ದೇಶದಲ್ಲಿ 8 ಕೋಟಿ ವಿಡಿಯೋ ಕ್ರಿಯೇಟರ್ಸ್, ಹೆಚ್ಚಿನವರು ತಿಂಗಳಿಗೆ ಕೇವಲ 16 ಸಾವಿರ ರೂ. ಗಳಿಸುತ್ತಾರೆ!

ಸಂಕ್ಷಿಪ್ತ ರೂಪದ ವೀಡಿಯೊ ಬಳಕೆ ಮತ್ತು ಒಟ್ಟಾರೆ ವಿಡಿಯೋ ಕ್ರಿಯೇಟರ್ಸ್ ಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದ್ದು, ಭಾರತ ಈಗ ಕನಿಷ್ಠ 8 ಕೋಟಿ ಕ್ರಿಯೇಟರ್ಸ್ ಗಳನ್ನು ಮತ್ತು ವೃತ್ತಿಪರರನ್ನು ಹೊಂದಿದೆ. ಆದರೆ ಇವರಲ್ಲಿ ಕೇವಲ 1.5 ಲಕ್ಷ ವೃತ್ತಿಪರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಂಕ್ಷಿಪ್ತ ರೂಪದ ವೀಡಿಯೊ ಬಳಕೆ ಮತ್ತು ಒಟ್ಟಾರೆ ವಿಡಿಯೋ ಕ್ರಿಯೇಟರ್ಸ್ ಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದ್ದು, ಭಾರತ ಈಗ ಕನಿಷ್ಠ 8 ಕೋಟಿ ಕ್ರಿಯೇಟರ್ಸ್ ಗಳನ್ನು ಮತ್ತು ವೃತ್ತಿಪರರನ್ನು ಹೊಂದಿದೆ. ಆದರೆ ಇವರಲ್ಲಿ ಕೇವಲ 1.5 ಲಕ್ಷ ವೃತ್ತಿಪರ ಕ್ರಿಯೇಟರ್ಸ್ ಗಳು ಮಾತ್ರ ತಮ್ಮ ಸೇವೆಗಳಿಂದ ಪರಿಣಾಮಕಾರಿಯಾಗಿ ಹಣಗಳಿಸಲು ಸಮರ್ಥರಾಗಿದ್ದಾರೆ ಎಂದು ಹೊಸ ವರದಿ ತಿಳಿಸಿದೆ. 

1.5 ಲಕ್ಷ ವೃತ್ತಿಪರ ಕಂಟೆಂಟ್  ಕ್ರಿಯೇಟರ್ಸ್ ಗಳನ್ನು ಹೊರತುಪಡಿಸಿದರೆ ಉಳಿದವರು ತಿಂಗಳಿಗೆ 200 ಡಾಲರ್ ನಿಂದ 2,500 ಡಾಲರ್(ತಿಂಗಳಿಗೆ Rs 16,000-Rs 200,000 ಕ್ಕಿಂತ ಹೆಚ್ಚು) ನಡುವೆ ಗಳಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

"ಶೇ. 1 ಕ್ಕಿಂತ ಕಡಿಮೆ ವೃತ್ತಿಪರ ಕ್ರಿಯೇಟರ್ಸ್ ಗಳು (1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವವರು) ತಿಂಗಳಿಗೆ 2,500 ಡಾಲರ್ ನಿಂದ 65,000 ಡಾಲರ್ (ರೂ. 53 ಲಕ್ಷಕ್ಕಿಂತ ಹೆಚ್ಚು) ವರೆಗೆ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಆರಂಭಿಕ ಹಂತದ ತಂತ್ರಜ್ಞಾನ ಕೇಂದ್ರಿತ ಸಾಹಸೋದ್ಯಮ ಬಂಡವಾಳ ಸಂಸ್ಥೆ ಕಲಾರಿ ಕ್ಯಾಪಿಟಲ್‌ ವರದಿ ತಿಳಿಸಿದೆ.

ಕೆಲವೇ ಕೆಲವು ಬ್ರೇಕ್‌ಔಟ್ ಸ್ಟಾರ್‌ಗಳು ಮಾತ್ರ ತಿಂಗಳಿಗೆ 100,000 ಡಾಲರ್(ರೂ. 82 ಲಕ್ಷಕ್ಕಿಂತ ಹೆಚ್ಚು) ಗಳಿಸುತ್ತಿದ್ದಾರೆ.

ಭಾರತದಲ್ಲಿ ಪ್ರಾದೇಶಿಕ ಕಿರು-ರೂಪದ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ 50,000 ವೃತ್ತಿಪರ ಕ್ರಿಯೇಟರ್ಸ್ ಇದ್ದಾರೆ ಮತ್ತು ಅವರ ಶೇಕಡಾ 60 ರಷ್ಟು ಪ್ರೇಕ್ಷಕರು ಮೆಟ್ರೋ ನಗರಳ ಹೊರಗಿನವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com