ಚೀನಾ ಜೊತೆ ಸಂಘರ್ಷ: 27 ಸಾವಿರ ವಿವೋ ಫೋನ್‌ಗಳ ರಫ್ತು ತಡೆ ಹಿಡಿದ ಭಾರತ, ಅಕ್ರಮ ಬಯಲಾಗುತ್ತಲೇ ದೇಶ ಬಿಟ್ಟ ನಿರ್ದೇಶಕರು!

ವಿದೇಶಕ್ಕೆ ರಫ್ತಾಗಬೇಕಿದ್ದ ಚೀನಾದ ವಿವೋ(Vivo) ಕಂಪನಿಯ 27 ಸಾವಿರ ಫೋನ್‌ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಕಂದಾಯ ಗುಪ್ತಚರ ವಿಭಾಗ(Revenue Intelligence Unit) ತಡೆ ಹಿಡಿದಿದೆ.
ವಿವೋ ಫೋನ್ ಗಳ ರಫ್ತು ರದ್ದು
ವಿವೋ ಫೋನ್ ಗಳ ರಫ್ತು ರದ್ದು

ನವದೆಹಲಿ: ವಿದೇಶಕ್ಕೆ ರಫ್ತಾಗಬೇಕಿದ್ದ ಚೀನಾದ ವಿವೋ(Vivo) ಕಂಪನಿಯ 27 ಸಾವಿರ ಫೋನ್‌ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಕಂದಾಯ ಗುಪ್ತಚರ ವಿಭಾಗ(Revenue Intelligence Unit) ತಡೆ ಹಿಡಿದಿದೆ.

ಡಿವೈಸ್‌ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಹಿನ್ನೆಲೆಯಲ್ಲಿ ಡಿಸೆಂಬರ್ 2 ರಿಂದ ಸುಮಾರು ಒಟ್ಟು 15 ದಶಲಕ್ಷ ಡಾಲರ್‌(123.73 ಕೋಟಿ ರೂ.)ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ತಡೆ ಹಿಡಿದ ಪ್ರಕರಣದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ವಿವೋ ಕಂಪನಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.  ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತ ಘಟಕದಿಂದ ಈ ಫೋನ್‌ಗಳನ್ನು ತಯಾರಿಸಲಾಗಿದೆ. ವಿವೋ ಮೊದಲ ಬಾರಿಗೆ ಭಾರತ-ನಿರ್ಮಿತ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಥೈಲ್ಯಾಂಡ್‌ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು. 

ತೆರಿಗೆ ಪಾವತಿ ಅಕ್ರಮ ಬಯಲಿಗೆಳೆದಿದ್ದ ಇಡಿ
ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಹದ್ದಿನ ಕಣ್ಣಿಟ್ಟಿದೆ. ಸರ್ಕಾರ ಚೀನಿ ಆಪ್‌ಗಳನ್ನು ನಿಷೇಧಗೊಂಡ ಬಳಿಕ ಚೀನಿ ಕಂಪನಿಗಳ ಮೇಲೆ ಆದಾಯ ತೆರಿಗೆ, ಇಡಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚಿತ್ತು. ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. 

ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ
ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ತನ್ನ ಕಂಪನಿ ವಹಿವಾಟಿನ ಶೇ.50 ಪ್ರತಿಶತದಷ್ಟು ಅಂದರೆ ಸುಮಾರು 62,476 ಕೋಟಿ ಹಣವನ್ನು ಚೀನಾಕ್ಕೆ ಕಳುಹಿಸಿಕೊಟ್ಟಿದೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿತ್ತು. ಭಾರತದಲ್ಲಿ ತೆರಿಗೆ ಪಾವತಿಸಲು ತಪ್ಪಿಸುವುದಕ್ಕಾಗಿ ಬರೋಬ್ಬರಿ ಶೇ.50ರಷ್ಟು ತೆರಿಗೆ ಹಣವನ್ನು ಚೀನಾಗೆ ರವಾನಿಸಿದೆ. ವಿವೊ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಈ ಹಿಂದೆ ದಾಳಿ ಮಾಡಿತ್ತು. ಇದೀಗ ಶೇ.50 ರಷ್ಟು ಅಂದರೆ ಬರೋಬ್ಬರಿ 62, 476ಕೋಟಿ ರೂ. ಹಣವನ್ನು ಚೀನಾಗೆ ರವಾನಿಸಿರುವುದು ಬಯಲಾಗಿದೆ. ಸಂಸ್ಥೆಯ ವಿವಿಧ ಬ್ಯಾಂಕ್‌ಗಳ 119 ಖಾತೆಗಳಲ್ಲಿ ಇರಿಸಿದ್ದ ಸುಮಾರು 465 ಕೋಟಿ ರೂ. ನಗದು ಹಣ ಹಾಗೂ 2 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನೂ ಜಪ್ತಿ ಮಾಡಲಾಗಿದೆ. 

ದೇಶಬಿಟ್ಟು ಪರಾರಿಯಾದ ನಿರ್ದೇಶಕರು
ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿರುದ್ಧಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ವಿವೋ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಅವರು ಭಾರತದಿಂದ ಪರಾರಿಯಾಗಿದ್ದಾರೆ. 2018ರಲ್ಲೇ ವಿವೋದ ಇಬ್ಬರು ನಿರ್ದೇಶಕರು ದೇಶ ತೊರೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಕ್ಯಾನರ್ ಅಡಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಹಲವಾರು ಕಂಪನಿಗಳನ್ನು ಸಂಯೋಜಿಸಿದ್ದಾರೆ. ಇದಕ್ಕೆ ಬೇಕಾದ ಸಾಕ್ಷ್ಯಾಧಾರಗಳೂ ನಮ್ಮ ಬಳಿಯಿವೆ. ಕೆಲವು ಚೀನಿ ಪ್ರಜೆಗಳು ತನಿಖೆಗೆ ಸಹಕರಿಸುತ್ತಿಲ್ಲ. ಇನ್ನೂ ಕೆಲವರು ಶೋಧ ಕಾರ್ಯ ಆರಂಭಿಸುತ್ತಿದ್ದಂತೆ ಪರಾರಿಯಾಗಿದ್ದಾರೆ, ಡಿಜಿಟಲ್ ಸಾಧನಗಳನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಇಡಿ ಮಂಗಳವಾರ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ ಇಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಗ್ರ್ಯಾಂಡ್‌ ಪ್ರಾಸ್ಪೆಕ್ಟ್‌ ಇಂಟರ್‌ನ್ಯಾಷನಲ್‌ ಕಮ್ಯೂನಿಕೇಷನ್‌ ಪ್ರೈವೆಟ್‌ ಲಿಮಿಟೆಡ್‌ ಜಮ್ಮು ಕಾಶ್ಮೀರದಲ್ಲಿ ವಿವೋ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯ ಸುಳ್ಳು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. 

ಇಬ್ಬರು ಕಂಪನಿ ಸೆಕ್ರೆಟರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರಿಗೆ ಈ ವಿಚಾರ ಗೊತ್ತಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್‌ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗ್ರ್ಯಾಂಡ್‌ ಪ್ರಾಸ್ಪೆಕ್ಟ್‌ ಕಂಪನಿ ಕೆವೈಸಿ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇಡಿ ದಾಳಿ ಬಳಿಕ ವಿವೋ ಕಂಪನಿ ತನಿಖೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಕಂಪನಿಯ ನಿರ್ದೇಶಕರು ಪರಾರಿಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

ಏನಿದು ಪ್ರಕರಣ?
ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (EB) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ವಿವೋ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಅವರು ಭಾರತದಿಂದ ಪರಾರಿಯಾಗಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಇ.ಡಿ ಮಂಗಳವಾರ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ ಇ.ಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ದಾಳಿ ನಡೆಸಿತ್ತು.

ಗ್ರ‍್ಯಾಂಡ್ ಪ್ರಾಸ್ಪೆಕ್ಟ್ ಇಂಟರ್‌ನ್ಯಾಷನಲ್ ಕಮ್ಯೂನಿಕೇಷನ್ ಪ್ರೈವೆಟ್ ಲಿಮಿಟೆಡ್ ಜಮ್ಮು ಕಾಶ್ಮೀರದಲ್ಲಿ ವಿವೋ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯ ಸುಳ್ಳು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಇಬ್ಬರು ಕಂಪನಿ ಸೆಕ್ರೆಟರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರಿಗೆ ಈ ವಿಚಾರ ಗೊತ್ತಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗ್ರ‍್ಯಾಂಡ್ ಪ್ರಾಸ್ಪೆಕ್ಟ್ ಕಂಪನಿ ಕೆವೈಸಿ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com