ಕೇಂದ್ರ ಬಜೆಟ್ ಎಫೆಕ್ಟ್: ಭಾರತೀಯ ಷೇರುಮಾರುಕಟ್ಟೆಯಲ್ಲಿ 'ಗೂಳಿ' ಜಿಗಿತ, 848 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಕೇಂದ್ರ ಬಜೆಟ್ 2022ರ ಮಂಡನೆ ಬೆನ್ನಲ್ಲೇ ಏರಿಕೆ ಕಂಡಿದ್ದು, ಇಂದು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 848 ಅಂಕಗಳ ಏರಿಕೆ ದಾಖಲಿಸಿದೆ.
Published: 01st February 2022 05:45 PM | Last Updated: 01st February 2022 05:56 PM | A+A A-

ಸಂಗ್ರಹ ಚಿತ್ರ
ಮುಂಬೈ: ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಕೇಂದ್ರ ಬಜೆಟ್ 2022ರ ಮಂಡನೆ ಬೆನ್ನಲ್ಲೇ ಏರಿಕೆ ಕಂಡಿದ್ದು, ಇಂದು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 848 ಅಂಕಗಳ ಏರಿಕೆ ದಾಖಲಿಸಿದೆ.
ವಿತ್ತ ಸಚಿವ ಸೀತಾರಾಮನ್ ಇಂದು ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಬಜೆಟ್ ಮೇಲಿನ ಹೂಡಿಕೆದಾರರ ಭರವಸೆಗಳಿಂದಾಗಿ ಇಂದು ಷೇರು ವಹಿವಾಟು ಜೋರಾಗಿತ್ತು. ಪರಿಣಾಮ ಇಂದು ಸೆನ್ಸೆಕ್ಸ್ ಶೇ.1.46%ರಷ್ಟು ಏರಿಕೆ ಅಂದರೆ 848.40 ಅಂಕಗಳ ಏರಿಕೆ ಕಂಡು 58,862.57 ಅಂಕಗಳಿಗೆ ವಹಿವಾಟು ಅಂತ್ಯಗೊಳಿಸಿದೆ.
ಇತ್ತ ನಿಫ್ಟಿ ಕೂಡ ಶೇ.1.37ರಷ್ಟು ಏರಿಕೆ ಕಂಡು 237 ಅಂಕಗಳ ಏರಿಕೆಯೊಂದಿಗೆ 17,576.85 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಸಂಸ್ಥೆಯ ಷೇರುಗಳ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಅಂದರೆ ಶೇ.7.54ರಷ್ಟು ಏರಿಕೆ ಕಂಡಿದ್ದು, ಈ ಹಿಂದಿನ ವಹಿವಾಟಿಗಿಂತ ಇಂದು ಷೇರು ಮೌಲ್ಯದಲ್ಲಿ 81.80ರೂ ಏರಿಕೆ ಕಂಡಿದೆ. ಇನ್ನು ಇಂದಿನ ವಹಿವಾಟಿನಲ್ಲಿ ಬಿಪಿಸಿಎಲ್ ಸಂಸ್ಥೆಯ ಷೇರು ಮೌಲ್ಯ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.4.58ರಷ್ಟು ಕುಸಿತ ಕಂಡಿದೆ.