ಎಲ್ಐಸಿ ಐಪಿಒ ಅಪಡೇಟ್: ಕೆಲವೇ ಗಂಟೆಗಳಲ್ಲಿ ಶೇ.33 ಷೇರುಗಳಿಗೆ ಅರ್ಜಿ!
ದೇಶದ ಸಾರ್ವಜನಿಕ ವಲಯದ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮದ(ಎಲ್ಐಸಿ) ಐಪಿಒ ಬುಧವಾರ ಸಾರ್ವಜನಿಕರಿಗೆ ತೆರೆದಿದ್ದು, ಮೊದಲ ಕೆಲವೇ ಗಂಟೆಗಳಲ್ಲಿ 5.40 ಕೋಟಿ ಷೇರುಗಳಿಗೆ ಅರ್ಜಿಗಳು ಬಂದಿವೆ. ಐಪಿಒದಲ್ಲಿ ಒಟ್ಟು ಷೇರುಗಳ ಸಂಖ್ಯೆ 16.20 ಕೋಟಿ.
Published: 04th May 2022 03:54 PM | Last Updated: 04th May 2022 04:07 PM | A+A A-

ಸಂಗ್ರಹ ಚಿತ್ರ
ಮುಂಬೈ: ದೇಶದ ಸಾರ್ವಜನಿಕ ವಲಯದ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮದ(ಎಲ್ಐಸಿ) ಐಪಿಒ ಬುಧವಾರ ಸಾರ್ವಜನಿಕರಿಗೆ ತೆರೆದಿದ್ದು, ಮೊದಲ ಕೆಲವೇ ಗಂಟೆಗಳಲ್ಲಿ 5.40 ಕೋಟಿ ಷೇರುಗಳಿಗೆ ಅರ್ಜಿಗಳು ಬಂದಿವೆ. ಐಪಿಒದಲ್ಲಿ ಒಟ್ಟು ಷೇರುಗಳ ಸಂಖ್ಯೆ 16.20 ಕೋಟಿ.
ಐಪಿಒದ ಮೊದಲ ದಿನದಂದು ಮಧ್ಯಾಹ್ನ 12:50 ರವರೆಗೆ ಶೇ. 33ರಷ್ಟು ಷೇರುಗಳಿಗೆ ಬಿಡ್ಗಳನ್ನು ಸ್ವೀಕರಿಸಲಾಗಿದೆ. ಚಿಲ್ಲರೆ ವೈಯಕ್ತಿಕ ಹೂಡಿಕೆದಾರರಿಗೆ ಕಾಯ್ದಿರಿಸಿದ ಕೋಟಾವು 36 ಪ್ರತಿಶತ ಬಿಡ್ಗಳನ್ನು ಪಡೆದರೆ, ಸಾಂಸ್ಥಿಕೇತರ ಹೂಡಿಕೆದಾರರಿಗೆ ಕಾಯ್ದಿರಿಸಿದ ಷೇರುಗಳು 08 ಪ್ರತಿಶತ ಬಿಡ್ಗಳನ್ನು ಸ್ವೀಕರಿಸಲಾಗಿದೆ.
ಅದೇ ರೀತಿ ಎಲ್ಐಸಿ ನೌಕರರು ಮತ್ತು ಪಾಲಿಸಿದಾರರ ಕೋಟಾ ಷೇರುಗಳಿಗೆ ಕ್ರಮವಾಗಿ ಶೇ.58 ಮತ್ತು ಶೇ.116 ಅರ್ಜಿಗಳು ಸ್ವೀಕೃತಗೊಂಡಿವೆ.
ಇದನ್ನೂ ಓದಿ: ಎಲ್ಐಸಿ ಐಪಿಒಗೆ ಬಲವಾದ ಸಾಂಸ್ಥಿಕ ಬೇಡಿಕೆ ಸೃಷ್ಟಿ; 123 ಆಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹ
ಈ ಐಪಿಒ ಮೇ 09 ರಂದು ಮುಕ್ತಾಯಗೊಳ್ಳುತ್ತದೆ. ಇದಕ್ಕಾಗಿ, ಅಪ್ಲಿಕೇಶನ್ ಬೆಲೆಯನ್ನು ಪ್ರತಿ ಷೇರಿಗೆ 902-949 ರೂ. ನಿಗದಿಪಡಿಸಲಾಗಿದೆ. ಎಲ್ಐಸಿ ಷೇರುಗಳು ಮೇ 17 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಆಗಲಿವೆ.
ಈ ಐಪಿಒದಲ್ಲಿ ಎಲ್ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿಗೆ ರೂ.60 ಮತ್ತು ಚಿಲ್ಲರೆ ಮತ್ತು ಉದ್ಯೋಗಿಗಳಿಗೆ ಪ್ರತಿ ಷೇರಿಗೆ ರೂ.45 ರಿಯಾಯಿತಿ ನೀಡಲಾಗಿದೆ.
ಎಲ್ಐಸಿಯಲ್ಲಿ ತನ್ನ ಶೇ.3.5 ಪಾಲನ್ನು ಮಾರಾಟ ಮಾಡುವ ಮೂಲಕ 21,000 ಕೋಟಿ ಬಂಡವಾಳವನ್ನು ಸಂಗ್ರಹಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಇದು ಇಲ್ಲಿಯವರೆಗಿನ ಭಾರತದ ಅತಿ ದೊಡ್ಡ IPO ಆಗಲಿದೆ.