ಡೀಸೆಲ್ ರಫ್ತು ಮೇಲಿನ ವಿಂಡ್ ಫಾಲ್ ಆದಾಯ ತೆರಿಗೆ ಹೆಚ್ಚಳ; ಕಚ್ಚಾ ತೈಲದ ಮೇಲಿನ ಸೆಸ್ ಇಳಿಕೆ

ಕೇಂದ್ರ ಸರ್ಕಾರ ವಿಂಡ್ ಫಾಲ್ ಆದಾಯ ತೆರಿಗೆಯ ಪಾಕ್ಷಿಕ ಪರಿಷ್ಕರಣೆಯಲ್ಲಿ ಆ.18 ರಂದು ಕಚ್ಚಾ ತೈಲದ ಮೇಲಿನ ಸೆಸ್ ನ್ನು ಪ್ರತಿ ಟನ್ ಗೆ 17,750 ರೂಗಳಿಂದ 13,000 ರೂಪಾಯಿಗಳಿಗೆ ಇಳಿಕೆ ಮಾಡಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ವಿಂಡ್ ಫಾಲ್ ಆದಾಯ ತೆರಿಗೆಯ ಪಾಕ್ಷಿಕ ಪರಿಷ್ಕರಣೆಯಲ್ಲಿ ಆ.18 ರಂದು ಕಚ್ಚಾ ತೈಲದ ಮೇಲಿನ ಸೆಸ್ ನ್ನು ಪ್ರತಿ ಟನ್ ಗೆ 17,750 ರೂಗಳಿಂದ 13,000 ರೂಪಾಯಿಗಳಿಗೆ ಇಳಿಕೆ ಮಾಡಿದೆ.

ಕೇಂದ್ರ ಸರ್ಕಾರದಿಂದ ಹೊರಡಿಸಲಾಗಿರುವ ಸುತ್ತೋಲೆಯನ್ನು ಉಲ್ಲೇಖಿಸಿರುವ ಮನಿ ಕಂಟ್ರೋಲ್, ಏವಿಯೇಷನ್ ಟರ್ಬೈನ್ ಫ್ಯುಯಲ್ (ಎಟಿಎಫ್) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ ಗೆ 5 ರೂಪಾಯಿಗಳಿಂದ 7 ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ.

ಈ ಬದಲಾವಣೆಗಳು ಆ.19 ರಿಂದ ಜಾರಿಗೆ ಬರಲಿವೆ. ಈ ಹಿಂದಿನ ಪರಿಷ್ಕರಣೆ ಸಭೆಗಳಲ್ಲಿ ಎಟಿಎಫ್ ಹಾಗೂ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ತೆಗೆದುಹಾಕಿತ್ತು.

ಏನಿದು ವಿಂಡ್ ಫಾಲ್ ತೆರಿಗೆ?

ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯನ್ನು ವಿಂಡ್ ಫಾಲ್ ಟ್ಯಾಕ್ಸ್ ಎನ್ನಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com