ಈ ವರ್ಷ ರಾಜ್ಯಗಳಿಗೆ 53,600 ಕೋಟಿ ರೂ. ಗೂ ಹೆಚ್ಚು ಜಿಎಸ್ಟಿ ಪರಿಹಾರ ಬಿಡುಗಡೆ ಮಾಡಬೇಕಿದೆ: ನಿರ್ಮಲಾ ಸೀತಾರಾಮನ್
ಪ್ರಸಕ್ತ ಹಣಕಾಸು ವರ್ಷದಲ್ಲಿ 53,600 ಕೋಟಿ ರೂ.ಗೂ ಹೆಚ್ಚು ಜಿಎಸ್ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
Published: 15th March 2022 11:20 PM | Last Updated: 16th March 2022 02:05 PM | A+A A-

ನಿರ್ಮಲಾ ಸೀತಾರಾಮನ್
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ 53,600 ಕೋಟಿ ರೂ.ಗೂ ಹೆಚ್ಚು ಜಿಎಸ್ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಜಿಎಸ್ಟಿ ಪರಿಹಾರವಾಗಿ ರಾಜ್ಯಗಳಿಗೆ 96,576 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಜಿಎಸ್ ಟಿ ಆದಾಯದ ಕೊರತೆಯನ್ನು ಉತ್ತಮಗೊಳಿಸಲು ಹೆಚ್ಚುವರಿಯಾಗಿ 1.59 ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಕ್-ಟು-ಬ್ಯಾಕ್ ಸಾಲವಾಗಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಇದನ್ನು ಓದಿ: ಫೆಬ್ರವರಿಯಲ್ಲಿ 1.30 ಲಕ್ಷ ಕೋಟಿ ರೂ. ಗೂ ಹೆಚ್ಚು ಜಿಎಸ್ಟಿ ಸಂಗ್ರಹ!
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕಾನೂನಿನಡಿಯಲ್ಲಿ ಜುಲೈ 1, 2017 ರಿಂದ ಜಿಎಸ್ಟಿ ಅನುಷ್ಠಾನದ ಮೊದಲ ಐದು ವರ್ಷಗಳಲ್ಲಿ ಆದಾಯದ ನಷ್ಟಕ್ಕೆ ರಾಜ್ಯಗಳಿಗೆ ದ್ವೈಮಾಸಿಕ ಪರಿಹಾರ ಖಾತರಿಪಡಿಸಲಾಗಿದೆ ಎಂದಿದ್ದಾರೆ.
"ಜಿಎಸ್ ಟಿ ಆದಾಯದ ಕೊರತೆಯನ್ನು ಪೂರೈಸಲು ಮತ್ತು ಸೇವೆಗಳನ್ನು ಪೂರೈಸಲು ಪರಿಹಾರ ಸೆಸ್ ತೆರಿಗೆಯನ್ನು 5 ವರ್ಷಗಳಿಗೂ ಮೀರಿ ವಿಸ್ತರಿಸುವ ಮೂಲಕ ಪರಿವರ್ತನೆಯ ಅವಧಿಗೆ ಜಿಎಸ್ ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017 ರ ಪ್ರಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ" ಎಂದು ಸೀತಾರಾಮನ್ ಹೇಳಿದ್ದಾರೆ.