ಆರ್ ಬಿಐ ನ ಬಡ್ಡಿ ದರ ಏರಿಕೆ ಆರ್ಥಿಕತೆಗೆ ಒಳ್ಳೆಯದಷ್ಟೇ, ನಮ್ಮಲ್ಲಿ ಬಹುತೇಕರಿಗೆ ಅಲ್ಲ!: ಹೀಗೇಕೆ...? ಇಲ್ಲಿದೆ ಉತ್ತರ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಬಡ್ಡಿ ದರ ಏರಿಕೆ ಮಾಡಿದ್ದು, 2020 ರಲ್ಲಿ ತುರ್ತಾಗಿ ಬಡ್ಡಿ ದರ ಇಳಿಕೆ ಮಾಡಿದ್ದ ನಂತರ ಈಗ ಅಷ್ಟೇ ಏಕಾಏಕಾಗಿ ಬಡ್ಡಿ ದರ ಏರಿಕೆ ಮಾಡಿದೆ.
Published: 05th May 2022 02:53 AM | Last Updated: 05th May 2022 12:57 PM | A+A A-

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಬಡ್ಡಿ ದರ ಏರಿಕೆ ಮಾಡಿದ್ದು, 2020 ರಲ್ಲಿ ತುರ್ತಾಗಿ ಬಡ್ಡಿ ದರ ಇಳಿಕೆ ಮಾಡಿದ್ದ ನಂತರ ಈಗ ಅಷ್ಟೇ ಏಕಾಏಕಾಗಿ ಬಡ್ಡಿ ದರ ಏರಿಕೆ ಮಾಡಿದೆ.
ಹೊಸದಾಗಿ ಪರಿಚಯಿಸಲಾಗಿರುವ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್ ಡಿಎಫ್) ದರವನ್ನು ಕಳೆದ ತಿಂಗಳು ಘೋಷಿಸಲಾಗಿದ್ದ ರೆಪೋ ದರಕ್ಕಿಂತಲೂ 40 ಬಿಪಿಎಸ್ ನಷ್ಟು ಹೆಚ್ಚಾಗಿ ಪರಿಗಣಿಸಿದರೆ, ಆರ್ ಬಿಐ ಏಪ್ರಿಲ್ ನೀತಿಯಲ್ಲೇ ನೀತಿ ದರವನ್ನು ಪರಿಣಾಮಕಾರಿಯಾಗಿ ಏರಿಕೆ ಮಾಡಿತ್ತು. ಅಂದರೆ ಇದರ ಅರ್ಥ ಬುಧವಾರ (ಮೇ.04 ರಂದು) ಮಾಡಿದ ದರ ಏರಿಕೆ ಪರಿಣಾಮಕಾರಿ ದರವನ್ನು 80 ಬಿಪಿಎಸ್ ನಷ್ಟು ಜಾಸ್ತಿ ಮಾಡಿದೆ.
ಇದನ್ನೂ ಓದಿ: ರೆಪೋ ದರ ಏರಿಕೆ ಎಫೆಕ್ಟ್: ಸೆನ್ಸೆಕ್ಸ್ 1300 ಅಂಕ ಕುಸಿತ, ಹೂಡಿಕೆದಾರರ 6.27 ಲಕ್ಷ ಕೋಟಿ ನಷ್ಟ!
ಆಹಾರ ಹಾಗೂ ವಿದ್ಯುತ್ ಬೆಲೆಗಳ ನಡುವೆ ವಿಶ್ಲೇಷಕರು ಜೂನ್ ನಲ್ಲಿ ಇನ್ನೂ 50 ಬಿಪಿಎಸ್ ಜಾಸ್ತಿಯಾಗಲಿದೆ ಎಂದು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬಡ್ಡಿ ದರ ಏರಿಕೆ ಆರ್ಥಿಕತೆಗೆ ಒಳ್ಳೆಯದೇ ಹೊರತು. ಸಾಮಾನ್ಯ ಜನರಿಗಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ವೇತನ ಹಣದುಬ್ಬರದ ಏರಿಕೆಯ ನಡುವೆಯೇ ಬಡ್ಡಿ ದರ ಹಾಗೂ ಇಎಂಐ ಗಳು ಏರಿಕೆಯಾಗಲಿದ್ದು,
ಈಗಾಗಲೇ ಮನೆ ನಿರ್ವಹಣೆ ವೆಚ್ಚವು ಏರಿಕೆಯಾಗಿದ್ದು, ರೆಪೋ ದರ ಏರಿಕೆಯಿಂದ ಜನ ಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ರೆಪೋ ದರ ಏರಿಕೆಯಿಂದಾಗಿ ಆಗುವ ಒಂದೇ ಲಾಭವೆಂದರೆ ರಿಯಲ್ ರೇಟ್ ಗಳು ಮುಂದಿನ ಕೆಲವು ತ್ರೈಮಾಸಿಕದಲ್ಲಿ ತಟಸ್ಥ ಸ್ಥಿತಿಗೆ ಬರಲಿದ್ದು, ಉಳಿತಾಯದಾರರಿಗೆ ಲಾಭವಾಗಲಿದೆ.