ಸತತ ಕುಸಿತದ ಬಳಿಕ ಡಾಲರ್ ಎದುರು ರೂಪಾಯಿ ಚೇತರಿಕೆ: 26 ಪೈಸೆ ವೃದ್ಧಿ!
ಡಾಲರ್ ಎದುರು ಸತತ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ ಇಂದು ತುಸು ವೃದ್ಧಿಯಾಗಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ಭರವಸೆಯ ವಹಿವಾಟು ದಾಖಲಾಗಿರುವುದು ರೂಪಾಯಿ ಮೌಲ್ಯ ವೃದ್ಧಿಗೆ ಕಾರಣವಾಗಿದೆ.
Published: 25th October 2022 04:16 PM | Last Updated: 25th October 2022 04:16 PM | A+A A-

ಸಂಗ್ರಹ ಚಿತ್ರ
ಮುಂಬೈ: ಡಾಲರ್ ಎದುರು ಸತತ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ ಇಂದು ತುಸು ವೃದ್ಧಿಯಾಗಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ಭರವಸೆಯ ವಹಿವಾಟು ದಾಖಲಾಗಿರುವುದು ರೂಪಾಯಿ ಮೌಲ್ಯ ವೃದ್ಧಿಗೆ ಕಾರಣವಾಗಿದೆ.
ಅಮೆರಿಕಾ ಡಾಲರ್ ಎದುರು ರೂಪಾಯಿ ಮೌಲ್ಯ 26 ಪೈಸೆ ವೃದ್ಧಿಯಾಗಿದ್ದು 82.62ಕ್ಕೆ ತಲುಪಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 82.71ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ 26 ಪೈಸೆ ವೃದ್ಧಿಯಾಗಿ 82.62ರಲ್ಲಿ ವಹಿವಾಟು ನಡೆಸಿತು.
ಇದನ್ನೂ ಓದಿ: ಗಗನಮುಖಿಯಾದ ಯುಎಸ್ ಡಾಲರ್ ಮೌಲ್ಯ, ವಿಶ್ವದಾದ್ಯಂತ ಹದಗೆಟ್ಟ ಪರಿಸ್ಥಿತಿ!
ಶುಕ್ರವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 9 ಪೈಸೆ ಕುಸಿದು 82.88ಕ್ಕೆ ತಲುಪಿತ್ತು. ದೀಪಾವಳಿಯ ನಿಮಿತ್ತ ಸೋಮವಾರ ವಿದೇಶೀ ವಿನಿಮಯ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು.
ಇನ್ನು ಆರು ಕರೆನ್ಸಿಗಳ ಎದುರು ವೃದ್ಧಿಯಾಗುತ್ತಾ ಸಾಗಿದ್ದ ಡಾಲರ್ ಮೌಲ್ಯ ಇಂದು ಶೇಕಡಾ 0.12ರಷ್ಟು ಕುಸಿದು 111.85ರಲ್ಲಿ ವಹಿವಾಟು ನಡೆಸಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 0.28 ಏರಿಕೆಯಾಗಿ ಬ್ಯಾರೆಲ್ಗೆ 93.52 ಡಾಲರ್ ಆಗಿದೆ.