ಕಳೆದೆರಡು ವರ್ಷಗಳಲ್ಲಿ ರೂ.55,575 ಕೋಟಿ ರೂ. ಜಿಎಸ್ ಟಿ ವಂಚನೆ ಪತ್ತೆ, 719 ಮಂದಿ ಬಂಧನ

ಕಳೆದ ಎರಡು ವರ್ಷಗಳಲ್ಲಿ ರೂ. 55,575 ಕೋಟಿ ರೂಪಾಯಿ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಂಚನೆಯಾಗಿದ್ದು, ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಕ್ಕಾಗಿ ಸುಮಾರು 700 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಜಿಎಸ್ ಟಿ ಸಾಂದರ್ಭಿಕ ಚಿತ್ರ
ಜಿಎಸ್ ಟಿ ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ರೂ. 55,575 ಕೋಟಿ ರೂಪಾಯಿ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಂಚನೆಯಾಗಿದ್ದು, ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಕ್ಕಾಗಿ ಸುಮಾರು 700 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಸುಮಾರು 22,300 ನಕಲಿ ಜಿಎಸ್ ಟಿ ಐಡೆಂಟಿಫಿಕೇಷನ್ ನಂಬರ್ ನ್ನು (ಜಿಎಸ್ ಟಿಐಎನ್) ಡಿಜಿಜಿಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ನಕಲಿ, ಬೋಗಸ್ ಬಿಲ್ ನೀಡುವ ಮೂಲಕ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿರುವ ಸಂಸ್ಥೆಗಳ ವಿರುದ್ಧ ನವೆಂಬರ್ 9, 2020 ರಂದು ಸರ್ಕಾರ ದೇಶಾದ್ಯಂತ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿತು.

ಕಳೆದ ಎರಡು ವರ್ಷಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ರೂ.55,575 ಕೋಟಿ ತೆರಿಗೆ ವಂಚನೆಯಾಗಿರುವುದು ಕಂಡುಬಂದಿದೆ. 20 ಚಾರ್ಟೆಡ್ ಅಕೌಂಟೆಂಟ್, ಸಿಎಸ್ ಸೇರಿದಂತೆ 719 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಇದೇ ಅವಧಿಯಲ್ಲಿ ರೂ. 3,050 ಕೋಟಿ ಮೊತ್ತದಷ್ಟು ಜಿಎಸ್ ಟಿಯನ್ನು ಸ್ವಯಂ ಪ್ರೇರಣೆಯಿಂದ ಪಾವತಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಆದರೆ, ಈ ಪ್ರಕರಣಗಳಲ್ಲಿ ಎಷ್ಟು ಮೊತ್ತದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಬೃಹತ್ ಪ್ರಮಾಣದಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com