
ಸಂಗ್ರಹ ಚಿತ್ರ
ನವದೆಹಲಿ: ಭಾರತದ ಆರೋಗ್ಯ ಕ್ಷೇತ್ರದ ಮುಂದಿರುವ ದೈತ್ಯ ಸವಾಲೆಂದರೆ ತಂಬಾಕು ಸಂಬಂಧಿತ ರೋಗಗಳಿಂದ ಉಂಟಾಗುತ್ತಿರುವ ಸಾವುಗಳ ನಿಯಂತ್ರಣ. ಜಾಗತಿಕ ಕಾಯಿಲೆಯ ಹೊರೆ ಕುರಿತಂತೆ ವಾಷಿಂಗ್ಟನ್‌ನ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್ ಸಂಸ್ಥೆ ನಡೆಸಿದ ಅಧ್ಯಯನದ ಮೂಲಕ ಭಾರತದಲ್ಲಿ ತಂಬಾಕು ಸೇವನೆ ಸಂಬಂಧಿತ ರೋಗಗಳಿಂದ ಪ್ರತಿ ವರ್ಷ 13 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದರಿಂದ ಭಾರತೀಯ ಆರ್ಥಿಕತೆಗೆ ಅಂದಾಜು ನಷ್ಟವನ್ನು ರೂ. 1773.4 ಶತಕೋಟಿ ಎಂದು ಪರಿಗಣಿಸಿದರೆ ಇದರ ಪ್ರಮಾಣ 2017ರ ಭಾರತದ ಜಿಡಿಪಿಯ ಸುಮಾರು 1.04ರಷ್ಟು ತಂಬಾಕಿನಿಂದ ಉಂಟಾಗುವ ಮೂರು ಪ್ರಮುಖ ರೋಗಗಳ ಚಿಕಿತ್ಸೆಗಾಗಿ ಆಗುವ ವೆಚ್ಚವು ವಾರ್ಷಿಕ 7 ಶತಕೋಟಿ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ತಂಬಾಕಿನ ಬಳಕೆಗೆ ಕಡಿವಾಣ ಅಥವಾ ನಿಯಂತ್ರಣ ಮುಂತಾದ ಕ್ರಮಗಳಿಂದ ಈ ಸಾವುಗಳನ್ನು ತಪ್ಪಿಸಬಹುದು. ದುರದೃಷ್ಟವಶಾತ್, ದುಡಿಯುವ ಜನರ ಗುಂಪುಗಳಲ್ಲಿ ಕಿರಿಯ ಜನಸಂಖ್ಯೆಯ ಮೇಲೆ ತಂಬಾಕು ದುಷ್ಪರಿಣಾಮ ಬೀರುತ್ತಿದೆ. ತಂಬಾಕು ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳು ಮಕ್ಕಳಿಗೂ ಹರಡಿರುವುದು ದುರ್ದೈವದ ಸಂಗತಿ. ತಂಬಾಕು ಉತ್ಪನ್ನಗಳ ಮೇಲೆ ಕಾನೂನು ಬದ್ಧ ಎಚ್ಚರಿಕೆಗಳ ಕಡ್ಡಾಯದ ಪ್ರದರ್ಶನಗಳ ಮೂಲಕ ಮತ್ತು ಮಾಧ್ಯಮಗಳಲ್ಲಿ ಎಲ್ಲೆಡೆ ತಂಬಾಕು ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಶಾಸನಬದ್ಧ ಎಚ್ಚರಿಕೆಯನ್ನು ಮಾಧ್ಯಮಗಳಲ್ಲಿ ಮತ್ತು ಸಿಗರೆಟ್ ಪ್ಯಾಕೆಟ್, ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಪ್ರದರ್ಶಿಸಲಾಗುತ್ತಿದೆ, ವಿಚಿತ್ರವೆಂದರೆ ಅದೇ ಮಾಧ್ಯಮಗಳಲ್ಲಿ ತಂಬಾಕು ಸೇವನೆಯನ್ನು ಔನ್ನತ್ಯಕೇರಿಸುವುದೂ ಇದೆ. ಇದರಿಂದ ತಂಬಾಕು ಸೇವನೆಗೆ ಕಡಿವಾಣ ಹಾಕುವ ಪ್ರಯತ್ನ ನಿರೀಕ್ಷಿತ ಮಟ್ಟವನ್ನು ತಲುಪುತ್ತಿಲ್ಲ. ಆದರೆ, ತಂಬಾಕು ಸೇವನೆಯಲ್ಲಿ ಈ ಶಾಸನಬದ್ಧ ಎಚ್ಚರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂಬುದಂತೂ ಸತ್ಯ. ಆದ್ದರಿಂದ, ತಂಬಾಕು ಬಳಸುತ್ತಿರುವವರಲ್ಲಿ ಹೆಚ್ಚಿನ ಪಾಲು ಮಧ್ಯಮ-ಮತ್ತು ಕಡಿಮೆ-ಆದಾಯದ ಜನರಾಗಿದ್ದು, ಈ ಜನರ ತಂಬಾಕು ಸೇವನೆಯನ್ನು ನಿಯಂತ್ರಣ ತರಲು ಅರ್ಥಶಾಸ್ತ್ರದ ಸಾಧನಗಳನ್ನು ಬಳಸುವುದು ವಿವೇಕಯುತವಾಗಿರುತ್ತದೆ.
ತಂಬಾಕಿನ ಅರ್ಥಶಾಸ್ತ್ರ
ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಕುರಿತು ಕನಿಷ್ಠ ಕಾಳಜಿಯೊಂದಿಗೆ ಸಾಕಷ್ಟು ಲಾಭ ಗಳಿಸುವ ವ್ಯವಹಾರಗಳಾಗಿವೆ. ಉತ್ಪಾದನೆಯಿಂದ ಆರಂಭಿಸಿ ತಂಬಾಕು ಮಾರಾಟದ ವರೆಗೆ ನಡೆಯುವ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಇದೊಂದು ಆಕರ್ಷಕ ವ್ಯಾಪಾರವಾಗಿದೆ. ಉತ್ಪಾದನೆಯ ಹೊಸ್ತಿಲಲ್ಲಿ ಪ್ರಾರಂಭವಾಗಿ, ತಂಬಾಕು ಅತ್ಯಂತ ಲಾಭದಾಯಕ ಬೆಳೆಗಳಲ್ಲಿ ಒಂದಾಗಿದೆ, ಇದನ್ನು ಬೆಳೆಯಲು ಕಡಿಮೆ ಕಾರ್ಮಿಕರ ಅಗತ್ಯವಿರುತ್ತದೆ ಮತ್ತು ಸ್ಪರ್ಧಾತ್ಮಕ ಬೆಳೆಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ತಂಬಾಕು ಬೆಳೆ ದೊಡ್ಡ ಲಾಭವನ್ನು ತಂದುಕೊಡುತ್ತದೆ. ಭಾರತ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಸಹಾ ಸಬ್ಸಿಡಿ ಮತ್ತು ಪರ್ಯಾಯ ಬೆಳೆ ಅನುಕ್ರಮಗಳನ್ನು ಸೂಚಿಸುವ ಮೂಲಕ ಬೆಳೆಗಳ ಪೂರೈಕೆಯ ಕಡೆ ನಿಯಂತ್ರಣವನ್ನು ತರಲು ಪ್ರಯತ್ನಿಸಿದವು. ತಂಬಾಕು ಮಂಡಳಿಯು ಆಂಧ್ರಪ್ರದೇಶದಲ್ಲಿ ಫ್ಲೂ-ಕ್ಯೂರ್ಡ್ ವರ್ಜೀನಿಯಾ (ಎಫ್‌ಸಿವಿ) ತಂಬಾಕಿಗೆ ಸಂಪೂರ್ಣ ಬೆಳೆ ರಜೆಯನ್ನು ಘೋಷಿಸಿತು ಮತ್ತು ಕರ್ನಾಟಕಕ್ಕೆ 1999/2000ರಲ್ಲಿ 40,000 ಟನ್‌ಗಳಿಂದ 2000/01 ಋತುವಿನಲ್ಲಿ 25,000 ಟನ್‌ಗಳಿಗೆ ಉತ್ಪಾದನಾ ಗುರಿಯನ್ನು ಇಳಿಸಿತು. ತಂಬಾಕು ಉತ್ಪನ್ನಗಳು ಸುಲಭವಾಗಿ ಕೈಗೆಟುಕುವಿಕೆ ಮತ್ತು ಮಾರುಕಟ್ಟೆ ತಂತ್ರಗಳ ಕಾರಣದಿಂದಾಗಿ ಈ ಈ ವ್ಯೂಹಗಳು ತಂಬಾಕಿನ ಉತ್ಪಾದನೆ ಅಥವಾ ಬಳಕೆಯನ್ನು ನಿರುತ್ಸಾಹಗೊಳಿಸುವ ನಿಟ್ಟಿನಲ್ಲಿ ಗಾಢವಾಗಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಮಾರುಕಟ್ಟೆ ತಂತ್ರಗಳಿಗೆ ಸಂಬಂಧಿಸಿದಂತೆ, ಭಾರತ ಸರ್ಕಾರವು ತಂಬಾಕು ಉತ್ಪನ್ನಗಳ ಯಾವುದೇ ಜಾಹೀರಾತನ್ನು ನಿಷೇಧಿಸುವ ಮೂಲಕ ಗಮನಾರ್ಹ ನಿಯಂತ್ರಣವನ್ನು ತರಲು ಪ್ರಯತ್ನಿಸಿತು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಶಾಸನಬದ್ಧ ಎಚ್ಚರಿಕೆಗಳನ್ನು ತೋರಿಸುವುದನ್ನು ಕಡ್ಡಾಯಗೊಳಿಸಿತು ಆದರೆ, ಮೇಲೆ ಹೇಳಿದಂತೆ ಇದು ಪೊಳ್ಳು ತಂತ್ರವೆಂದು ಸಾಬೀತಾಯಿತು. ಇನ್ನು ಆರ್ಥಿಕವಾಗಿ ತಂಬಾಕು ಉತ್ಪಾದನೆ ಮತ್ತು ಬಳಕೆ ನಿಯಂತ್ರಣಕ್ಕೆ ಆರ್ಥಿಕಪರವಾದ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ), ತಂಬಾಕಿನಿಂದ ಉಂಟಾಗುವ ಮರಣ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ತಂಬಾಕು ಉತ್ಪನ್ನಗಳ ಬೆಲೆಯ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಶಿಫಾರಸು ಮಾಡಿದ ತೆರಿಗೆಗಳನ್ನು 75ರಷ್ಟು ಹೆಚ್ಚಿಸುವ ಮೂಲಕ ತಂಬಾಕು ಸೇವನೆಗೆ ಗಮನಾರ್ಹವಾಗಿ ಅಡ್ಡಿಪಡಿಸಬಹುದು ಎಂಬ ಸಲಹೆಯನ್ನು ಬಹಳ ವಿಸ್ಪಷ್ಟವಾಗಿ ನೀಡಿತು. ಇದರ ಅನುಸಾರ ಭಾರತ ಸರ್ಕಾರ ಅರೆಮನಸ್ಸಿನಿಂದ ಆದರೂ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೆಚ್ಚಿಸುವ ಮೂಲಕ ನಿಯಂತ್ರಣವನ್ನು ತರಲು ಪ್ರಯತ್ನಿಸಿತು. 2017-18 ಮತ್ತು 2020-21ರ ನಡುವಿನ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಯು ಒಂದು ಮಹತ್ವದ ಹೆಜ್ಜೆಯಾದರೂ ಅದು ತಂಬಾಕು ಸೇವನೆ ಮೇಲೆ ಖಂಡಿತಾ ಪರಿಣಾಮ ಬೀರುವಂತಹ ಕ್ರಮ ಆಗಿರಲಿಲ್ಲ. ಬೀಡಿಗಳ ಮೇಲಿನ ಜಿಎಸ್‌ಟಿ ದರ ಬದಲಾವಣೆಯು 16ರಿಂದ 22ಕ್ಕೆ ಮತ್ತು ಹೊಗೆ ರಹಿತ ಸಿಗರೇಟ್‌ಗಳ ಮೇಲೆ 57ರಿಂದ 64ಕ್ಕೆ ಬದಲಾಗಿದೆ. ಆದಾಗ್ಯೂ, ಸಿಗರೇಟ್‌ಗಳ ಮೇಲಿನ ಜಿಎಸ್‌ಟಿ ದರವನ್ನು 53ರಿಂದ 52%ಕ್ಕೆ ಇಳಿಸಲಾಯಿತು. ಇದರಿಂದಾಗಿ ತಂಬಾಕು ಸೇವನೆಯ ಅತಿ ಹೆಚ್ಚು ಪಾಲನ್ನು ಹೊಂದಿರುವ ಮಧ್ಯಮ ಮಟ್ಟದ ಸಿಗರೇಟ್ ಸೇದುವವರನ್ನು ಸಮಾಧಾನಪಡಿಸಲಾಯಿತು. ವಿಚಿತ್ರವೆಂದರೆ, ಬೀಡಿ ಸೇದುವವರು ಜಿಎಸ್‌ಟಿ ದರ 5ರಷ್ಟು ಹೆಚ್ಚು ಪಾವತಿಸಬೇಕಾದರೆ ಸಿಗರೇಟ್ ಸೇದುವವರು ಸಿಗರೇಟ್‌ಗಳ ಬೆಲೆಯಲ್ಲಿ 1ರಷ್ಟು ರಿಯಾಯಿತಿಯನ್ನು ಪಡೆದರು. ಎಲ್ಲಕ್ಕಿಂತಾ ಹೆಚ್ಚಾಗಿ, ಬೆಲೆಗೆ ಬಳಕೆಯ ಸ್ಥಿತಿಸ್ಥಾಪಕತ್ವವು ಹೆಚ್ಚು ಉತ್ತೇಜನಕಾರಿಯಲ್ಲ ಮತ್ತು ಅದೇ ಸಮಯದಲ್ಲಿ ಈ ತಂಬಾಕು ಉತ್ಪನ್ನಗಳ ಕಡೆಗೆ ಒಂದು ಶೈಲಿಯ ಆಕರ್ಷಣೆ ಇರುತ್ತದೆ. ಆದ್ದರಿಂದ ಕಟ್ಟುನಿಟ್ಟಾದ ಹಣಕಾಸಿನ ನಿಯಂತ್ರಣಗಳನ್ನು ಜಾರಿಗೆ ತರುವುದು ಅತ್ಯಗತ್ಯ.
ಹಣಕಾಸಿನ ನಿಯಂತ್ರಣ
ಚಿಲ್ಲರೆ ಬೆಲೆಯಲ್ಲಿ ತೆರಿಗೆಗಳು ಕನಿಷ್ಠ 75ರಷ್ಟು ಹೆಚ್ಚಳ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಆದರೆ ಕೇಂದ್ರ ಬಜೆಟ್ 2020-21ರಲ್ಲಿ ಈ ದಿಶೆಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ ಅಥವಾ ಜಿಎಸ್‌ಟಿ ಬಳಕೆಗೆ ಯಾವುದೇ ಮಹತ್ವದ ವ್ಯತ್ಯಾಸವನ್ನು ಮಾಡಲಿಲ್ಲ. ಇಂದಿನ ಪರಿಸ್ಥಿತಿ ಏನೆಂದರೆ, ಜಿಎಸ್‌ಟಿ ಅಡಿಯಲ್ಲಿ ತಂಬಾಕು ಮೇಲಿನ ತೆರಿಗೆಗಳನ್ನು ಎಲ್ಲಾ ತಂಬಾಕು ಉತ್ಪನ್ನಗಳಿಗೆ 28ನಲ್ಲಿ ಇರಿಸಲಾಗಿದೆ, ಜೊತೆಗೆ ಸಿಗರೇಟ್ ಮತ್ತು ಹೊಗೆರಹಿತ ಸಿಗರೇಟ್‌ಗಳ ಮೇಲೆ ಮಾತ್ರ ಪರಿಹಾರ ಸೆಸ್ ಇದೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ(ಎನ್‌ಸಿಸಿಡಿ) ಮತ್ತು ಕೇಂದ್ರೀಯ ಅಬಕಾರಿ ಸುಂಕವನ್ನು ಸಹಾ ಸೇರಿಸಲಾಗಿದೆ. ಆದರ ಕೊನೆಗೆ 2021ರ ಆರ್ಥಿಕ ವರ್ಷದಲ್ಲಿ ಒಟ್ಟು ತೆರಿಗೆಗಳು ಸಿಗರೇಟ್‌ಗಳಿಗೆ 52ರಷ್ಟು ಬೀಡಿಗಳ ಮೇಲೆ 22ರಷ್ಟು ಮತ್ತು ಹೊಗೆರಹಿತ ತಂಬಾಕಿನ ಮೇಲೆ 64ರಷ್ಟು ಮಾತ್ರ ವಿಧಿಸಲಾಗುತ್ತಿದೆ.
ನಮ್ಮ ಸರ್ಕಾರ ವಿಧಿಸುತ್ತಿರುವ ತೆರಿಗೆಗಳಿಗೆ ಡಬ್ಲ್ಯುಹೆಚ್‍ಒ ನೀಡಿದ ಶಿಫಾರಸ್ಸಿಗೆ ಅಜಗಜಾಂತರದ ವ್ಯತ್ಯಾಸವಿದೆ. ತಂಬಾಕು ಉತ್ಪನ್ನಗಳು ಅಬಕಾರಿ ಸುಂಕವನ್ನು ಹೆಚ್ಚಿಸುವ ಅವಕಾಶವನ್ನು ಬಳಸಿಕೊಳ್ಳದಿರುವುದು, ತಂಬಾಕು ಉತ್ಪನ್ನಗಳ ಅನಿಯಂತ್ರಿತ ಸೇವನೆಯ ಜೊತೆಗೆ ಗಮನಾರ್ಹ ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ, ಇದು ಸಂಭಾವ್ಯ ಆದಾಯದ ವ್ಯಾವಹಾರಿಕತೆಯ ಮೂಲವನ್ನು ನಿರ್ಲಕ್ಷಿಸುತ್ತದೆ. ಜಿಎಸ್‌ಟಿಯು ಸಿಗರೇಟ್‌ಗಳ ಮೇಲಿನ ತೆರಿಗೆ 54ರಷ್ಟು ರಿಂದ 8ರಷ್ಟಕ್ಕೆ, ಬೀಡಿಗಳ ಮೇಲಿನ ತೆರಿಗೆ 17 ರಿಂದ 1ಕ್ಕೆ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳ ಮೇಲಿನ ಸುಂಕ 59ರಿಂದ 11ಕ್ಕೆ ಇಳಿದನಂತರ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಚಾಲನೆಯಲ್ಲಿದೆ. ಇದು ಭಾರತ ಸರ್ಕಾರಕಕೆ ಭಾರಿ ಆದಾಯ ನಷ್ಟವಾಗಿದೆ ಮತ್ತು ಅದೇ ಸಮಯದಲ್ಲಿ ಬೆಲೆ ಏರಿಕೆ ಮತ್ತು ಶಾಸನಬದ್ಧ ಎಚ್ಚರಿಕೆಯಿಂದ ವಿಧಿಸಲಾದ ಬಿಗುವನ್ನು ಸಡಿಲಿಸುವ ಕಾರ್ಯಕ್ಕೆ ಪ್ರತಿಬಂಧಕವಾಗಿದೆ.
ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ತೆರಿಗೆಗಳ ಹೆಚ್ಚಳ ಸರ್ಕಾರಕ್ಕೆ ಉತ್ತಮ ಆದಾಯವನ್ನು ಗಳಿಸುವಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತೆರಿಗೆ ಮೂಲವು ಕುಗ್ಗಬಹುದು ಆದರೆ ಅದೇ ಸಮಯದಲ್ಲಿ ಆದಾಯವು ಹೆಚ್ಚಾಗುತ್ತದೆ ಮತ್ತು ಕೆಲವು ಗ್ರಾಹಕರಿಗೆ ಬೆಲೆಏರಿಕೆಯಿಂದ ತಂಬಾಕು ಉತ್ಪನ್ನಗಳು ಕೈಗೆಟಕದಿರುವುದರಿಂದ ಇದು ಗ್ರಾಹಕರ ಆರೋಗ್ಯದ ಮೇಲೆ ಬಹಳ ಮುಖ್ಯವಾದ ಧನಾತ್ಮಕ ಆರೋಗ್ಯ ಪರಿಣಾಮವನ್ನು ಬೀರುತ್ತದೆ, ಕನಿಷ್ಠ ಕಡಿಮೆ ಆದಾಯದ ಗುಂಪಿನ ಗ್ರಾಹಕರಿಂದ ಈ ಉತ್ಪನ್ನಗಳ ನಿಯಮಿತ ಬಳಕೆಯನ್ನು ತಪ್ಪಿಸುತ್ತದೆ. ಸಿಗರೇಟ್ ಮತ್ತು ಹೊಗೆರಹಿತ ಸಿಗರೇಟ್‌ಗಳ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 75 ಮತ್ತು 90ರವರೆಗೆ ಹೆಚ್ಚಿಸಬಹುದು. ಬೀಡಿಗಳ ಮೇಲಿನ ಅಬಕಾರಿ ಸುಂಕವನ್ನು ಸುಮಾರು 50ರಷ್ಟು ಹೆಚ್ಚಿಸಬಹುದು ಮತ್ತು ಇದು ಗ್ರಾಮೀಣ ಪ್ರದೇಶಗಳಲ್ಲಿನ ಕಡಿಮೆ-ಆದಾಯದ ಗುಂಪುಗಳ ಆರೋಗ್ಯ ನಿಯತಾಂಕಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ.
ಅಂತಹ ಪ್ರಸ್ತಾಪದ ವಿರುದ್ಧದ ಪ್ರಮುಖ ವಾದವೆಂದರೆ ಬೀಡಿ ಮತ್ತು ಸಿಗರೇಟ್ ಉದ್ಯಮದಲ್ಲಿ ಉದ್ಯೋಗ ನಷ್ಟವಾಗುತ್ತದೆ ಮತ್ತು ಈ ಉತ್ಪನ್ನಗಳ ಮಾರುಕಟ್ಟೆಯಲ್ಲಿನ ಸಣ್ಣ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂಬುದು. ತಂಬಾಕು ಉತ್ಪನ್ನಗಳ ಬಳಕೆಯ ಅಭ್ಯಾಸದಿಂದ ಹೊರಬರಲು ಅಥವಾ ಉತ್ಪಾದನೆ ಮತ್ತು ಮಾರ್ಕೆಟಿಂಗ್‌ನಲ್ಲಿ ಭಾಗವಹಿಸುವವರಿಗೆ ಪರ್ಯಾಯ ಉದ್ಯೋಗ ಮತ್ತು ಪ್ರೋತ್ಸಾಹ ನೀಡುವ ಮೂಲಕ ಅಂತಹ ಉದ್ಯೋಗ ನಷ್ಟವನ್ನು ಸರಿದೂಗಿಸುವುದು ಅತ್ಯಗತ್ಯ. ಈ ತೆರಿಗೆ ಪ್ರಸ್ತಾವನೆಗಳಿಂದ ಉತ್ಪತ್ತಿಯಾಗುವ ಆದಾಯವನ್ನು ಗೃಹ ವಲಯದಲ್ಲಿ ಸಹಾಯಕ ಗ್ರಾಮೀಣ ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಸೃಷ್ಟಿಸಲು ಬಳಸಿಕೊಳ್ಳಬಹುದಾಗಿದೆ. ಉದ್ಯೋಗ ನಷ್ಟದ ಪರಿಹಾರವು ತಂಬಾಕು ಉತ್ಪನ್ನಗಳ ತಯಾರಿ ಕ್ಷೇತ್ರದಲ್ಲಿರುವ ಕಾರ್ಮಿಕರ ಕಲ್ಯಾಣ ಕ್ರಮಗಳು ಕೈಗೊಳ್ಳಲು ಬಹಳ ಹೆಚ್ಚುಕಾಲ ತೆಗೆದುಕೊಳ್ಳುತ್ತದೆ. ಹೆಚ್ಚುವರಿ ಆದಾಯವು ಸುಮಾರು ರೂ. 500 ಶತಕೋಟಿಗೆ ತಲುಪುವ ಸಾಧ್ಯತೆ ಇದೆ. ತಂಬಾಕು ಉತ್ಪನ್ನಗಳನ್ನು ಕೈಗೆಟುಕದಂತೆ ಮಾಡುವ ಕ್ರಮಗಳು ಖಂಡಿತವಾಗಿಯೂ ತಂಬಾಕು ಮತ್ತು ಅದರ ಉತ್ಪನ್ನಗಳಿಂದ ಉಂಟಾಗುವ ರೋಗಗಳಿಂದ ಮರಣ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಅಂದಾಜಿಸಿದರೆ ಅಂತಹ ಜೀವಗಳನ್ನು ಉಳಿಸಿದ ಮೌಲ್ಯವು ಸಮಾಜದ ಕಲ್ಯಾಣಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತದೆ. ಆದ್ದರಿಂದ ಪ್ರತಿ ಬೀಡಿಯ ಬೆಲೆ ಒಂದು ರೂಪಾಯಿ ಮತ್ತು ಪ್ರತಿ ಸಿಗರೇಟಿನ ಬೆಲೆಯನ್ನು ರೂ. 12 ರೂಪಾಯಿ ಹೆಚ್ಚಿಸುವ ಬಗ್ಗೆ ಮತ್ತು ಹೊಗೆರಹಿತ ಸಿಗರೇಟ್‌ಗಳ ಬೆಲೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಇದು ಮೂರು ಪ್ರಮುಖ ಧನಾತ್ಮಕ ಪರಿಣಾಮಗಳನ್ನು ಹೊಂದಿರುವ ಪ್ರಗತಿಪರ ತೆರಿಗೆ ಪ್ರಸ್ತಾವನೆಯಾಗಿದೆ. ಮೊದಲನೆಯದಾಗಿ, ಇದು ಮಧ್ಯಮ ಮತ್ತು ಕಡಿಮೆ-ಆದಾಯದ ಗುಂಪುಗಳಲ್ಲಿನ ಗ್ರಾಹಕರನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಇದರಿಂದಾಗಿ ಹೆಚ್ಚು ಸಂಖ್ಯೆಯ ಜೀವಗಳನ್ನು ಉಳಿಸುತ್ತದೆ.
ಎರಡನೆಯದಾಗಿ, ಇದು ಭಾರತ ಸರ್ಕಾರಕ್ಕೆ ಗಮನಾರ್ಹ ಆದಾಯವನ್ನು ಗಳಿಸಿಕೊಡುತ್ತದೆ ಮತ್ತು ಮೂರನೆಯದಾಗಿ ಈ ಹಂತವು ಸ್ಥಳಾಂತರಗೊಂಡ ಕಾರ್ಮಿಕರು ಅಥವಾ ಸಂಬಂಧಿತ ಉದ್ಯಮಗಳಲ್ಲಿನ ಕಾರ್ಮಿಕರ ಕಲ್ಯಾಣ ಕ್ರಮಗಳನ್ನು ಕೈಗೊಳ್ಳಲು ಹಣವನ್ನು ಒದಗಿಸುತ್ತದೆ. ಭಾರತ ಸರ್ಕಾರವು ಕಡಿಮೆ ಆದಾಯದ ಗುಂಪುಗಳ ಕಲ್ಯಾಣಕ್ಕಾಗಿ ಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಅನೇಕ ಜೀವಗಳನ್ನು ಉಳಿಸುವ ಮೂಲಕ ಈ ಗುಂಪುಗಳಲ್ಲಿ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ಬೆಂಗಳೂರು ಮಾಜಿ ನಿರ್ದೇಶಕರೂ ಆಗಿದ್ದ ಆರ್ ಎಸ್ ದೇಶ್‌ಪಾಂಡೆ ಹೇಳಿದರು.