'ಬಿಡ್ದುದಾರರ ಕೊರತೆ': ಬಿಪಿಸಿಎಲ್ ಖಾಸಗೀಕರಣ ಯೋಜನೆ ಕೈಬಿಟ್ಟ ಕೇಂದ್ರ
ಹೆಚ್ಚಿನ ಬಿಡ್ಡುದಾರರು ಭಾಗವಹಿಸಲು ಸಾಧ್ಯವಾಗದ ಕಾರಣ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ(ಬಿಪಿಸಿಎಲ್) ತಾನು ಹೊಂದಿರುವ ಸಂಪೂರ್ಣ ಶೇ.52.98 ರಷ್ಟು ಷೇರುಗಳನ್ನು ಮಾರಾಟ...
Published: 26th May 2022 08:01 PM | Last Updated: 26th May 2022 08:01 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಹೆಚ್ಚಿನ ಬಿಡ್ಡುದಾರರು ಭಾಗವಹಿಸಲು ಸಾಧ್ಯವಾಗದ ಕಾರಣ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ(ಬಿಪಿಸಿಎಲ್) ತಾನು ಹೊಂದಿರುವ ಸಂಪೂರ್ಣ ಶೇ.52.98 ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಗುರುವಾರ ಹಿಂತೆಗೆದುಕೊಂಡಿದೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಿಂದಾಗಿ ಪ್ರಸ್ತುತ ಖಾಸಗೀಕರಣ ಪ್ರಕ್ರಿಯೆಯಲ್ಲಿ ಹೆಚ್ಚಿನ ಬಿಡ್ದಾರರು ಭಾಗವಹಿಸಲು ಸಾಧ್ಯವಾಗದ ಕಾರಣ ಬಿಪಿಸಿಎಲ್ ನಲ್ಲಿ ತನ್ನ ಶೇ. 52.98 ರಷ್ಟು ಪಾಲನ್ನು ಮಾರಾಟ ಮಾಡುವ ಪ್ರಸ್ತಾಪ ಹಿಂಪಡೆಯಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ತಿಳಿಸಿದೆ.
ಇದನ್ನು ಓದಿ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಬಂಡವಾಳ ಹಿಂತೆಗೆತ ವಿರೋಧಿಸಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಬಿಪಿಸಿಎಲ್ ನ ತನ್ನ ಸಂಪೂರ್ಣ 52.98 ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜಿಸಿತ್ತು ಮತ್ತು ಮಾರ್ಚ್ 2020 ರಲ್ಲಿ ಬಿಡ್ದುದಾರರನ್ನು ಆಹ್ವಾನಿಸಿತ್ತು. ನವೆಂಬರ್ 2020 ರ ವೇಳೆಗೆ ಮೂರು ಬಿಡ್‌ಗಳು ಸಲ್ಲಿಕೆಯಾಗಿದ್ದವು.
ಆದಾಗ್ಯೂ, ಇಂಧನ ಬೆಲೆಯಲ್ಲಿ ಸ್ಪಷ್ಟತೆಯ ಕೊರತೆಯಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಬ್ಬರು ಬಿಡ್‌ದಾರರು ಹೊರನಡೆದ ನಂತರ ಕೇವಲ ಒಬ್ಬ ಬಿಡ್ಡುದಾರರು ಮಾತ್ರ ಕಣದಲ್ಲಿ ಉಳಿದಿದ್ದರು. ಹೀಗಾಗಿ ಖಾಸಗೀಕರಣವನ್ನು ಸ್ಥಗಿತಗೊಳಿಸಲಾಯಿತು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಹೇಳಿದೆ.