ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿದ ಜೆಟ್ ಏರ್ವೇಸ್
ಇತ್ತೀಚಿಗೆ ಡಿಜಿಸಿಎ ನಿಂದ ಮರುಮೌಲ್ಯೀಕರಿಸಿದ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿದ್ದ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಈಗ ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ.
Published: 23rd May 2022 05:09 PM | Last Updated: 23rd May 2022 05:54 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಇತ್ತೀಚಿಗೆ ಡಿಜಿಸಿಎ ನಿಂದ ಮರುಮೌಲ್ಯೀಕರಿಸಿದ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿದ್ದ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಈಗ ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ.
ಜೆಟ್ ಏರ್ವೇಸ್, ಮೇ 20 ರಂದು ಏರ್ಲೈನ್ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿತ್ತು. ಇದರೊಂದಿಗೆ ಜೆಟ್ ಏರ್ವೇಸ್ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ಪಡೆದಿತ್ತು.
ಇದನ್ನು ಓದಿ: 2022 ರ ಮೊದಲ ತ್ರೈಮಾಸಿಕದಿಂದ ಜೆಟ್ ಏರ್ವೇಸ್ ದೇಶೀಯ ಸೇವೆಗಳು ಪುನಾರಂಭ
ಪ್ರಭಾ ಶರಣ್ ಸಿಂಗ್ ಅವರನ್ನು ಮುಖ್ಯ ಡಿಜಿಟಲ್ ಅಧಿಕಾರಿಯಾಗಿ, ಎಚ್ ಆರ್ ಜಗನ್ನಾಥ್ ಅವರನ್ನು ಇಂಜಿನಿಯರಿಂಗ್ ಉಪಾಧ್ಯಕ್ಷರಾಗಿ, ಮಾರ್ಕ್ ಟರ್ನರ್ ಅವರನ್ನು ಇನ್ಫ್ಲೈಟ್ ಉತ್ಪನ್ನ ಮತ್ತು ಸೇವೆಗಳ ಉಪಾಧ್ಯಕ್ಷರಾಗಿ ಮತ್ತು ವಿಶೇಷ್ ಖನ್ನಾ ಅವರನ್ನು ಮಾರಾಟ, ವಿತರಣೆ ಮತ್ತು ಗ್ರಾಹಕ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಭಾ ಶರಣ್ ಸಿಂಗ್ ಅವರು ಜೂನ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಜಗನ್ನಾಥ್ ಅವರು ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟರ್ನರ್ ಜೂನ್ 15 ರಂದು ಹಾಗೂ ಖನ್ನಾ ಅವರು ಜುಲೈನಲ್ಲಿ ಸ್ವಲ್ಪ ಸಮಯದ ನಂತರ ಏರ್ಲೈನ್ಗೆ ಸೇರಲಿದ್ದಾರೆ ಎಂದು ಏರ್ಲೈನ್ಸ್ ತಿಳಿಸಿದೆ.