ಟ್ವಿಟ್ಟರ್ ನ ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಜ್ಯಾಕ್ ಡಾರ್ಸೆ
ಜ್ಯಾಕ್ ಡಾರ್ಸೆ ಟ್ವಿಟರ್ ನ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿದಿದ್ದಾರೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ನಕಲಿ/ಸ್ಪ್ಯಾಮ್ ಖಾತೆಗಳ ನೈಜ ಸಂಖ್ಯೆಯನ್ನು ಬಹಿರಂಗಪಡಿಸಲು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ನೊಂದಿಗೆ ಹೋರಾಟ ನಡೆಸುತ್ತಿರುವುದರಿಂದ ಟ್ವಿಟ್ಟರ್ ನಿರ್ದೇಶಕರ ಮಂಡಳಿ ಸ್ಥಾನದಿಂದ ಕೆಳಗಿಳಿದಿದ್ದಾರೆ.
Published: 26th May 2022 12:52 PM | Last Updated: 26th May 2022 12:54 PM | A+A A-

ಜ್ಯಾಕ್ ಡಾರ್ಸೆ
ಸಾನ್ ಫ್ಲಾನ್ಸಿಸ್ಕೊ: ಜ್ಯಾಕ್ ಡಾರ್ಸೆ ಟ್ವಿಟರ್ ನ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿದಿದ್ದಾರೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ನಕಲಿ/ಸ್ಪ್ಯಾಮ್ ಖಾತೆಗಳ ನೈಜ ಸಂಖ್ಯೆಯನ್ನು ಬಹಿರಂಗಪಡಿಸಲು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ನೊಂದಿಗೆ ಹೋರಾಟ ನಡೆಸುತ್ತಿರುವುದರಿಂದ ಟ್ವಿಟ್ಟರ್ ನಿರ್ದೇಶಕರ ಮಂಡಳಿ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಡೋರ್ಸೆ, ಟ್ವಿಟರ್ ಸಿಇಒ ಹುದ್ದೆಯನ್ನು ತ್ಯಜಿಸಿದರು, ಆಗ ಕಂಪನಿಯ ಸಿಟಿಒ ಆಗಿದ್ದ ಭಾರತೀಯ ಮೂಲದ ಪರಾಗ್ ಅಗರವಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.
2022 ರ ಷೇರುದಾರರ ಸಭೆಯಲ್ಲಿ ಅವರ ಅವಧಿ ಮುಗಿಯುವವರೆಗೆ" ಮಂಡಳಿಯಲ್ಲಿ ಉಳಿಯುತ್ತಾರೆ ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ.
ಈಗ ಫೈನಾನ್ಷಿಯಲ್ ಪೇಮೆಂಟ್ಸ್ ಪ್ಲಾಟ್ಫಾರ್ಮ್ ಬ್ಲಾಕ್ (ಹಿಂದಿನ ಸ್ಕ್ವೇರ್) ಅನ್ನು ನಡೆಸುತ್ತಿರುವ ಓರ್ಸೆ, ಯಾರೂ ಟ್ವಿಟರ್ನ ಸಿಇಒ ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ. ಕಳೆದ ಬುಧವಾರ ನಡೆದ ಷೇರುದಾರರ ಸಭೆಯಲ್ಲಿ, ಟ್ವಿಟರ್ನ ಮಂಡಳಿಯ ಸದಸ್ಯ ಮತ್ತು ಮಸ್ಕ್ ಮಿತ್ರ ಖಾಸಗಿ ಇಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್ನರ್ಸ್ನ ಸಿಇಒ ಎಗಾನ್ ಡರ್ಬನ್ ಅವರನ್ನು ಹೊರಹಾಕಲು ಮತ ಹಾಕಿದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ.