ಅಶ್ನೀರ್ ಗ್ರೋವರ್, ಮಾಧುರಿ ಜೈನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಭಾರತ್‌ಪೇ: 88 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಪ್ರಮುಖ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಭಾರತ್‌ಪೇ ತನ್ನ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಭಾರತ್ ಪೇ
ಭಾರತ್ ಪೇ

ಬೆಂಗಳೂರು: ಪ್ರಮುಖ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಭಾರತ್‌ಪೇ ತನ್ನ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಸಂಸ್ಥೆಯ ಹಣವನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದ್ದು ಕಂಪನಿಯು ಸಹ ಸಂಸ್ಥಾಪಕರಿಗೆ 88.6 ಕೋಟಿ ರೂ.ಗಳನ್ನು ಶೇ.18 ಬಡ್ಡಿಯೊಂದಿಗೆ ಪಾವತಿಸಲು ಹೇಳಿದೆ. ನಕಲಿ ಬಿಲ್‌ಗಳು, ಮಾರಾಟಗಾರರ ಪಾವತಿ ಮತ್ತು ವೈಯಕ್ತಿಕ ಬಳಕೆ ಮುಂತಾದ ವಿವಿಧ ವಿಧಾನಗಳ ಮೂಲಕ ವಂಚಿಸಿದ ಆರೋಪ ಅವರ ಮೇಲಿದೆ.

ಸಂಸ್ಥೆಯ ವಕ್ತಾರರು, 'ಭಾರತ್‌ಪೇ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್, ಮಾಜಿ ಕಂಟ್ರೋಲಿಂಗ್ ಹೆಡ್, ಮಾಧುರಿ ಜೈನ್ ಗ್ರೋವರ್ ಮತ್ತು ಅವರ ಕುಟುಂಬದ ಇತರ ಸಂಬಂಧಿತ ಪಕ್ಷಗಳ ವಿರುದ್ಧ ಕಂಪನಿಗೆ ಹಾನಿ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ ಎಂದು ಹೇಳಿದರು.

'ನಾವು ನ್ಯಾಯಾಲಯ ಮತ್ತು ಅಧಿಕಾರಿಗಳ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ನ್ಯಾಯ ಸಿಗುವುದು ಖಚಿತ. ವಿಷಯವು ಉಪನ್ಯಾಯಾಲಯವಾಗಿರುವುದರಿಂದ, ಈ ಹಂತದಲ್ಲಿ ನಾವು ಏನನ್ನು ಹೇಳುವುದಿಲ್ಲ ಎಂದು ಹೇಳಿದರು. ಕ್ರಿಮಿನಲ್ ಮೊಕದ್ದಮೆಯನ್ನು ನವದೆಹಲಿಯ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು) ನಲ್ಲಿ ದಾಖಲಿಸಲಾಗಿದೆ. ಇನ್ನು ದೆಹಲಿ ಹೈಕೋರ್ಟ್ ಪ್ರಸ್ತುತ ಸಿವಿಲ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ. ಅಲ್ಲಿ ಕಂಪನಿಯು ಸಹ-ಸಂಸ್ಥಾಪಕರಿಗೆ ಕಂಪನಿಯ ಹಣವನ್ನು ಮರುಪಾವತಿಸುವಂತೆ ಕೇಳಿದೆ ಎಂದರು.

ಈ ವರ್ಷದ ಫೆಬ್ರವರಿಯಲ್ಲಿ, ದುರುಪಯೋಗದ ಆರೋಪದ ಮೇಲೆ ಮಾಧುರಿ ಜೈನ್ ಗ್ರೋವರ್ ರನ್ನು ಕಂಪನಿಯಿಂದ ವಜಾಗೊಳಿಸಲಾಯಿತು. ಅವರು ಹೊಂದಿದ್ದ ESOP ಅನ್ನು ಸಹ ರದ್ದುಗೊಳಿಸಲಾಯಿತು. ಇದಾದ ಬಳಿಕ ಮಾರ್ಚ್ 1ರಂದು ಅಶ್ನೀರ್ ಗ್ರೋವರ್ ಪತ್ರ ಬರೆದು ಕಂಪನಿಗೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com