ಹೋಟೆಲ್, ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ: ಸಿಸಿಪಿಎ ಆದೇಶ
ಹೋಟೆಲ್, ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕ ವಿಧಿಸದಂತೆ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿದೆ. ಒಂದು ವೇಳೆ ಈ ಆದೇಶ ಉಲ್ಲಂಘನೆಯಾದಲ್ಲಿ ಗ್ರಾಹಕರು ದೂರು ದಾಖಲಿಸಲು ಅವಕಾಶ ನೀಡಿದೆ.
Published: 04th July 2022 08:29 PM | Last Updated: 05th July 2022 01:24 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಹೋಟೆಲ್, ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕ ವಿಧಿಸದಂತೆ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿದೆ. ಒಂದು ವೇಳೆ ಈ ಆದೇಶ ಉಲ್ಲಂಘನೆಯಾದಲ್ಲಿ ಗ್ರಾಹಕರು ದೂರು ದಾಖಲಿಸಲು ಅವಕಾಶ ನೀಡಿದೆ.
ದೂರುಗಳು ಹೆಚ್ಚುತ್ತಿರುವ ನಡುವೆ, ಅನ್ಯಾಯಯುತ ವ್ಯಾಪಾರ ಪದ್ಧತಿ ತಡೆಗೆ ಪ್ರಾಧಿಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ, ಹೋಟೆಲ್, ರೆಸ್ಟೋರೆಂಟ್ ಗಳು ಸ್ವಯಂ ಚಾಲಿತವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಅಥವಾ ಬಿಲ್ ನಲ್ಲಿಯೇ ಕಡಿತ ಮಾಡುವಂತಿಲ್ಲ. ಇತರ ಯಾವುದೇ ಹೆಸರಿನಲ್ಲಿ ಸೇವಾ ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಹೇಳಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಗಳು ಸೇವಾ ಶುಲ್ಕ ನೀಡುವಂತೆ ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಸ್ವಯಂ ಪ್ರೇರಿತರಾಗಿ ಗ್ರಾಹಕರು ಸೇವಾ ಶುಲ್ಕ ನೀಡಬಹುದು, ಅದು ಅವರಿಗೆ ಬಿಟ್ಟ ಆಯ್ಕೆಯಾಗಿದೆ ಎಂದು ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಲಾಗಿದೆ. ಸೇವಾ ಶುಲ್ಕ ಸಂಗ್ರಹ ಆಧಾರದ ಮೇಲೆ ಗ್ರಾಹಕರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸುವಂತಿಲ್ಲ ಅಥವಾ ವಿನಾಯಿತಿ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.