ಟ್ವಿಟರ್ ನ ಮಾಜಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿರುವ ದೇಶೀಯ ಮೈಕ್ರೋಬ್ಲಾಗಿಂಗ್ ಆಪ್ ಕೂ

ದೇಶೀಯ ಮೈಕ್ರೋಬ್ಲಾಗಿಂಗ್ ಜಾಲತಾಣ ಸಂಸ್ಥೆ ಕೂ ತನ್ನ ಪ್ರಬಲ ಪ್ರತಿಸ್ಪರ್ಧಿ ಟ್ವಿಟರ್ ನ್ನೂ ಮೀರಿ ಬೆಳೆಯುವ ಯೋಜನೆ ಹೊಂದಿದ್ದು, ಟ್ವಿಟರ್ ನ ಮಾಜಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. 
ಕೂ (ಸಾಂಕೇತಿಕ ಚಿತ್ರ)
ಕೂ (ಸಾಂಕೇತಿಕ ಚಿತ್ರ)

ಬೆಂಗಳೂರು: ದೇಶೀಯ ಮೈಕ್ರೋಬ್ಲಾಗಿಂಗ್ ಜಾಲತಾಣ ಸಂಸ್ಥೆ ಕೂ ತನ್ನ ಪ್ರಬಲ ಪ್ರತಿಸ್ಪರ್ಧಿ ಟ್ವಿಟರ್ ನ್ನೂ ಮೀರಿ ಬೆಳೆಯುವ ಯೋಜನೆ ಹೊಂದಿದ್ದು, ಟ್ವಿಟರ್ ನ ಮಾಜಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. 

ಸಂಸ್ಥೆಯ ಸಹ ಸಂಸ್ಥಾಪಕ ಮಯಾಂಕ್ ಬಿದವಟ್ಕ ಮಾತನಾಡು, ಜಾಲತಾಣದಲ್ಲಿ ಆರ್ ಐಪಿ ಟ್ವಿಟರ್ ಹಾಗೂ ಅದಕ್ಕೆ ಸಂಬಂಧಿಸಿದ ಟ್ರೆಂಡಿಂಗ್ ನ್ನು ನೋಡುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ನಾವು ಟ್ವಿಟರ್ ನ ಕೆಲವು ಮಂದಿ ಮಾಜಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೆವೆ ಹಾಗೂ ಆ ಉದ್ಯೋಗಿಗಳು ಅವರ ಪ್ರತಿಭೆಗೆ ಗೌರವ ಸಿಗುವಲ್ಲಿ ಕೆಲಸ ಮಾಡುವುದಕ್ಕೆ ಅರ್ಹರಾಗಿದ್ದಾರೆ. ಮೈಕ್ರೋಬ್ಲಾಗಿಂಗ್ ಜನರ ಶಕ್ತಿಗೆ ಸಂಬಂಧಿಸಿದ್ದೇ ಹೊರತು ದಮನಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ 2ನೇ ದೊಡ್ಡ ಮೈಕ್ರೋಬ್ಲಾಗ್ ಸ್ಥಾನ ಅಲಂಕರಿಸಿದ "ಕೂ" 
 
ಏಜೆನ್ಸಿ ವರದಿಗಳ ಪ್ರಕಾರ, ಟ್ವಿಟರ್ ತನ್ನ ಉದ್ಯೋಗಿಗಳಿಗೆ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುತ್ತಿರುವುದಾಗಿ ಹೇಳಿದೆ. ಹೆಚ್ಚಿನ ಸಮಯ ಕೆಲಸ ಮಾಡಲು ಸೂಚಿಸಿದ್ದರಿಂದ ಹಲವು ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಗಳ ಬಳಿಕ ಸಾಮಾಜಿಕ ಜಾಲತಾಣಾಗಳಲ್ಲಿ ಆರ್ ಐಪಿ ಟ್ವಿಟರ್ ಟ್ರೆಂಡಿಂಗ್ ಆಗುತ್ತಿದೆ. 

"ಗ್ರಾಹಕರ ಹಳೆಯ ಟ್ವೀಟ್ ಗಳನ್ನು ಕೂ ಗೆ ವರ್ಗಾವಣೆ ಮಾಡುವ ಅವಕಾಶವನ್ನೂ ನಾವು ಕಲ್ಪಿಸಿಕೊಡಲಿದ್ದೇವೆ ಅಷ್ಟೇ ಅಲ್ಲದೇ ಟ್ವಿಟರ್ ನಲ್ಲಿ ನಿಮ್ಮ ಅನುಯಾಯಿಗಳನ್ನು ಕೂ ನಲ್ಲಿ ಪಡೆಯುವುದಕ್ಕೆ ವ್ಯವಸ್ಥೆ ಮಾಡಲಿದ್ದೇವೆ ಎಂದು ಕೂ ಸಹ ಸಂಸ್ಥಾಪಕ ತಿಳಿಸಿದ್ದಾರೆ.
 
ದೇಶೀಯವಾಗಿ ಅಭಿವೃದ್ಧಿಯಾಗಿರುವ ಮೈಕ್ರೋ ಬ್ಲಾಗ್ ಕೂ ಎರಡನೇ ಅತಿ ದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com