ಪೆಟ್ರೋಲ್ ತೆರಿಗೆ ಇಳಿದರೂ ಜನಸಾಮಾನ್ಯರಿಗೆ ಅದರ ಪೂರ್ಣಪ್ರಮಾಣದ ಲಾಭ ಸಿಗಲ್ಲ! ಹೀಗೇಕೆ..? ಇಲ್ಲಿದೆ ಉತ್ತರ...
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಹಲವು ರಾಜ್ಯಗಳೂ ವ್ಯಾಟ್ ನ್ನು ಕಡಿಮೆ ಮಾಡಿದ್ದವು ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 9.50 ರೂಪಾಯಿ ಡೀಸೆಲ್ ದರ 8.69 ರೂಪಾಯಿಗಳಷ್ಟು ಇಳಿಕೆ ಕಂಡಿತ್ತು.
Published: 24th May 2022 12:58 PM | Last Updated: 24th May 2022 01:14 PM | A+A A-

ಪೆಟ್ರೋಲ್ ದರ
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಹಲವು ರಾಜ್ಯಗಳೂ ವ್ಯಾಟ್ ನ್ನು ಕಡಿಮೆ ಮಾಡಿದ್ದವು ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 9.50 ರೂಪಾಯಿ ಡೀಸೆಲ್ ದರ 8.69 ರೂಪಾಯಿಗಳಷ್ಟು ಇಳಿಕೆ ಕಂಡಿತ್ತು.
ಆದರೂ ಜನರಿಗೆ ಬೆಲೆ ಇಳಿಕೆಯ ಪೂರ್ಣಪ್ರಮಾಣದ ಲಾಭ ಸಿಗುತ್ತಿಲ್ಲ! ನಿರೀಕ್ಷೆಗಿಂತ ಹೆಚ್ಚು ಹಣ ನೀಡಿ ಪೆಟ್ರೋಲ್, ಡೀಸೆಲ್ ಖರೀದಿಸಬೇಕಾಗುತ್ತಿದೆ.
ಇದಕ್ಕೆ ಕಾರಣ ಎಂದರೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ರಾತ್ರೋ ರಾತ್ರಿ ಪೆಟ್ರೋಲ್ ನ ಮೂಲ ಬೆಲೆಯನ್ನು ಏರಿಕೆ ಮಾಡಿದ್ದು, ತತ್ಪರಿಣಾಮವಾಗಿ ಚಿಲ್ಲರೆ ಬೆಲೆಯಲ್ಲಿ ಏರಿಕೆ ಕಂಡಿದೆ.
ಬ್ಯಾಕೆಂಡ್ ಕಚ್ಚಾ ಮತ್ತು ರಿಫೈನಿಂಗ್ ಬೆಲೆಗಳು ಬದಲಾಗುವುದಕ್ಕೆ ಅನುಗುಣವಾಗಿ ಒಎಂಸಿಗಳು ಮೂಲ ಬೆಲೆಯನ್ನು ಪರಿಷ್ಕರಿಸುತ್ತವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ; ಗ್ಯಾಸ್ ಸಿಲಿಂಡರ್ ಮೇಲೆ 200 ರೂ ಸಬ್ಸಿಡಿ ಲಭ್ಯ, ಷರತ್ತು ಅನ್ವಯ
ಒಎಂಸಿಗಳು, ತೈಲ ಕಂಪನಿಗಳ ಬೆಲೆ ನೋಟಿಫಿಕೇಷನ್ ನ ಪ್ರಕಾರ, ಮೂಲ ಬೆಲೆಯನ್ನು 58 ಪೈಸೆಗೆ ಏರಿಕೆ ಮಾಡಿದ್ದು ಪೆಟ್ರೋಲ್ 1 ರೂಪಾಯಿ ಏರಿಕೆಯಾಗುವಂತೆ ಮಾಡಿವೆ. ಈ ಬೆಲೆ ಏರಿಕೆಯ ಪರಿಣಾಮ ದೆಹಲಿಯಲ್ಲಿ 95.91 ರೂಪಾಯಿ ಆಗಿರಬೇಕಿದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿಯಾಗಿದೆ. ಆದ್ದರಿಂದ್ರ ಕೇಂದ್ರ ಸರ್ಕಾರ ಬೆಲೆ ಇಳಿಕೆಯಾದರೂ ಅದರ ಪೂರ್ಣ ಪ್ರಮಾಣದ ಲಾಭ ಜನರಿಗೆ ದೊರೆಯುತ್ತಿಲ್ಲ.