ರಿಪಬ್ಲಿಕ್ ಟಿವಿ ವಿವಾದದ 17 ತಿಂಗಳ ಬಳಿಕ ಸುದ್ದಿ ವಾಹಿನಿಗಳ ರೇಟಿಂಗ್ ನ್ನು ಪುನಾರಂಭ ಮಾಡಲಿರುವ ಬಿಎಆರ್ ಸಿ
ಟಿವಿ ರೇಟಿಂಗ್ ಗಳ ಮುಖ್ಯ ಸಂಸ್ಥೆ ಬಿಎಆರ್ ಸಿ ಮಾರ್ಚ್ ಮಧ್ಯಭಾಗದಿಂದ ಸುದ್ದಿ ವಾಹಿನಿಗಳ ರೇಟಿಂಗ್ ಡೇಟಾವನ್ನು ಪ್ರಕಟಿಸುವುದಾಗಿ ಘೋಷಿಸಿದೆ.
Published: 07th February 2022 09:41 PM | Last Updated: 08th February 2022 01:04 PM | A+A A-

ಸಾಂಕೇತಿಕ ಚಿತ್ರ
ಮುಂಬೈ: ಟಿವಿ ರೇಟಿಂಗ್ ಗಳ ಮುಖ್ಯ ಸಂಸ್ಥೆ ಬಿಎಆರ್ ಸಿ ಮಾರ್ಚ್ ಮಧ್ಯಭಾಗದಿಂದ ಸುದ್ದಿ ವಾಹಿನಿಗಳ ರೇಟಿಂಗ್ ಡೇಟಾವನ್ನು ಪ್ರಕಟಿಸುವುದಾಗಿ ಘೋಷಿಸಿದೆ.
17 ತಿಂಗಳಿನಿಂದ ಬಿಎಆರ್ ಸಿ ರೇಟಿಂಗ್ ನ್ನು ಸ್ಥಗಿತಗೊಳಿಸಿತ್ತು. ಈ ಬಗ್ಗೆ ಫೆ.07 ರಂದು ಹೇಳಿಕೆ ಬಿಡುಗಡೆ ಮಾಡಿರುವ ಬಿಎಆರ್ ಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸುದ್ದಿ ವಾಹಿನಿಗಳ ಡೇಟಾವನ್ನು ಬಿಡುಗಡೆ ಮಾಡವುದಕ್ಕೆ ನಿರ್ದೇಶನ ನೀಡಿದ್ದು ಮಾರ್ಚ್ ತಿಂಗಳ ಮಧ್ಯಭಾಗದಿಂದ ರೇಟಿಂಗ್ (ಟಿಆರ್ ಪಿ) ಪ್ರಕಟಿಸುವುದಾಗಿ ತಿಳಿಸಿದೆ.
ರಿಪಬ್ಲಿ ಟಿವಿಯ ಹಿರಿಯ ಅಧಿಕಾರಿಗಳನ್ನೊಳಗೊಂಡ ರೇಟಿಂಗ್ ಗಾಗಿ ನಗದು ಹಗರಣದ ಆರೋಪದ ಹಿನ್ನೆಲೆಯಲ್ಲಿ 2020 ರ ಅಕ್ಟೋಬರ್ ನಲ್ಲಿ ಬಿಎಆರ್ ಸಿ ತಾತ್ಕಾಲಿಕವಾಗಿ ರೇಟಿಂಗ್ ಗಳನ್ನು ಸ್ಥಗಿತಗೊಳಿಸಿತ್ತು. ವೀಕ್ಷಕರ ಸಂಖ್ಯೆಯ ಅಂದಾಜನ್ನು ನೀಡುವ ಬಿಎಆರ್ ಸಿ ರೇಟಿಂಗ್ ಗಳು ಜಾಹಿರಾತುಗಳಿಗೆ ನಿರ್ಣಾಯಕವಾಗಿರಲಿದೆ.