ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟ 80.05 ರೂ. ಗೆ ಕುಸಿತ, ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸಂಕಷ್ಟ?

ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾದ ನಂತರ ಡಾಲರ್ ಎದುರು ರೂಪಾಯಿ ಬೆಲೆ 7 ಪೈಸೆಯಷ್ಟು ಪ್ರಪಾತಕ್ಕೆ ಇಳಿದಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 80 ರೂಪಾಯಿ 05 ಪೈಸೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾದ ನಂತರ ಡಾಲರ್ ಎದುರು ರೂಪಾಯಿ ಬೆಲೆ 7 ಪೈಸೆಯಷ್ಟು ಪ್ರಪಾತಕ್ಕೆ ಇಳಿದಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 80 ರೂಪಾಯಿ 05 ಪೈಸೆಯಾಗಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭಗೊಂಡಾಗ ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಬೆಲೆ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 80 ರೂಪಾಯಿಗಳಾದವು. ನಂತರ ವಹಿವಾಟು ಮುಂದುವರಿಯುತ್ತಾ ಹೋದಂತೆ 7 ಪೈಸೆ ಇಳಿಕೆಯಾಗಿ 80 ರೂಪಾಯಿ 05 ಪೈಸೆಯಲ್ಲಿ ನಿಂತಿತು. 

ಆರಂಭಿಕ ವಹಿವಾಟಿನಲ್ಲಿ ಸ್ಥಳೀಯ ಘಟಕ ಅಮೆರಿಕ ಕರೆನ್ಸಿ ಎದುರು 79 ರೂಪಾಯಿ 90 ಪೈಸೆಯನ್ನು ತಲುಪಿತು. ಸೋಮವಾರ, ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಪಟ್ಟುಬಿಡದ ವಿದೇಶಿ ನಿಧಿಯ ಹೊರಹರಿವಿನ ನಡುವೆ 16 ಪೈಸೆ ಕಡಿಮೆಯಾಗಿ 79 ರೂಪಾಯಿ 98 ಪೈಸೆಯಲ್ಲಿ ದಿನದ ವಹಿವಾಟು ಮುಕ್ತಾಯಗೊಂಡಿತು.  ಇದೇ ಮೊದಲ ಬಾರಿಗೆ ಯುಎಸ್ ಡಾಲರ್ ವಿರುದ್ಧ ಭಾರತದ ರೂಪಾಯಿ ಬೆಲೆ 80 ರೂಪಾಯಿಗಿಂತ ಕಡಿಮೆಯಾಗಿದೆ.

ಇಂದು ಮಂಗಳವಾರ ಬೆಳಗ್ಗೆ ದುರ್ಬಲವಾಗಿ ವಹಿವಾಟು ಆರಂಭಿಸಿದ ನಂತರ ರೂಪಾಯಿ ಹೊರಹರಿವು ಮತ್ತು ಹೆಚ್ಚಿನ ತೈಲ ಬೆಲೆಗಳಿಂದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯಿತು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಸ್ಥಿಕೆಯ ಕೊರತೆಯು ಸಹ ಹೊಡೆತ ಬೀಳಲು ಮತ್ತೊಂದು ಕಾರಣವಾಗಬಹುದು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.35ರಷ್ಟು ಇಳಿಕೆಯಾಗಿ ಡಾಲರ್ ಎದುರು ಪ್ರತಿ ಬ್ಯಾರಲ್ ಗೆ 105.90 ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com