ಐದನೇ ದಿನವೂ ಮುಗ್ಗರಿಸಿದ ಷೇರು ಮಾರುಕಟ್ಟೆ: ಸೆನ್ಸೆಕ್ಸ್, ನಿಫ್ಟಿ 1 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ!

ಯುಎಸ್ ಫೆಡರಲ್ ರಿಸರ್ವ್ ದರವನ್ನು ಭಾರೀ ಏರಿಕೆ ಮಾಡಲಾಗಿದ್ದು ಇದರ ಪರಿಣಾಮವಾಗಿ ಷೇರು ಮಾರುಕಟ್ಟೆ ಸತತ ಐದನೇ ದಿನವೂ ಮುಗ್ಗರಿಸಿದೆ. 
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಮುಂಬೈ: ಯುಎಸ್ ಫೆಡರಲ್ ರಿಸರ್ವ್ ದರವನ್ನು ಭಾರೀ ಏರಿಕೆ ಮಾಡಲಾಗಿದ್ದು ಇದರ ಪರಿಣಾಮವಾಗಿ ಷೇರು ಮಾರುಕಟ್ಟೆ ಸತತ ಐದನೇ ದಿನವೂ ಮುಗ್ಗರಿಸಿದೆ. 

ಇಂದು ಬೆಳಗ್ಗೆ ಉತ್ತಮ ಆರಂಭ ಸಿಕ್ಕರೂ ಅಂತ್ಯದ ವೇಳೆಗೆ ಭಾರೀ ನಷ್ಟ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ 1045.60 ಅಂಕ ಅಥವಾ ಶೇಕಡ 1.99ರಷ್ಟು ಕುಸಿತ ಕಂಡಿದ್ದು 51,495.79ಕ್ಕೆ ತಲುಪಿದೆ. ಇದೇ ವೇಳೆ ನಿಫ್ಟಿ 331.55 ಅಂಕ ಅಥವಾ ಶೇ. 2.11ರಷ್ಟು ಕುಸಿದಿದ್ದು 15,360.60ಕ್ಕೆ ತಲುಪಿದೆ. ಕಳೆದ ಒಂದು ವರ್ಷದಲ್ಲೇ ಷೇರು ಮಾರುಕಟ್ಟೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 

ಇಂದಿನ ಷೇರು ಮಾರುಕಟ್ಟೆ ಕುಸಿತದಿಂದ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಎಚ್ಡಿಎಫ್ ಸಿ ಟ್ವಿನ್ಸ್ ಭಾರೀ ನಷ್ಟ ಕಂಡಿದೆ. ಇನ್ನು ನೆಸ್ಲೆ ಇಂಡಿಯಾವನ್ನು ಹೊರತುಪಡಿಸಿ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ವಿಪ್ರೋ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ ಮತ್ತು ಬಜಾಜ್ ಫಿನ್‌ಸರ್ವ್ ನ ಷೇರುಗಳು ಶೇ.6.04 ರಷ್ಟು ಕುಸಿತ ಕಂಡಿವೆ.

'ಈ ಪ್ರಸ್ತುತ ಸನ್ನಿವೇಶದಲ್ಲಿ, ಸುರಕ್ಷಿತ ವಲಯಗಳು ಹಣದುಬ್ಬರ ಮತ್ತು ಹಣಕಾಸು ಮತ್ತು ಸೇವೆಗಳಂತಹ ಆಕ್ರಮಣಕಾರಿ ನೀತಿಯಿಂದ ಕಡಿಮೆ ಪರಿಣಾಮ ಬೀರುತ್ತವೆ. ಐಟಿ, ಫಾರ್ಮಾ ಮತ್ತು ಟೆಲಿಕಾಂನಂತಹ ರಕ್ಷಣಾತ್ಮಕ ಅಂಶಗಳು ದೀರ್ಘಾವಧಿಯ ಆಧಾರದ ಮೇಲೆ ಉಪಯುಕ್ತವಾಗಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ ನ ವಿನೋದ್ ನಾಯರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com