ಆರ್ಥಿಕ ವರ್ಷ 2022: ಮಹಿಳಾ ನೇತೃತ್ವದ MSME ಗಳು ಶೇ.75 ರಷ್ಟು ಏರಿಕೆ
ಭಾರತದಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಖ್ಯೆಯು ವಿತ್ತೀಯ ವರ್ಷ 2022 ರಲ್ಲಿ ಶೇ. 75 ಕ್ಕಿಂತ ಹೆಚ್ಚಾಗಿ ಏರಿಕೆಯಾಗಿದ್ದು, 8.59 ಲಕ್ಷ ಯೂನಿಟ್ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಮಾಹಿತಿ ನೀಡಿವೆ.
Published: 31st March 2022 08:36 PM | Last Updated: 01st April 2022 02:37 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಭಾರತದಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಖ್ಯೆಯು ವಿತ್ತೀಯ ವರ್ಷ 2022 ರಲ್ಲಿ ಶೇ. 75 ಕ್ಕಿಂತ ಹೆಚ್ಚಾಗಿ ಏರಿಕೆಯಾಗಿದ್ದು, 8.59 ಲಕ್ಷ ಯೂನಿಟ್ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಬಹು ನಿರೀಕ್ಷಿತ ಎಚ್.ಎ.ಎಲ್ ನ ಐ.ಜೆ.ಟಿ ಉತ್ಪಾದನೆ ಶೀಘ್ರದಲ್ಲೇ ಬಳಕೆಗೆ ಲಭ್ಯ
ಗುರುವಾರ ಸಂಸತ್ತಿಗೆ ತಿಳಿಸಲಾದ ಅಂಕಿಗಳ ಅಂಶಗಳಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದ್ದು. ಹಿಂದಿನ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 4.9 ಲಕ್ಷ ಯುನಿಟ್ಗಳಷ್ಟಿತ್ತು ಎನ್ನಲಾಗಿದೆ.
"2020-21ರ ಅವಧಿಯಲ್ಲಿ 4.9 ಲಕ್ಷ ಮಹಿಳಾ ನೇತೃತ್ವದ ಎಂಎಸ್ಎಂಇಗಳು ಪೋರ್ಟಲ್ನಲ್ಲಿ ನೋಂದಾಯಿಸಿದ್ದರೆ, ಸುಮಾರು 8.59 ಲಕ್ಷ ಮಹಿಳಾ ನೇತೃತ್ವದ ಎಂಎಸ್ಎಂಇಗಳು 2021-22ರಲ್ಲಿ (28.03.2022 ರವರೆಗೆ) ನೋಂದಾಯಿಸಿಕೊಂಡಿವೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರು ಭಾನು ಪ್ರತಾಪ್ ಸಿಂಗ್ ವರ್ಮಾ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ಇದನ್ನೂ ಓದಿ: ಫೆಡೆಕ್ಸ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್; ಭಾರತೀಯ ಅಮೇರಿಕನ್ ರಾಜ್ ಸುಬ್ರಮಣ್ಯಂ ನೇಮಕ
ಸರ್ಕಾರವು ಜುಲೈ 2020 ರಲ್ಲಿ ಉದ್ಯಮ ನೋಂದಣಿಯೊಂದಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ನೋಂದಣಿಗಾಗಿ ಉದ್ಯೋಗ್ ಆಧಾರ್ ಮೆಮೊರಾಂಡಮ್ ಅನ್ನು ಸಲ್ಲಿಸುವ ಹಿಂದಿನ ಪ್ರಕ್ರಿಯೆಯನ್ನು ಬದಲಾಯಿಸಿತು. ಉದ್ಯಮ್ ನೋಂದಣಿ ಪೋರ್ಟಲ್ನಲ್ಲಿ ನೋಂದಾಯಿಸಲಾದ ಮಹಿಳಾ ನೇತೃತ್ವದ ಎಂಎಸ್ಎಂಇಗಳ ಸಂಖ್ಯೆ ಗಣನೀಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮಾರ್ಚ್ 31, 2021 ರಂತೆ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿನ ಒಟ್ಟು 211.65 ಕೋಟಿ ಖಾತೆಗಳಲ್ಲಿ 70.64 ಕೋಟಿ ಖಾತೆಗಳು ಮಹಿಳಾ ಖಾತೆದಾರರಿಗೆ ಸೇರಿವೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಯೋಜನೆ
8 ಕೈಗಾರಿಕಾ ವಲಯಗಳ ಬೆಳವಣಿಗೆ ಶೇ 5.8ಕ್ಕೆ ಏರಿಕೆ
ಇನ್ನು ಮೂಲಸೌಕರ್ಯ ವಲಯದ ಪ್ರಮುಖ ಎಂಟು ಕೈಗಾರಿಕೆಗಳ ಬೆಳವಣಿಗೆಯು 2022ರ ಫೆಬ್ರುವರಿಯಲ್ಲಿ ಶೇ. 5.8ಕ್ಕೆ ತಲುಪಿದ್ದು. ಕಳೆದ ವರ್ಷದ ಫೆಬ್ರುವರಿಯಲ್ಲಿ ಇದು ಶೇ 3.3ರಷ್ಟು ಇತ್ತು. ಈ ವರ್ಷದ ಜನವರಿಯಲ್ಲಿ ಶೇ 4ರಷ್ಟು ಬೆಳವಣಿಗೆ ಕಂಡಿವೆ. ಕಲ್ಲಿದ್ದಲು, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು ಮತ್ತು ಸಿಮೆಂಟ್ ಉದ್ಯಮಗಳ ಉತ್ತಮ ಬೆಳವಣಿಗೆಯಿಂದಾಗಿ ಈ ವರ್ಷದ ಫೆಬ್ರುವರಿಯಲ್ಲಿ ಈ ಪ್ರಮಾಣದ ಏರಿಕೆ ಸಾಧ್ಯವಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶದಲ್ಲಿ ಈ ಮಾಹಿತಿ ಇದೆ.
ಇದನ್ನೂ ಓದಿ: 'ಆತ್ಮನಿರ್ಭರ್' ಉತ್ತೇಜನ: ದೇಶೀಯ ಮೂಲದಿಂದ 5 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಉಪಕರಣ ಖರೀದಿಗೆ ಕೇಂದ್ರ ಚಿಂತನೆ
ಅದರೆ, ಫೆಬ್ರುವರಿಯಲ್ಲಿ ಕಚ್ಚಾತೈಲ ಮತ್ತು ರಸಗೊಬ್ಬರ ಉತ್ಪಾದನೆ ಇಳಿಕೆ ಕಂಡಿದೆ. ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು 2021ರ ಏಪ್ರಿಲ್ನಿಂದ ಈ ವರ್ಷದ ಫೆಬ್ರುವರಿವರೆಗಿನ ಅವಧಿಯಲ್ಲಿ ಶೇ 11ರಷ್ಟು ಬೆಳವಣಿಗೆ ಕಂಡಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ (–)8.1ರಷ್ಟು ಕುಸಿತ ಕಂಡಿದ್ದವು.