ಬಜೆಟ್ ಫೋನ್ ತಯಾರಕ ಸಂಸ್ಥೆ ಐಟೆಲ್ ಗೆ ಗ್ರಾಹಕ ಸ್ನೇಹಿ ಸಂಸ್ಥೆ ಗೌರವ
ಅಮೆರಿಕದ ಫ್ರಾಸ್ಟ್ ಮತ್ತು ಸಲ್ಲಿವನ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ತಿಳಿದುಬಂದಿದೆ. ಐಟೆಲ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಮಾರಾಟಜಾಲವನ್ನು ಬಲಪಡಿಸಲು ಸಿದ್ಧತೆ ನಡೆಸಿದೆ
Published: 19th February 2022 07:09 PM | Last Updated: 19th February 2022 08:00 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಬಜೆಟ್ ಫೋನ್ ತಯಾರಿಕೆಗೆ ಹೆಸರಾದ ಸಂಸ್ಥೆ 'ಐಟೆಲ್'ಗೆ ಅಮೆರಿಕದ ಸಮೀಕ್ಷಾ ಸಂಸ್ಥೆಯಿಂದ ಅತ್ಯುತ್ತಮ ಗ್ರಾಹಕ ಸ್ನೇಹಿ ಕ್ರಮಗಳನ್ನು ಕೈಗೊಂಡ ಸಂಸ್ಥೆ ಎನ್ನುವ ಗೌರವ ದೊರೆತಿದೆ. ಫ್ರಾಸ್ಟ್ ಮತ್ತು ಸಲ್ಲಿವನ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ತಿಳಿದುಬಂದಿದೆ.
ಇದನ್ನೂ ಓದಿ: ಇಂಡಿಗೋ ನಿರ್ದೇಶಕ ಮಂಡಳಿಗೆ ರಾಕೇಶ್ ಗಂಗ್ವಾಲ್ ರಾಜಿನಾಮೆ!
ಇದೇ ಸುಸಂದರ್ಭದಲ್ಲಿ ಐಟೆಲ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಮಾರಾಟಜಾಲವನ್ನು ಬಲಪಡಿಸಲು ಸಿದ್ಧತೆ ನಡೆಸಿದೆ ಎಂದು ಕಂಪನಿ ಸಿಇಒ ಅರಿಜೀತ್ ತಲಪಾತ್ರ ತಿಳಿಸಿದ್ದಾರೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಕ್ಷಕ್ಕೂ ಮೇಲ್ಪಟ್ಟು ದರದ ತನಕ ಬೆಲೆಯ ಫೋನುಗಳು ಲಭ್ಯ ಇವೆ.
ಇದನ್ನೂ ಓದಿ: UPI Digital Payment: ಭಾರತದ ಯುಪಿಐ ಅಳವಡಿಸಿಕೊಂಡ ಮೊದಲ ಹೊರ ರಾಷ್ಟ್ರ ನೇಪಾಳ!

ಬಹುತೇಕ ಸಂಸ್ಥೆಗಳು ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನುಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿವೆ. ಅದರ ನಡುವೆ ಐಟೆಲ್ ಕಡಿಮೆ ಬೆಲೆಯ ಫೋನುಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ಒದಗಿಸಿ ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. 6,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ ಎನ್ನುವುದು ಸಂಸ್ಥೆಯ ಹೆಗ್ಗಳಿಕೆ.
ಇದನ್ನೂ ಓದಿ: 300 ಕೋಟಿ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಮಾಜಿ ಎಂಡಿ ರಾಣಾ ಕಪೂರ್ ಗೆ ಷರತ್ತುಬದ್ಧ ಜಾಮೀನು
ನಗರಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ಜನರನ್ನು ಗಮನದಲ್ಲಿರಿಸಿಕೊಂಡು ಮೇಕ್ ಇಂಡಿಯಾ ಯೋಜನೆಯಂತೆ ಸಂಸ್ಥೆ ಕಾರ್ಯಾಚರಿಸುತ್ತಿದೆ. ಸದ್ಯ ಕರ್ನಾಟಕದಲ್ಲಿ 63 ಸರ್ವಿಸ್ ಸೆಂಟರುಗಳು, 4,200ಕ್ಕೂ ಹೆಚ್ಚು ಮಾರಾಟಗಾರರನ್ನು ಸಂಸ್ಥೆ ಹೊಂದಿದೆ.
ಇದನ್ನೂ ಓದಿ: ತೆರಿಗೆ ವಂಚನೆ ಆರೋಪ ಹಿನ್ನೆಲೆ ಚೀನಾ ಮೂಲದ ಹುವಾಯ್ ಕಚೇರಿಗಳಲ್ಲಿ ಐಟಿ ಶೋಧ