ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ: ಸಂಸದೀಯ ಸಮಿತಿಯಿಂದ ಗೂಗಲ್, ಅಮೆಜಾನ್, ಇತರ ದೊಡ್ಡ ಟೆಕ್ ಸಂಸ್ಥೆಗಳಿಗೆ ಸಮನ್ಸ್

ಹಲವು ಜಾಗತಿಕ ಟೆಕ್ ಕಂಪನಿಗಳು ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಸಿಐ ತನಿಖೆ ಎದುರಿಸುತ್ತಿದ್ದು, ಅವರ ಸ್ಪರ್ಧಾತ್ಮಕ ಕಾನೂನುಗಳನ್ನುಪರಿಶೀಲಿಸಲು ಸಂಸದೀಯ ಸಮಿತಿ ಗುರುವಾರ ಗೂಗಲ್...

Published: 29th April 2022 01:09 AM  |   Last Updated: 29th April 2022 01:09 AM   |  A+A-


Soon, you can pay income tax, apply for PAN using a mobile app

ಸಾಂದರ್ಭಿಕ ಚಿತ್ರ

PTI

ನವದೆಹಲಿ: ಹಲವು ಜಾಗತಿಕ ಟೆಕ್ ಕಂಪನಿಗಳು ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಸಿಐ ತನಿಖೆ ಎದುರಿಸುತ್ತಿದ್ದು, ಅವರ ಸ್ಪರ್ಧಾತ್ಮಕ ಕಾನೂನುಗಳನ್ನುಪರಿಶೀಲಿಸಲು ಸಂಸದೀಯ ಸಮಿತಿ ಗುರುವಾರ ಗೂಗಲ್, ಅಮೆಜಾನ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರರ ಪ್ರತಿನಿಧಿಗಳಿಗೆ ಸಮನ್ಸ್ ನೀಡಲು ನಿರ್ಧರಿಸಿದೆ.

ಈ ವಿಷಯದ ಕುರಿತು ಸಂಸದೀಯ ಸಮಿತಿಯ ಮುಂದಿನ ಸಭೆ ಮೇ 12 ರಂದು ನಡೆಯುವ ಸಾಧ್ಯತೆಯಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ(CCI), ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಮುಂದೆ ವಿಷಯ ಮಂಡಿಸಿದ ನಂತರ ವಿವರವಾಗಿ ಚರ್ಚಿಸಲಾಯಿತು.

ಇದನ್ನು ಓದಿ: ಇನ್ನುಮುಂದೆ ಗೂಗಲ್ ಮ್ಯಾಪ್ಸ್ ನಲ್ಲಿ ಟೋಲ್ ದರ ಮಾಹಿತಿ: ಈ ತಿಂಗಳೇ ಜಾರಿ ಸಾಧ್ಯತೆ

ದೊಡ್ಡ ಟೆಕ್ ಕಂಪನಿಗಳ ಪೈಪೋಟಿ-ವಿರೋಧಿ ಅಭ್ಯಾಸಗಳನ್ನು ಪರಿಣಾಮಕಾರಿಯಾಗಿ ಎದುರಿಸಲು 'ಡಿಜಿಟಲ್ ಮಾರುಕಟ್ಟೆಗಳು ಮತ್ತು ಡೇಟಾ ಘಟಕ'ವನ್ನು ಸ್ಥಾಪಿಸುವುದಾಗಿ ಸಿಸಿಐ ಸಂಸದೀಯ ಸಮಿತಿಗೆ ತಿಳಿಸಿದೆ. ಅಲ್ಲದೆ CCI ಕಾಯಿದೆಗೆ ತಿದ್ದುಪಡಿ ಮಾಡುವ ಅಗತ್ಯ ಇದೆ ಎಂದು ಹೇಳಿದೆ.

ಅಮೆಜಾನ್‌ ಸೇರಿದಂತೆ ಹಲವು ಕಂಪನಿಗಳು ತಮಗೆ ಬೇಕಾದ ಮಾರಾಟಗಾರರನ್ನು ಉತ್ತೇಜಿಸುವುದು, ಕೆಲವು ಮಾರಾಟಗಾರರ ವಸ್ತುಗಳಿಗೆ ಆದ್ಯತೆ ನೀಡುವಂತಹ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳನ್ನು ಅನುಸರಿಸುತ್ತಿವೆ ಎಂಬ ಆರೋಪಗಳನ್ನು ಎದುರಿಸುತ್ತಿವೆ.


Stay up to date on all the latest ವಾಣಿಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp