ಭಾರತದ ಆರ್ಥಿಕತೆ ಬಗ್ಗೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಿಷ್ಟು...
ಭಾರತದ ಆರ್ಥಿಕತೆ ಬಗ್ಗೆ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮಾತನಾಡಿದ್ದು ದೇಶದ ಆರ್ಥಿಕತೆಯಲ್ಲಿ ಕೆಲವು ಆಶಾದಾಯಕ ಅಂಶಗಳಿದ್ದು, ಅಂತೆಯೇ ಕೆಲವು ಸವಾಲುಗಳೂ ಇವೆ ಸರ್ಕಾರ ವೆಚ್ಚಗಳೆಡೆಗೆ ಹೆಚ್ಚು ಜಾಗರೂಕವಾಗಿರಬೇಕು ಎಂದು ಹೇಳಿದ್ದಾರೆ.
Published: 23rd January 2022 05:11 PM | Last Updated: 24th January 2022 01:39 PM | A+A A-

ರಘುರಾಮ್ ರಾಜನ್
ಭಾರತದ ಆರ್ಥಿಕತೆ ಬಗ್ಗೆ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮಾತನಾಡಿದ್ದು ದೇಶದ ಆರ್ಥಿಕತೆಯಲ್ಲಿ ಕೆಲವು ಆಶಾದಾಯಕ ಅಂಶಗಳಿದ್ದು, ಅಂತೆಯೇ ಕೆಲವು ಸವಾಲುಗಳೂ ಇವೆ ಸರ್ಕಾರ ವೆಚ್ಚಗಳೆಡೆಗೆ ಹೆಚ್ಚು ಜಾಗರೂಕವಾಗಿರಬೇಕು ಎಂದು ಹೇಳಿದ್ದಾರೆ.
ಆರ್ಥಿಕ ಕ್ಷೇತ್ರದಲ್ಲಿ ತಮ್ಮ ಸ್ಪಷ್ಟ ದೃಷ್ಟಿಕೋನಗಳಿಂದಲೇ ಖ್ಯಾತಿ ಪಡೆದಿರುವ ರಘುರಾಮ್ ರಾಜನ್, ಕೊರೋನಾ ಪ್ಯಾಂಡಮಿಕ್ ನಿಂದ ಹೊಡೆತ ತಿಂದಿರುವ ಆರ್ಥಿಕತೆ ಕೆ-ರೂಪದ ಚೇತರಿಕೆಯನ್ನು ತಡೆಯುವುದಕ್ಕೆ ಹೆಚ್ಚಿನದ್ದನ್ನು ಮಾಡಬೇಕಿದೆ ಎಂದು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬೇಡಿಕೆ ಕುಸಿದಿದ್ದ ಪರಿಣಾಮ ಪುಟಿದೇಳುವ ಸ್ಥಿತಿಯಲ್ಲಿ ಪರಿಗಣನೆಗೆ ಬರುವ ಮಧ್ಯಮ ವರ್ಗ, ಸಣ್ಣ, ಮಧ್ಯಮ ವರ್ಗದ ಮೇಲಾಗುವ ಆರ್ಥಿಕ ಹೊರೆಯ ಗುರುತಿಗೆ ಸಂಬಂಧಿಸಿದಂತೆ ನನಗೆ ಆತಂಕವಿದೆ. ದುರ್ಬಲ ಖರೀದಿಯಲ್ಲಿನ ದುರ್ಬಲ ಬೆಳವಣಿಗೆ ಪ್ರಮುಖವಾಗಿ ಸಾಮೂಹಿಕ ಬಳಕೆಯ ಸರಕುಗಳಲ್ಲಿನ ಖರೀದಿಯ ಬೆಳವಣಿಗೆ ಕುಂಠಿತವಾಗಿರುವುದು ಇವೆಲ್ಲದರ ಲಕ್ಷಣವಾಗಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಇನ್ನು ಆಶಾದಾಯಕ ಸಂಗತಿಗಳೂ ಇದ್ದು, ಬೃಹತ್ ಸಂಸ್ಥೆಗಳ ಆರೋಗ್ಯಕರ ಬೆಳವಣಿಗೆ ಹಾಗೂ ಐಟಿ-ಐಟಿ ಚಾಲಿತ ಸೆಕ್ಟರ್ ಗಳ ಉದ್ಯಮ ಪುಟಿದೆದ್ದಿರುವುದು, ಯೂನಿಕಾರ್ನ್ ಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಭಾರತದ ಆರ್ಥಿಕತೆ ಮಟ್ಟಿಗೆ ಆಶಾದಾಯಕವಾದ ಸಂಗತಿ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.