140 ಡಾಲರ್ ಗಡಿಯತ್ತ ಕಚ್ಚಾ ತೈಲ ದರ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಪ್ರತೀ ಲೀಟರ್ ಗೆ ಕನಿಷ್ಟ 15 ರೂ. ಏರಿಕೆ ಸಾಧ್ಯತೆ!
ರಷ್ಯಾ-ಉಕ್ರೇನ್ ಸಂಘರ್ಷದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕನಿಷ್ಠ 15 ರೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published: 08th March 2022 10:11 AM | Last Updated: 08th March 2022 01:12 PM | A+A A-

ಸಂಗ್ರಹ ಚಿತ್ರ
ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕನಿಷ್ಠ 15 ರೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ದರ ಭಾರೀ ಹೆಚ್ಚಳ ಸಾಧ್ಯತೆ: ಎಷ್ಟು ಏರಲಿದೆ ಗೊತ್ತಾ?
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಳೆದೊಂದು ವಾರಗಳ ಅಂತರದಲ್ಲಿ ಕಚ್ಚಾ ತೈಲ ದರ ಪ್ರತೀ ಬ್ಯಾರೆಲ್ ಗೆ 140 ಡಾಲರ್ ಗಡಿಯತ್ತ ಸಾಗಿದೆ. ಅಲ್ಲದೆ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ನಾಲ್ಕು ತಿಂಗಳ ಕಾಲ ದರವನ್ನು ಸ್ಥಿರವಾಗಿರಿಸಿಕೊಳ್ಳುವುದರಿಂದ ಸಂಗ್ರಹವಾದ ನಷ್ಟವನ್ನು ಸರಿದೂಗಿಸಲು ತೈಲ ಕಂಪನಿಗಳು ತಯಾರಿ ನಡೆಸುತ್ತಿದ್ದು, ಈ ವಾರದಲ್ಲೇ ತೈಲೋತ್ಪನ್ನಗಳ ದರಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉಕ್ರೇನ್ ಕದನ: ರಷ್ಯಾಗೆ ಸ್ಮಾರ್ಟ್‌ಫೋನ್ ರಫ್ತು ಸ್ಥಗಿತಗೊಳಿಸಲು ಸ್ಯಾಮ್ ಸಂಗ್ ಕಂಪನಿ ನಿರ್ಧಾರ
ಇದಕ್ಕೆ ಇಂಬು ನೀಡುವಂತೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಈ ವಾರದಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಪ್ರತಿ ಬ್ಯಾರೆಲ್‌ಗೆ 13 ವರ್ಷಗಳಲ್ಲೇ ಗರಿಷ್ಠ 140 ಡಾಲರ್ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಈ ಬೆಲೆಯನ್ನು ಸರಿದೂಗಿಸಿಕೊಳ್ಳಲು ಪ್ರತೀ ಲೀಟರ್‌ಗೆ 15 ರೂ ಹೆಚ್ಚಿಸಬೇಕಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಎಸ್ ಬಿಐನಲ್ಲಿ ರಷ್ಯಾ ಸಂಸ್ಥೆಗಳ ವಹಿವಾಟುಗಳು ಸ್ಥಗಿತ!
ಇತ್ತ ಅಮೆರಿಕ ತೈಲ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ನಲ್ಲಿ ಭಾನುವಾರ ಸಂಜೆ ಪ್ರತಿ ಬ್ಯಾರೆಲ್ ದರ 130.50 ಡಾಲರ್ ಗೆ ಏರಿಕೆಯಾಗಿತ್ತು. ಇದು ಜುಲೈ 2008ರ ದರಕ್ಕಿಂತ ಅತ್ಯಧಿಕವಾಗಿದೆ. ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್ ಒಂದು ಹಂತದಲ್ಲಿ ಗರಿಷ್ಠ 139.13 ಡಾಲರ್ ಗೆ ಏರಿಕೆಯಾಗಿತ್ತು. ಇದು ಜುಲೈ 2008 ರ ನಂತರದ ಅತ್ಯಧಿಕ ದರವಾಗಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಕದನ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಎಲ್ಐಸಿ ಐಪಿಒ ಮುಂದೂಡಿಕೆ ಸಾಧ್ಯತೆ
ಅಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ದರ ಏರಿಕೆಗೆ ಕಾರಣ ಎನ್ನಲಾಗಿದ್ದು, ರೂಪಾಯಿ ಸೋಮವಾರ ಪ್ರತಿ ಡಾಲರ್‌ಗೆ ದಾಖಲೆಯ ಕನಿಷ್ಠ 77.01ರೂಗೆ ಕುಸಿದಿದೆ. ಭಾರತವು ತನ್ನ ತೈಲ ಅಗತ್ಯದ ಸುಮಾರು 85 ಪ್ರತಿಶತವನ್ನು ಪೂರೈಸಲು (ವಿದೇಶ) ಸಾಗರೋತ್ತರ ಖರೀದಿಗಳನ್ನು ಅವಲಂಬಿಸಿದೆ. ತೈಲ ಬೆಲೆಗಳ ಅವಳಿ ಹೊಡೆತಗಳು, ಈಗಾಗಲೇ ಈ ವರ್ಷ ಶೇಕಡಾ 60 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿಯು ರಾಷ್ಟ್ರದ ಹಣಕಾಸು ಪರಿಸ್ಥಿತಿಗಳನ್ನು ಹಾನಿಗೊಳಿಸಬಹುದು, ಹೊಸ ಆರ್ಥಿಕ ಚೇತರಿಕೆಯನ್ನು ಹೆಚ್ಚಿಸಬಹುದು ಮತ್ತು ಹಣದುಬ್ಬರವನ್ನು ಹೆಚ್ಚಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ಕಚ್ಚಾ ತೈಲ ಬೆಲೆ: ಭಾರತದಲ್ಲಿ ಮುಂದಿನ ವಾರ ಪೆಟ್ರೋಲ್, ಡೀಸೆಲ್ ಬೆಲೆ 20-25 ರೂ. ಹೆಚ್ಚಳ?
2017 ರಿಂದ, ಹಿಂದಿನ 15 ದಿನಗಳಲ್ಲಿ ಬೆಂಚ್‌ಮಾರ್ಕ್ ಅಂತರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪ್ರತಿದಿನ ಸರಿಹೊಂದಿಸಲಾಗುತ್ತದೆ. ಆದರೆ ಕಳೆದ ನವೆಂಬರ್ 4, 2021 ರಿಂದ ದರಗಳು ಸ್ಥಿರವಾಗಿದ್ದು, ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ಮಾಹಿತಿಯ ಪ್ರಕಾರ ಭಾರತವು ಖರೀದಿಸುವ ಕಚ್ಚಾ ತೈಲ ದರ ಮಾರ್ಚ್ 1 ರಂದು ಪ್ರತಿ ಬ್ಯಾರೆಲ್‌ಗೆ 111 ಡಾಲರ್ ಗಿಂತ ಹೆಚ್ಚಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಕುಸಿತದೊಂದಿಗೆ ಅಂತ್ಯ: ಷೇರು ಬೆಲೆ ಕುಸಿತವೂ ಲಾಭವೇ?
ನಾಲ್ಕು ತಿಂಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಫ್ರೀಜ್ ಮಾಡುವ ಸಮಯದಲ್ಲಿ ಭಾರತೀಯ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆಗೆ ಇದು ಸರಾಸರಿ 81.5ಡಾಲರ್ ಇತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ದೇಶದಲ್ಲಿ ಕೂಡ ದರ ಏರಿಕೆ ಅನಿವಾರ್ಯ ಎನ್ನಲಾಗಿದೆ. ಅಲ್ಲದೆ ಸೋಮವಾರದಂದು ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ ದೈನಂದಿನ ಬೆಲೆ ಪರಿಷ್ಕರಣೆಗೆ ಮರಳಲು ಸರ್ಕಾರವು ಅನುಮತಿಸುವ ನಿರೀಕ್ಷೆಯಿದೆ. ಆದರೆ ತೈಲ ಕಂಪನಿಗಳು ಸಂಪೂರ್ಣ ನಷ್ಟವನ್ನು ಒಂದೇ ಬಾರಿಗೆ ವರ್ಗಾಯಿಸುವ ನಿರೀಕ್ಷೆಯಿಲ್ಲ ಮತ್ತು ಅವರು ಅದನ್ನು ಮಿತಗೊಳಿಸಿ. ಪ್ರತಿದಿನ ಲೀಟರ್‌ಗೆ 50 ಪೈಸೆಗಿಂತ ಕಡಿಮೆ ದರವನ್ನು ಹೆಚ್ಚಿಸು ಸಾಧ್ಯತೆ ಎಂದು ಹೇಳಲಾಗಿದೆ.