ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ, ಹೊಸ ದರ ಇಂದಿನಿಂದ ಜಾರಿ
ಗೃಹ ಬಳಕೆ ಅಡುಗೆ ಅನಿಲ (Domestic LPG cylinder) ಬೆಲೆ ಮತ್ತೆ ಹೆಚ್ಚಳವಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು ನೂತನ ದರ ಇಂದು ಶನಿವಾರ ಮೇ 7ರಿಂದಲೇ ಜಾರಿಗೆ ಬರಲಿದೆ. ಇನ್ನು ಮುಂದೆ ಅಡುಗೆ ಅನಿಲ ಬೆಲೆ 999 ರೂಪಾಯಿ 50 ಪೈಸೆಯಾಗಲಿದೆ.
Published: 07th May 2022 09:20 AM | Last Updated: 07th May 2022 02:35 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (Domestic LPG cylinder) ಬೆಲೆ ಮತ್ತೆ ಹೆಚ್ಚಳವಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು ನೂತನ ದರ ಇಂದು ಶನಿವಾರ ಮೇ 7ರಿಂದಲೇ ಜಾರಿಗೆ ಬರಲಿದೆ. ಇನ್ನು ಮುಂದೆ ಅಡುಗೆ ಅನಿಲ ಬೆಲೆ 999 ರೂಪಾಯಿ 50 ಪೈಸೆಯಾಗಲಿದೆ.
ಕಳೆದ ವಾರ, 19-ಕೆಜಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 102 ರೂಪಾಯಿ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಇದು ಸತತ ಮೂರನೇ ಮಾಸಿಕ ಹೆಚ್ಚಳವಾಗಿದೆ.ಮಾರ್ಚ್ನಲ್ಲಿ ಗೃಹಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ಗೆ 50 ರೂಪಾಯಿ ಹೆಚ್ಚಳವಾಗಿತ್ತು.
ಇತ್ತೀಚೆಗೆ ಅಂದರೆ ಮೊನ್ನೆ ಮೇ 1 ರಂದು, ತೈಲ ಮಾರುಕಟ್ಟೆ ಕಂಪನಿಗಳು ಉಜ್ವಲ ದಿವಸ ಕಾರ್ಯಕ್ರಮ ಸಂದರ್ಭದಲ್ಲಿ 5 ಸಾವಿರಕ್ಕೂ ಹೆಚ್ಚು LPG ಪಂಚಾಯತ್ಗಳನ್ನು ಆಯೋಜಿಸಿದ್ದವು. ಅಲ್ಲಿ ಅನುಭವ ಹಂಚಿಕೆಯ ಹೊರತಾಗಿ, LPG ಯ ಸುರಕ್ಷಿತ ಮತ್ತು ನಿರಂತರ ಬಳಕೆಯನ್ನು ಗುರಿಯಾಗಿಟ್ಟುಕೊಂಡು, ಗ್ರಾಹಕರ ದಾಖಲಾತಿಯನ್ನು ಗರಿಷ್ಠಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಪ್ರತಿ ಬಿಪಿಎಲ್ ಕುಟುಂಬಕ್ಕೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯತ್ತ ಒಂದು ಹೆಜ್ಜೆಯಾಗಿದೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ, ಮೇ 1, 2016 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಆರಂಭಿಸಿದ್ದರು.