ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್: ಕಾರಣವೇನು?
ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹುಂಡೈ ಕಂಪನಿಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸುವಂತೆ ಟ್ವೀಟರ್ ಬಳಕೆದಾರರು ಮನವಿ ಮಾಡುತ್ತಿದ್ದಾರೆ
Published: 07th February 2022 08:59 PM | Last Updated: 07th February 2022 09:05 PM | A+A A-

ಹುಂಡೈ ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹುಂಡೈ ಕಂಪನಿಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸುವಂತೆ ಟ್ವೀಟರ್ ಬಳಕೆದಾರರು ಮನವಿ ಮಾಡುತ್ತಿದ್ದಾರೆ. ಕಾಶ್ಮೀರವನ್ನು ತಪ್ಪಾಗಿ ನಿರೂಪಿಸಿದ ಹಾಗೂ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಪರವಾಗಿ ನಿಂತಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಡೀಲರ್ ಹಾಗೂ ಹುಂಡೈ ಗ್ಲೋಬಲ್ ಕ್ಷಮೆಯಾಚಿಸುವಂತೆ ಬಳಕೆದಾರರು ಕರೆ ನೀಡಿದ್ದಾರೆ.
ಹುಂಡೈ ಕಂಪನಿಯ ಪಾಕಿಸ್ತಾನ ಘಟಕ ತನ್ನ ಅಧಿಕೃತ ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಕಾಶ್ಮೀರ ಒಗ್ಗಟ್ಟು ಕುರಿತು ಮಾಡಿರುವ ಫೋಸ್ಟ್ ಭಾರತದಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಹುಂಡೈ ಪಾಕಿಸ್ತಾನ ಘಟಕ ತನ್ನ ಟ್ವೀಟರ್ ಅಧಿಕೃತ ಖಾತೆಯಲ್ಲಿ '' ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನೆನಪಿಸಿಕೊಳ್ಳಬೇಕಾಗಿದೆ. ಅಲ್ಲದೇ ಕಾಶ್ಮೀರಿ ನಿವಾಸಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿರುವುದು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಹುಂಡೈ ಮೋಟಾರ್ ಇಂಡಿಯಾ, ಕಂಪನಿಯು ರಾಷ್ಟ್ರೀಯತೆಯನ್ನು ಗೌರವಿಸುವ ತನ್ನ ನೀತಿಯ ಮೇಲೆ ದೃಢವಾಗಿ ನಿಂತಿದೆ. ಭಾರತೀಯ ಮಾರುಕಟ್ಟೆ ಮೇಲಿರುವ ತನ್ನ ಬದ್ಧತೆಯನ್ನು ತೋರಿಸಿದೆ ಎಂದಿದೆ.
ಹುಂಡೈ ಮೋಟಾರ್ ಇಂಡಿಯಾ 25 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯತೆಯನ್ನು ನಾವು ಗೌರವಿಸುತ್ತೇವೆ, ಗೌರವಾನ್ವಿತ ದೇಶದಲ್ಲಿ ನಾವು ಸೇವೆ ನೀಡಲು ಬದ್ಧರಾಗಿದ್ದೇವೆ. ಹುಂಡೈ ಬ್ರ್ಯಾಂಡ್ ಗೆ ಭಾರತ ಎರಡನೇ ಮನೆಯಾಗಿದೆ. ಇಂತಹ ಅಸೂಕ್ಷ್ಮತೆಯ ನಿಲುವನ್ನು ಖಂಡಿಸುವುದಾಗಿ ಹೇಳಿದೆ.
Official Statement from Hyundai Motor India Ltd.#Hyundai #HyundaiIndia pic.twitter.com/dDsdFXbaOd
— Hyundai India (@HyundaiIndia) February 6, 2022