ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: 19 ಕೆಜಿ ಸಿಲಿಂಡರ್ ಬೆಲೆ ಹೀಗಿದೆ
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ((Commercial cylinder rate hike) ಮತ್ತೆ ಹೆಚ್ಚಳವಾಗಿದೆ. ಇಂದು ಮೇ1ರಂದು 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2,355 ರೂಪಾಯಿ 50 ಪೈಸೆಗೆ ಏರಿಕೆಯಾಗಿದೆ.
Published: 01st May 2022 09:09 AM | Last Updated: 01st May 2022 10:31 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ(Commercial cylinder rate hike) ಮತ್ತೆ ಹೆಚ್ಚಳವಾಗಿದೆ. ಇಂದು ಮೇ1ರಂದು 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2,355 ರೂಪಾಯಿ 50 ಪೈಸೆಗೆ ಏರಿಕೆಯಾಗಿದೆ.
ಈ ಹಿಂದೆ 2,253 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಇಂದು 102 ರೂಪಾಯಿ 50 ಪೈಸೆ ಹೆಚ್ಚಳವಾಗಿದೆ. 5 ಕೆಜಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಈಗ 655 ರೂಪಾಯಿಯಾಗಿದೆ.
ಗೃಹೋಪಯೋಗಿ ಬಳಕೆಯ ಸಿಲಿಂಡರ್ ಬೆಲೆ ಬದಲಾಗಿಲ್ಲ. ಈ ಹಿಂದೆ ಎರಡು ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿತ್ತು.