಕರಣೆ: ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್
2013ರಿಂದ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ, ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ, ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.
ಏಪ್ರಿಲ್ 14ರಂದು ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಅಧಿಕ ಷೇರು ಪಾಲು ಹೊಂದಿದ್ದರೂ, ಟ್ವಿಟರ್ ಮಂಡಳಿ ಸೇರುವ ಆಹ್ವಾನವನ್ನು ತಿರಸ್ಕರಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಉದ್ಯಮಿ ಮಸ್ಕ್ ಮತ್ತೆ ಸುದ್ದಿಯಾಗಿದ್ದಾರೆ.
ಈ ಕುರಿತು ಎಲಾನ್ ಮಸ್ಕ್ ಟ್ವೀಟ್ ಮಾಡಿ, ಟ್ವಿಟರ್ ಖರೀದಿಯನ್ನು ‘Yessss’ ಎಂದು ಸಂಭ್ರಮಿಸಿದ್ದಾರೆ.
ವಾಕ್ ಸ್ವಾತಂತ್ರ್ಯವು ಕಾರ್ಯರೂಪದಲ್ಲಿರುವ ಯಾವುದೇ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎನ್ನುವ ಡಿಜಿಟಲ್ ಜಗಲಿಯಲ್ಲಿ ಮನುಷ್ಯತ್ವದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತದೆ. ಟ್ವಿಟರ್ನ ಆಲ್ಗೊರಿದಂಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ಎಲ್ಲರನ್ನೂ ತಲುಪುವಂತೆ ಮಾಡಬೇಕಿದೆ. ಟ್ವಿಟರ್ಗೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯವಿದೆ. ಅದನ್ನು ಸಾಧ್ಯವಾಗಿಸಲು ಕಂಪನಿಯೊಂದಿಗೆ, ಬಳಕೆದಾರರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆಂದು ಹೇಳಿದ್ದಾರೆ.
Yesss!!! href="https://t.co/0T9HzUHuh6">pic.twitter.com/0T9HzUHuh6
— Elon Musk (@elonmusk) April 25, 2022
ಅಲ್ಲದೆ, ನನ್ನನ್ನು ಕೆಟ್ಟದಾಗಿ ಟೀಕಿಸುವವರು ಕೂಡ ಟ್ವಿಟರ್ನಲ್ಲಿಯೇ ಉಳಿಯಬೇಕೆಂದು ಬಯಸುತ್ತೇನೆ. ವಾಕ್ ಸ್ವಾತಂತ್ರ್ಯ ಎಂದರೆ ಅದೇ ತಾನೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
I hope that even my worst critics remain on Twitter, because that is what free speech means
— Elon Musk (@elonmusk) April 25, 2022