
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಆಟೊಮೊಬೈಲ್ ಉದ್ಯಮ ಸಂಕಷ್ಟದಲ್ಲಿದೆ ಎನ್ನುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಹಲವು ಆಟೊಮೊಬೈಲ್ ಸಂಸ್ಥೆಗಳ ಸೇಲ್ಸ್ ಕುಸಿತ ಕಂಡಿರುವುದು ಅಂಕಿಅಂಶಗಳಿಂದ ತಿಳಿದುಬಂದಿತ್ತು. ಕೊರೊನಾ ಸಮಯದಲ್ಲಿ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿತ್ತು.
ಇದನ್ನೂ ಓದಿ: ಟಾಟಾ ಮೋಟಾರ್ಸ್ ನಿಂದ ಸಿಎನ್ಜಿ ಚಾಲಿತ ಟಿಗೊರ್ ಮತ್ತು ಟಿಯಾಗೊ ಬಿಡುಗಡೆ, ಆರಂಭಿಕ ಬೆಲೆ 6.7 ಲಕ್ಷ ರೂ.
ಹೀಗಿರುವಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಜನಸಾಮಾನ್ಯರು ಕಾರುಕೊಳ್ಳುವ ದಿನಾಂಕವನ್ನು ಮುಂದೂಡುತ್ತಿದ್ದರೂ ದುಬಾರಿ ಬೆಲೆಯ ಸೂಪರ್ ಕಾರುಗಳ ಮಾರಾಟ ಮಾತ್ರ ಏರಿಕೆಯಾಗಿದೆ.
ಇದನ್ನೂ ಓದಿ: ಬಣ್ಣ ಬದಲಾಯಿಸುವ ವಿಶ್ವದ ಮೊದಲ ಕಾರು: ಬಿಎಂಡಬ್ಲ್ಯು iX Flow
ಜಗತ್ತಿನ ಪ್ರಖ್ಯಾತ ಐಷಾರಾಮಿ ಸೂಪರ್ ಕಾರು ತಯಾರಕ ಸಂಸ್ಥೆಗಳಾದ ಲ್ಯಾಂಬೋರ್ಗಿನಿ ಮತ್ತು ಪೋರ್ಶಾ 2021ರಲ್ಲಿ ದೇಶದಲ್ಲಿ ದಾಖಲೆಯ ಮಾರಾಟ ದಾಖಲಿಸಿದೆ.
ಇದನ್ನೂ ಓದಿ: ಬೌನ್ಸ್ ನಿಂದ ಕಡಿಮೆ ದರದ ಇ-ಬೈಕ್ ಬಿಡುಗಡೆ: ಬೆಲೆ ಕೇವಲ 45099 ರೂ. ನಿಂದ ಪ್ರಾರಂಭ
2021ರಲ್ಲಿ ಪೋರ್ಶಾ ಸಂಸ್ಥೆ 474 ಸ್ಪೋರ್ಟ್ಸ್ ಕಾರುಗಳನ್ನು ಡೆಲಿವರಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಾರು ಮಾರಾಟ ಶೇ. 60 ಪ್ರತಿಶತ ಹೆಚ್ಚಿದೆ. ಪೋರ್ಶಾ ಕಾರುಗಳು 80 ಲಕ್ಷದಿಂದ 3 ಕೋಟಿ ರೂ. ಗಳವರೆಗೆ ಬೆಲೆ ಹೊಂದಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ: ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆ
ಲ್ಯಾಂಬೊರ್ಗಿನಿ, ಬಿಎಂಡಬ್ಲ್ಯು ಸೇರಿದಂತೆ ಹಲವು ಐಷಾರಾಮಿ ಕಾರುಗಳ ಮಾರಾಟವೂ ಹೆಚ್ಚಳ ಕಂಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಮಾರಾಟ ಕುಸಿತ; ಡಿಸೆಂಬರ್ನಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ