ಟ್ವಿಟರ್ ಖರೀದಿ ಎಫೆಕ್ಟ್: ಟೆಸ್ಲಾದ 3.99 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ ಎಲಾನ್ ಮಸ್ಕ್
ಇತ್ತೀಚೆಗೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖರೀದಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ತಮ್ಮ ಟೆಸ್ಲಾ ಕಾರು ತಯಾರಿಕಾ ಸಂಸ್ಥೆಯ ಷೇರು ಮಾರಾಟ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
Published: 29th April 2022 12:12 PM | Last Updated: 29th April 2022 12:16 PM | A+A A-

ಎಲಾನ್ ಮಸ್ಕ್
ವಾಷಿಂಗ್ಟನ್: ಇತ್ತೀಚೆಗೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖರೀದಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ತಮ್ಮ ಟೆಸ್ಲಾ ಕಾರು ತಯಾರಿಕಾ ಸಂಸ್ಥೆಯ ಷೇರು ಮಾರಾಟ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್: ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ದರ ನಿಗದಿ
ಹೌದು.. ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆ ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್, ಟೆಸ್ಲಾದ 44 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳ ಮಾರುಕಟ್ಟೆ ಮೌಲ್ಯ 3.99 ಬಿಲಿಯನ್ ಡಾಲರ್ ಅಂದರೆ ಅಂದಾಜು 30,536.79 ಕೋಟಿ ರೂ ಎಂದು ಹೇಳಲಾಗಿದೆ.
ಇದನ್ನೂ ಓದಿ: ಟ್ವಿಟರ್ ಮಂಡಳಿ ಸೇರಲು ಎಲಾನ್ ಮಸ್ಕ್ ನಿರಾಕರಣೆ: ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್
ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಕಳೆದ ವಾರ 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ)ಗೆ ಖರೀದಿಸಿದ್ದ ಎಲಾನ್ ಮಸ್ಕ್ ಅವರಿಗೆ ಟೆಸ್ಲಾ ಷೇರು ಮಾರಾಟದಿಂದ ಹಣಕಾಸಿನ ನೆರವು ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಗುರುವಾರ ಟೆಸ್ಲಾದ ಷೇರು ಮಾರಾಟದ ಬಳಿಕ ಮುಂದೆ ಷೇರು ಮಾರಾಟ ಮಾಡುವ ಚಿಂತನೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಫೋರ್ಬ್ಸ್ ವಿಶ್ವದ ಬಿಲಿಯನೇರ್ ಪಟ್ಟಿ: ಅಗ್ರ ಸ್ಥಾನಕ್ಕೇರಿದ ಎಲೋನ್ ಮಸ್ಕ್, ಮುಖೇಶ್ ಅಂಬಾನಿ ಟಾಪ್ 10
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಷೇರಿನ ಮೌಲ್ಯ ಶೇ.12ರಷ್ಟು ಇಳಿಕೆ ಕಂಡುಬಂದಿತ್ತು.