ಪಿಜ್ಜಾ ಹಿಟ್ಟಿನ ಮೇಲೆ ಶೌಚಾಲಯ ಬ್ರಷ್, ಪೊರಕೆ: ಡೊಮಿನೊಸ್ ವಿರುದ್ಧ ನೆಟ್ಟಿಗರ ಆಕ್ರೋಶ, ಕಂಪೆನಿ ಹೇಳಿದ್ದೇನು?
ಪಿಜ್ಜಾ ಹಿಟ್ಟಿಗೆ ತಾಗುವಂತೆ ಶೌಚಾಲಯ ಸ್ವಚ್ಛ ಮಾಡುವ ಬ್ರಷ್ ಮತ್ತು ಪೊರಕೆಯನ್ನು ಹಿಡಿದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹುರಾಷ್ಟ್ರೀಯ ಪಿಡ್ಜಾ ರೆಸ್ಟೋರೆಂಟ್ ಸರಣಿ ಕಂಪೆನಿ ಡೊಮಿನೊ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
Published: 16th August 2022 09:23 AM | Last Updated: 17th August 2022 01:36 PM | A+A A-

ಪಿಜ್ಜಾ ಹಿಟ್ಟಿನ ಮೇಲೆ ತೂಗುಹಾಕಿರುವ ಶೌಚಾಲಯ ಸ್ವಚ್ಛ ಮಾಡುವ ಬ್ರಷ್, ಪೊರಕೆ
ಬೆಂಗಳೂರು: ಪಿಜ್ಜಾ ಹಿಟ್ಟಿಗೆ ತಾಗುವಂತೆ ಶೌಚಾಲಯ ಸ್ವಚ್ಛ ಮಾಡುವ ಬ್ರಷ್ ಮತ್ತು ಪೊರಕೆಯನ್ನು ನೇತು ಹಾಕಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹುರಾಷ್ಟ್ರೀಯ ಪಿಜ್ಜಾ ರೆಸ್ಟೋರೆಂಟ್ ಸರಣಿ ಕಂಪೆನಿ ಡೊಮಿನೊ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಸಾಹಿಲ್ ಕರ್ನಾನಿ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರ, ಫೋಟೋ ಮತ್ತು ವೀಡಿಯೊವನ್ನು ಪೋಸ್ಟ್ ಮಾಡಿ, "@dominos_india ನಮಗೆ ತಾಜಾ ಪಿಜ್ಜಾವನ್ನು ಹೇಗೆ ಪೂರೈಸುತ್ತಿದೆ ನೋಡಿ, ಇದು ಬೆಂಗಳೂರಿನ ಒಂದು ಸ್ಥಳ ಎಂದು ಬರೆದುಕೊಂಡಿದ್ದಾರೆ.
This is how @dominos_india serves us fresh Pizza! Very disgusted.
Location: Bangalore @fssaiindia @MoHFW_INDIA @mla_sudhakar @mansukhmandviya #foodsafety pic.twitter.com/1geVVy8mP5— Sahil Karnany (@sahilkarnany) July 24, 2022
ಫೋಟೋ ವೈರಲ್ ಆಗುತ್ತಿದ್ದಂತೆ ಅವರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆರೋಗ್ಯ ಸಚಿವಾಲಯ, ಕರ್ನಾಟಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
ಫೋಟೋ ವೈರಲ್ ಆಗುತ್ತಿದ್ದಂತೆ ಡೊಮಿನೊ ಹೊಸ ಹೇಳಿಕೆ ಬಿಡುಗಡೆ ಮಾಡಿದೆ. ಉನ್ನತ ಗುಣಮಟ್ಟದ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಶಿಷ್ಟಾಚಾರಗಳನ್ನು ಕಾಪಾಡಲು ಕಂಪೆನಿ ಬದ್ಧವಾಗಿದೆ. ನಮ್ಮ ಮಳಿಗೆಯೊಂದಕ್ಕೆ ಸಂಬಂಧಿಸಿದ ಘಟನೆಯನ್ನು ನೀವು ನಮ್ಮ ಗಮನಕ್ಕೆ ತಂದಿದ್ದೀರಿ. ಇದು ಪ್ರತ್ಯೇಕ ಘಟನೆ ಎಂದು ನಾವು ಸ್ಪಷ್ಟಪಡಿಸುತ್ತೇವೆ. ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದೇವೆ. ಆಹಾರ ಸುರಕ್ಷತೆ ಗುಣಮಟ್ಟವನ್ನು ಕಾಪಾಡುವಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದೆ.