ಏರ್ ಟೆಲ್ ನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದು
ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್ ಟೆಲ್ ಮತ್ತು ಜಾಗತಿಕ ಟೆಕ್ ಕಂಪನಿ ಗೂಗಲ್ ನಡುವೆ ಮುಂದಿನ ಐದು ವರ್ಷಗಳ ಅವಧಿಗೆ ವಾಣಿಜ್ಯ ಒಪ್ಪಂದವೇರ್ಪಟ್ಟಿದ್ದು, ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದಾಗಿದೆ.
Published: 28th January 2022 12:41 PM | Last Updated: 28th January 2022 01:12 PM | A+A A-

ಏರ್ ಟೆಲ್, ಗೂಗಲ್ ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್ ಟೆಲ್ ಮತ್ತು ಜಾಗತಿಕ ಟೆಕ್ ಕಂಪನಿ ಗೂಗಲ್ ನಡುವೆ ಮುಂದಿನ ಐದು ವರ್ಷಗಳ ಅವಧಿಗೆ ವಾಣಿಜ್ಯ ಒಪ್ಪಂದವೇರ್ಪಟ್ಟಿದ್ದು, ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದಾಗಿದೆ.
ಭಾರತದಲ್ಲಿ ಡಿಜಿಟಲ್ ಪರಿಸರ ವ್ಯವಸ್ಥೆಯ ಭಾಗವಾಗಿ ಏರ್ ಟೆಲ್ ನ ಪ್ರತಿ ಷೇರಿಗೆ ರೂ. 734 ಮೊತ್ತದಲ್ಲಿ 700 ಮಿಲಿಯನ್ ಡಾಲರ್ ನ್ನು ಗೂಗಲ್ ಕಂಪನಿ ಹೂಡಿಕೆ ಮಾಡಲಿದೆ ಏರ್ ಟೆಲ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಇತರೆ ವಾಣಿಜ್ಯ ಒಪ್ಪಂದಗಳಲ್ಲಿ ಸುಮಾರು 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. ಭಾರತದಲ್ಲಿ ಡಿಜಿಟಲ್ ಪರಿಸರ ವ್ಯವಸ್ಥೆ ವೃದ್ಧಿ ಗುರಿಯೊಂದಿಗೆ ಗೂಗಲ್ ಕಂಪನಿಯೊಂದಿಗೆ ಈ ಒಪ್ಪಂದ ಮಾಡಿಕೊಂಡಿರುವುದಾಗಿ ಏರ್ ಟೆಲ್ ಕಂಪನಿ ಮಾಹಿತಿ ನೀಡಿದೆ.