ಮುಂದುವರೆದೆ ತೈಲೋತ್ಪನ್ನಗಳ ದರ ಏರಿಕೆ; ಪೆಟ್ರೋಲ್ 50 ಪೈಸೆ, ಡೀಸೆಲ್ ದರ 55 ಪೈಸೆ ಏರಿಕೆ
ಪಂಚರಾಜ್ಯಗಳ ಚುನಾವಣೆ ಬಳಿಕ ಗಗನ ಮುಖಿಯಾಗಿರುವ ತೈಲೋತ್ಪನ್ನಗಳ ದರ ಭಾನುವಾರ ಕೂಡ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 50 ರಿಂದ 55 ಪೈಸೆಯಷ್ಟು ಮತ್ತು ಪ್ರತೀ ಲೀಟರ್ ಡೀಸೆಲ್ ದರ 55ರಿಂದ 58 ಪೈಸೆಯಷ್ಟು ಏರಿಕೆ ಕಂಡಿದೆ.
Published: 27th March 2022 08:08 AM | Last Updated: 27th March 2022 08:08 AM | A+A A-

ಪೆಟ್ರೋಲಿಯಂ ಉತ್ಪನ್ನ (ಸಾಂಕೇತಿಕ ಚಿತ್ರ)
ನವದೆಹಲಿ: ಪಂಚರಾಜ್ಯಗಳ ಚುನಾವಣೆ ಬಳಿಕ ಗಗನ ಮುಖಿಯಾಗಿರುವ ತೈಲೋತ್ಪನ್ನಗಳ ದರ ಭಾನುವಾರ ಕೂಡ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 50 ರಿಂದ 55 ಪೈಸೆಯಷ್ಟು ಮತ್ತು ಪ್ರತೀ ಲೀಟರ್ ಡೀಸೆಲ್ ದರ 55ರಿಂದ 58 ಪೈಸೆಯಷ್ಟು ಏರಿಕೆ ಕಂಡಿದೆ.
ಶನಿವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿತ್ತು. ಇಂದಿನ ದರ ಏರಿಕೆ ಮೂಲಕ ಒಂದೇ ವಾರದಲ್ಲಿ ಐದನೇ ಬಾರಿ ತೈಲ ದರಗಳು ಏರಿಕೆಯಾದಂತಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಈಗ ಭಾರತದಲ್ಲೂ ತೈಲ ಬೆಲೆ ಏರಿಕೆ ಆರಂಭವಾಗಿದೆ.
Price of petrol & diesel in Delhi at Rs 99.11 per litre & Rs 90.42 per litre respectively today (increased by 50 & 55 paise respectively)
— ANI (@ANI) March 27, 2022
In Mumbai, the petrol & diesel prices per litre at Rs 113.88 & Rs 98.13 (increased by 53 paise & 58 paise respectively)
(File pic) pic.twitter.com/7Eg5Optru1
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 50 ಪೈಸೆ ಏರಿಕೆಯಾಗಿ 99.11ರೂಗೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ಬೆಲೆ 55 ಪೈಸೆ ಹೆಚ್ಚಳವಾಗಿ 90.42ರೂಗೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 53 ಪೈಸೆ ಏರಿಕೆಯಾಗಿ 113.88 ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 58 ಪೈಸೆ ಏರಿಕೆಯಾಗಿ 98.13ರೂಗೆ ಏರಿಕೆಯಾಗಿದೆ.
In Chennai, the price of petrol is Rs 104.90 & diesel is Rs 95.00 and in Kolkata, the price of petrol is Rs 108.53 and diesel is Rs 93.57.
— ANI (@ANI) March 27, 2022
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 104.90 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.44 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 88.66 ರೂಪಾಯಿ ದಾಖಲಾಗಿದೆ.