ಸೆಪ್ಟೆಂಬರ್ ತಿಂಗಳಲ್ಲಿ 14 ದಿನ ಬ್ಯಾಂಕ್ ಗಳು ಬಂದ್!

ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಬ್ಯಾಂಕ್ ಶಾಖೆಗಳು ಈ ತಿಂಗಳಲ್ಲಿ 14 ದಿನ ಬಂದ್ ಆಗಿರುತ್ತವೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಎಂದಿನಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಬ್ಯಾಂಕ್ ಶಾಖೆಗಳು ಈ ತಿಂಗಳಲ್ಲಿ 14 ದಿನ ಬಂದ್ ಆಗಿರುತ್ತವೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಕೆಲವು ಬ್ಯಾಂಕ್ ರಜಾದಿನಗಳನ್ನು ರಾಷ್ಟ್ರವ್ಯಾಪಿಯಾಗಿ ಆಚರಿಸಲಾಗುತ್ತದೆ, ಇನ್ನು ಕೆಲವು ಸ್ಥಳೀಯ ರಜಾದಿನಗಳಾಗಿವೆ. ಹಬ್ಬಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಹಲವಾರು ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಮತ್ತು ಉಳಿದ ದಿನಗಳು ವಾರಾಂತ್ಯದ ದಿನಗಳಾಗಿವೆ.

ಕೊಚ್ಚಿಯಲ್ಲಿ ತಿರುವೋಣಂಗಾಗಿ ಬ್ಯಾಂಕ್ ಶಾಖೆಗಳನ್ನು ಮುಚ್ಚಬಹುದು ಆದರೆ ಇತರ ರಾಜ್ಯಗಳಲ್ಲಿ ಬಂದ್ ಮಾಡಲಾಗುವುದಿಲ್ಲ. 

ಸೆಪ್ಟೆಂಬರ್ 2022 ರಲ್ಲಿ ಬರುವ ಬ್ಯಾಂಕ್ ರಜಾದಿನಗಳ ವಿಸ್ತೃತ ಪಟ್ಟಿ ಇಲ್ಲಿದೆ.

ಗಣೇಶ ಚತುರ್ಥಿ (2ನೇ ದಿನ): ಸೆಪ್ಟೆಂಬರ್ 1

ಕರ್ಮ ಪೂಜೆ: ಸೆಪ್ಟೆಂಬರ್ 6

ಮೊದಲ ಓಣಂ: ಸೆಪ್ಟೆಂಬರ್ 7

ತಿರುವೋಣಂ: ಸೆಪ್ಟೆಂಬರ್ 8

ಇಂದ್ರಜಾತ್ರ: ಸೆಪ್ಟೆಂಬರ್ 9

ಶ್ರೀ ನರವನ ಗುರು ಜವಂತಿ: ಸೆಪ್ಟೆಂಬರ್ 10

ಶ್ರೀ ನಾರಾಯಣ ಗುರು ಸಮಾಧಿ ದಿನ: ಸೆಪ್ಟೆಂಬರ್ 21

ನವರಾತ್ರಿ ಸ್ಥಾಪನಾ/ಮೇರಾ ಚೋರೆನ್ ಹೌಬಾ ಆಫ್ ಲೈನಿಂಗ್ ಥೌ ಸನಾಮಾಹಿ: ಸೆಪ್ಟೆಂಬರ್ 26

ಮೇಲಿನ ಬ್ಯಾಂಕ್ ರಜಾದಿನಗಳನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು, ಭಾನುವಾರಗಳು ಈ ಕೆಳಗಿನ ದಿನಾಂಕಗಳಲ್ಲಿ ಬರುತ್ತವೆ:

ಭಾನುವಾರ: ಸೆಪ್ಟೆಂಬರ್ 4

ಎರಡನೇ ಶನಿವಾರ: ಸೆಪ್ಟೆಂಬರ್ 10

ಭಾನುವಾರ: ಸೆಪ್ಟೆಂಬರ್ 11

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com