2021ರಲ್ಲಿ ಆನಂದ್ ಸುಬ್ರಹ್ಮಣ್ಯನ್ ಪತ್ನಿಗೆ ಚೆನ್ನೈ ಬಂಗಲೆ ಮಾರಿದ್ದ ಚಿತ್ರಾ ರಾಮಕೃಷ್ಣ!
ಚಿತ್ರಾ ರಾಮಕೃಷ್ಣ, ಇತ್ತೀಚೆಗೆ ಅತ್ಯಂತ ಸುದ್ದಿಯಲ್ಲಿರುವ ಹೆಸರು, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE)ದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ನಿಗೂಢ ಹಿಮಾಲಯ ಬಾಬಾ ಅವರಿಗೆ ರಹಸ್ಯವಾಗಿ ಷೇರು ವಿನಿಮಯ ಕೇಂದ್ರದ ಮಾಹಿತಿಗಳನ್ನು ಹಂಚಿಕೊಂಡಿದ್ದರು ಎಂಬುದು ಮೇಲ್ನೋಟದ ಆರೋಪವಾಗಿದೆ.
Published: 01st March 2022 12:18 PM | Last Updated: 01st March 2022 01:11 PM | A+A A-

ಚೆನ್ನೈಯ ಅಲ್ವಾರ್ ಪೇಟೆಯ ವಿಶ್ರಾಂತಿ ಬಂಗಲೆ
ಚಿತ್ರಾ ರಾಮಕೃಷ್ಣ, ಇತ್ತೀಚೆಗೆ ಅತ್ಯಂತ ಸುದ್ದಿಯಲ್ಲಿರುವ ಹೆಸರು, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE)ದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ನಿಗೂಢ ಹಿಮಾಲಯ ಬಾಬಾ ಅವರಿಗೆ ರಹಸ್ಯವಾಗಿ ಷೇರು ವಿನಿಮಯ ಕೇಂದ್ರದ ಮಾಹಿತಿಗಳನ್ನು ಹಂಚಿಕೊಂಡಿದ್ದರು ಎಂಬುದು ಮೇಲ್ನೋಟದ ಆರೋಪವಾಗಿದೆ.
ಇದೀಗ ಮತ್ತೊಂದು ವಿಚಾರ ಬಹಿರಂಗವಾಗಿದ್ದು ಚಿತ್ರಾ ರಾಮಕೃಷ್ಣ ಅವರು ಚೆನ್ನೈಯ ಸೀತಮ್ಮಳ್ ಕಾಲೊನಿಯಲ್ಲಿರುವ ಮನೆಯನ್ನು ಆನಂದ್ ಸುಬ್ರಹ್ಮಣ್ಯಂ ಅವರ ಪತ್ನಿ ಸುನಿತಾ ಆನಂದ್ ಗೆ ಕಳೆದ ವರ್ಷ ಫೆಬ್ರವರಿ 23ರಂದು 3.2 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರಾ ಮತ್ತು ಹಿಮಾಲಯನ್ ಬಾಬಾ ನಡುವಿನ ರಹಸ್ಯ ಇಮೇಲ್ ಸಂಭಾಷಣೆ ಬಯಲಿನ ಕೇಂದ್ರ ವ್ಯಕ್ತಿ ಈ ಆನಂದ್ ಸುಬ್ರಹ್ಮಣ್ಯನ್.
2081 ಚದರಡಿ ಎತ್ತರದ ಫ್ಲ್ಯಾಟ್ ಬಿಳಿ ಬಣ್ಣದಲ್ಲಿದ್ದು, 5 ಅಂತಸ್ತಿನ ಕಟ್ಟಡವಾಗಿದೆ. ವಿಶ್ರಾಂತಿ ಎಂದು ಹೆಸರಿಡಲಾಗಿದೆ. ಕೇವಲ ನಾಲ್ಕು ಕುಟುಂಬಗಳು ವಾಸವಿರುವ ಸಂಕೀರ್ಣದಲ್ಲಿ ಕನಿಷ್ಠ ಒಂದು ಜಾಗ್ವಾರ್ ಮತ್ತು ಎರಡು ಬಿಎಂಡಬ್ಲ್ಯು ಕಾರುಗಳನ್ನು ನಿಲ್ಲಿಸಿರುವುದು ಕಂಡುಬಂದಿದೆ. ತಮಿಳು ಚಿತ್ರರಂಗದ ಅತ್ಯಂತ ಪ್ರಸಿದ್ಧ ಹಾಸ್ಯನಟರೊಬ್ಬರು ಈ ಇಲ್ಲಿ ವಾಸಿಸುತ್ತಿದ್ದಾರೆ.
ಸಿಬಿಐನಿಂದ ಬಂಧಿಸಲ್ಪಟ್ಟು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಗಿರುವ ಆನಂದ್ ಸುಬ್ರಹ್ಮಣ್ಯನ್ ಇಲ್ಲಿ 2012 ರಿಂದ ತನ್ನ ಹೆಂಡತಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜುಲೈ 14, 2010 ರಂದು ಮೂಲತಃ ಚಿತ್ರಾ ಅವರ ಹೆಸರಿನಲ್ಲಿ ನೋಂದಾಯಿಸಲಾದ ಫ್ಲಾಟ್‌ನಲ್ಲಿ ಆನಂದ್ ವಾಸವಾಗಿದ್ದರು. 11 ವರ್ಷಗಳ ನಂತರ ಅವರ ಪತ್ನಿಗೆ ಮಾರಾಟ ಮಾಡಿದರು. ಚಿತ್ರಾ ಮತ್ತು ಆನಂದ್ ಅವರ ಸಂಬಂಧಗಳು ಅವರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿಂದಾಚೆಗೆ ಚಾಚಿಕೊಂಡಿದೆ (ಏಪ್ರಿಲ್ 2013-ಅಕ್ಟೋಬರ್ 2016) ಎಂಬುದಕ್ಕೆ ಪುರಾವೆಯಿದೆ.
ಆನಂದ್ "ಜಿಪುಣ"ರಾಗಿದ್ದರೂ ಉತ್ತಮ ಒಡನಾಟ ಹೊಂದಿರುವವರು. ಹಣೆಯ ಮೇಲೆ ಸದಾ ವಿಭೂತಿ ಹಚ್ಚಿಕೊಳ್ಳುತ್ತಿದ್ದ ಅವರು ಕಾಲೋನಿ ಸಂಘದ ಲೆಕ್ಕಪತ್ರಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದರು. ಕಾನೂನು ಒಳಗೊಂಡ ಕೆಲವು ವಿಷಯಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದರು.
ಯಾರೂ ಆನಂದ್ ಅವರ ಮನೆಗೆ ಹೋಗಿಲ್ಲ. ಅವರ ಬಗ್ಗೆ ಎಲ್ಲವೂ ರಹಸ್ಯವಾಗಿತ್ತು. ಅವರು ಯಾರ ಮುಂದೆಯೂ ಮಾತನಾಡುತ್ತಿರಲಿಲ್ಲ ಎಂದು ಆನಂದ್ ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದ ನಿವಾಸಿಯೊಬ್ಬರು ಹೇಳುತ್ತಾರೆ. ಬಹುಮುಖ್ಯವಾಗಿ, ಬಂಧನದ ಮೊದಲು ಯಾರೂ ಷೇರು ವಿನಿಮಯ ಕೇಂದ್ರದಲ್ಲಿ ತಮ್ಮ ಪಾತ್ರಗಳ ಬಗ್ಗೆ ಯಾವುದೇ ಸೂಚನೆಯನ್ನು ಹೊಂದಿರಲಿಲ್ಲ.