ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್: ದೇಶಿ ವಹಿವಾಟಿನಲ್ಲಿ ಸೆನ್ಸೆಕ್ಸ್ 900 ಅಂಕ ಕುಸಿತ
ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್ ಜಾಗತಿಕ ಮಾರುಕಟ್ಟೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿದೆ.
Published: 02nd August 2023 03:22 PM | Last Updated: 02nd August 2023 03:42 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್ ಜಾಗತಿಕ ಮಾರುಕಟ್ಟೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿದೆ.
BSE ಸೆನ್ಸೆಕ್ಸ್ 983 ಪಾಯಿಂಟ್‌ಗಳು ಅಥವಾ ಶೇಕಡಾ 1.4ರಷ್ಟು ಕುಸಿದು ದಿನದ ಕನಿಷ್ಠ 65,476ಕ್ಕೆ ತಲುಪಿದೆ. Fvdvg ನಿಫ್ಟಿ 295 ಪಾಯಿಂಟ್‌ಗಳನ್ನು ಅಥವಾ ಶೇಕಡಾ 1.4ರಷ್ಟು ಕಳೆದುಕೊಂಡು ದಿನದ ಕನಿಷ್ಠ 19,517 ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ: ಜುಲೈ 31 ರವರೆಗೆ 6.77 ಕೋಟಿ ಐಟಿಆರ್ ಸಲ್ಲಿಕೆ; ಮೊದಲ ಬಾರಿ ಸಲ್ಲಿಸಿದವರ ಸಂಖ್ಯೆಯೇ 53.67 ಲಕ್ಷ: ಆದಾಯ ತೆರಿಗೆ ಇಲಾಖೆ
ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಅಮೆರಿಕದ ಕ್ರೆಡಿಟ್ ಗ್ರೇಡ್ ಅನ್ನು AAA ಯಿಂದ AA+ ಮಟ್ಟಕ್ಕೆ ಇಳಿಸಿದೆ. ಇದು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.