ಏಪ್ರಿಲ್ ನಲ್ಲಿ ಹೊಸ ದಾಖಲೆ ಬರೆದ ಜಿಎಸ್ಟಿ, 1.68 ಲಕ್ಷ ಕೋಟಿ ರೂ. ಸಂಗ್ರಹ
ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಏಪ್ರಿಲ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದ್ದು, ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1.5 ಲಕ್ಷ ಕೋಟಿ ದಾಟಿದೆ.
Published: 01st May 2022 05:16 PM | Last Updated: 01st May 2022 05:16 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಏಪ್ರಿಲ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದ್ದು, ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1.5 ಲಕ್ಷ ಕೋಟಿ ದಾಟಿದೆ.
ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 1.68 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದ್ದು. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಶೇ 20 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ: ಮಾರ್ಚ್ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಜಿಎಸ್ಟಿ, 1.42 ಲಕ್ಷ ಕೋಟಿ ರೂ. ಸಂಗ್ರಹ: ಹಣಕಾಸು ಸಚಿವಾಲಯ
ಏಪ್ರಿಲ್ 2022 ರಲ್ಲಿ ಜಿಎಸ್ ಟಿ ಆದಾಯವು ಒಟ್ಟು 1,67,540 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ ಟಿ 33,159 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 41,793 ಕೋಟಿ ರೂಪಾಯಿ, ಐಜಿಎಸ್ ಟಿ 81,939 ಮತ್ತು ಮತ್ತು ಪರಿಹಾರ ಸೆಸ್ Rs 10,649 ಕೋಟಿ ರೂ. ಎಂದು ತಿಳಿಸಲಾಗಿದೆ.
ಕಳೆದ ಮಾರ್ಚ್ ನಲ್ಲಿ 1,42,095 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದು ಸಹ ಟಿ ಸಾರ್ವಕಾಲಿಕ ಗರಿಷ್ಠ ಸಂಗ್ರವಾಗಿದ್ದು, ಜನವರಿಯಲ್ಲಿ ಸಂಗ್ರಹಿಸಲಾದ 1,40,986 ಕೋಟಿ ರೂ.ಗಳ ಹಿಂದಿನ ದಾಖಲೆಯನ್ನು ಮುರಿದಿತ್ತು.