ಜನವರಿ ತಿಂಗಳಲ್ಲಿ ಜಿಯೋ ತೊರೆದ 9.03 ಮಿಲಿಯನ್ ಗ್ರಾಹಕರು; ಏರ್ ಟೆಲ್ ಗೆ ಸೇರಿದ್ದೆಷ್ಟು... ಇಲ್ಲಿದೆ ಮಾಹಿತಿ
ಭಾರತ ಜನವರಿ ತಿಂಗಳಲ್ಲಿ 9.38 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಅತಿ ಹೆಚ್ಚು ಗ್ರಾಹಕರನ್ನು (9.3 ಮಿಲಿಯನ್) ಕಳೆದುಕೊಂಡಿದೆ.
Published: 31st March 2022 01:53 PM | Last Updated: 31st March 2022 02:07 PM | A+A A-

ಜಿಯೋ
ನವದೆಹಲಿ: ಭಾರತ ಜನವರಿ ತಿಂಗಳಲ್ಲಿ 9.38 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಅತಿ ಹೆಚ್ಚು ಗ್ರಾಹಕರನ್ನು (9.3 ಮಿಲಿಯನ್) ಕಳೆದುಕೊಂಡಿದ್ದರೆ, ವೋಡಫೋನ್ ಐಡಿಯಾ ಲಿಮಿಟೆಡ್ ನಿಂದ 0.38 ಮಿಲಿಯನ್ ಗ್ರಾಹಕರು ಹೊರಬಂದಿದ್ದಾರೆ. ಆದರೆ ಭಾರತಿ ಏರ್ ಟೆಲ್ ಮಾತ್ರ 0.71 ಮಿಲಿಯನ್ ಹೊಸ ಮೊಬೈಲ್ ಗ್ರಾಹಕರನ್ನು ಪಡೆದುಕೊಂಡಿದೆ.
9.3 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡರೂ ಶೇ.35.49 ರಷ್ಟು ಗ್ರಾಹಕರೊಂದಿಗೆ ಜಿಯೋ ಸಂಸ್ಥೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಈ ನಂತರದ ಸ್ಥಾನದಲ್ಲಿ ಭಾರತಿ ಏರ್ ಟೆಲ್ ಇದ್ದು ಶೇ.31.13 ರಷ್ಟು ಗ್ರಾಹಕರನ್ನು ಹೊಂದಿದೆ. ಶೇ.23.15 ರೊಂದಿಗೆ ವೋಡಾಫೋನ್ ಐಡಿಯಾ, ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಅನುಕ್ರಮವಾಗಿ ಶೇ.9.95, ಶೇ.0.28 ರಷ್ಟು ಮಾರುಕಟ್ಟೆಯನ್ನು ಹೊಂದಿವೆ.
2022 ರ ಜನವರಿ ತಿಂಗಳಲ್ಲಿ ಮೊಬೈಲ್ ನಂಬರ್ ಪೋರ್ಟಬಲಿಟಿ (ಎಂಎನ್ ಪಿ)ಗೆ 9.53 ಮಿಲಿಯನ್ ಅರ್ಜಿಗಳು ಬಂದಿವೆ ಎಂದು ಟ್ರಾಯ್ ಹೇಳಿದೆ.