ಅಕ್ಟೋಬರ್‌ನಲ್ಲಿ ದೇಶಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 10 ರಷ್ಟು ಹೆಚ್ಚಳ

ಸೆಪ್ಟೆಂಬರ್ 2022 ರಲ್ಲಿ ಹಾರಾಟ ನಡೆಸಿದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ 2022 ರ ಅಕ್ಟೋಬರ್‌ನಲ್ಲಿ ದೇಶಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 10 ರಷ್ಟು ಹೆಚ್ಚಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಪ್ಟೆಂಬರ್ 2022 ರಲ್ಲಿ ಹಾರಾಟ ನಡೆಸಿದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ 2022 ರ ಅಕ್ಟೋಬರ್‌ನಲ್ಲಿ ದೇಶಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 10 ರಷ್ಟು ಹೆಚ್ಚಾಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶಿ ವಿಮಾನಯಾನ ಸಂಸ್ಥೆಗಳು ಕಳೆದ ಅಕ್ಟೋಬರ್ ನಲ್ಲಿ ಒಟ್ಟು 1.14 ಕೋಟಿ ಪ್ರಯಾಣಿಕರನ್ನು ಸಾಗಿಸಿವೆ.

ಇನ್ನು ಏರ್‌ಲೈನ್‌ಗಳಲ್ಲಿ, ಟಾಟಾ ಗ್ರೂಪ್ ನ ಏರ್ ಇಂಡಿಯಾ ಮತ್ತು ಏರ್‌ಏಷ್ಯಾ ಅತಿ ಹೆಚ್ಚು ಪ್ರಯಾಣಿಕರನ್ನು ಸಾಗಿಸಿದ್ದು, ಇತ್ತೀಚೆಗಷ್ಟೇ ಹಾರಾಟ ಆರಂಭಿಸಿದ ಆಕಾಶ ಏರ್ ನಂತರದ ಸ್ಥಾನದಲ್ಲಿದೆ. ಉಳಿದ ವಿಮಾನಯಾನ ಸಂಸ್ಥೆಗಳು ಸೆಪ್ಟೆಂಬರ್‌ಗೆ ಹೋಲಿಸಿದರೆ ಸಣ್ಣ ಕಡಿತಕ್ಕೆ ಸಾಕ್ಷಿಯಾಗಿವೆ.

ಏರ್ ಇಂಡಿಯಾದ ಮಾರುಕಟ್ಟೆ ಪಾಲು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 8.7 ರಿಂದ ಅಕ್ಟೋಬರ್‌ನಲ್ಲಿ ಶೇ. 9.1 ಕ್ಕೆ ಏರಿಕೆಯಾಗಿದ್ದರೆ, ಏರ್ ಏಷ್ಯಾದ ಪಾಲು ಇತರೆ ಏರ್‌ಲೈನ್‌ಗಳಲ್ಲಿ ಅತಿದೊಡ್ಡ ಜಿಗಿತವನ್ನು ಕಂಡಿದ್ದು, ಶೇ. 5.4 ರಿಂದ(ಸೆಪ್ಟೆಂಬರ್) ನಿಂದ ಶೇ. 7.6ಕ್ಕೆ(ಅಕ್ಟೋಬರ್) ಹೆಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com