ಆನ್‌ಲೈನ್ ಗೇಮಿಂಗ್ ಮೇಲಿನ ತೆರಿಗೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು: ಅಮಿತ್ ಜಿಂದಾಲ್
ಆನ್‌ಲೈನ್ ಗೇಮಿಂಗ್ ತೆರಿಗೆ ಪದ್ಧತಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಮತ್ತು ತೆರಿಗೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದು ಆನ್‌ಲೈನ್ ಗೇಮಿಂಗ್ ಉದ್ಯಮ ಒತ್ತಾಯಿಸಿದೆ.
Published: 01st February 2023 05:34 PM | Last Updated: 01st February 2023 07:16 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಆನ್‌ಲೈನ್ ಗೇಮಿಂಗ್ ತೆರಿಗೆ ಪದ್ಧತಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಮತ್ತು ತೆರಿಗೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದು ಆನ್‌ಲೈನ್ ಗೇಮಿಂಗ್ ಉದ್ಯಮ ಒತ್ತಾಯಿಸಿದೆ.
ಇಂದು 2023-24ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ, ಆನ್‌ಲೈನ್ ಗೇಮಿಂಗ್ ಮೇಲಿನ ಟಿಡಿಎಸ್‌ಗೆ ಕನಿಷ್ಠ 10,000 ರೂ ಮಿತಿಯನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ. ಅಲ್ಲದೆ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ತೆರಿಗೆಯ ಕುರಿತು ಸರ್ಕಾರ ಸ್ಪಷ್ಟತೆ ನೀಡಲಿದೆ ಎಂದು ತಿಳಿಸಿದ್ದಾರೆ.
"ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115ಬಿಬಿ ಪ್ರಕಾರ ಆನ್‌ಲೈನ್ ಗೇಮಿಂಗ್‌ನಿಂದ ಬರುವ ಆದಾಯವನ್ನು 'ಇತರ ಮೂಲಗಳಿಂದ ಬರುವ ಆದಾಯ' ಎಂದು ಪರಿಗಣಿಸಲಾಗುತ್ತಿದೆ. ಹಿಂದಿನ ನಿಬಂಧನೆಗಳ ಪ್ರಕಾರ, ಬಹುಮಾನದ ಹಣವು 10,000 ರೂ. ಮೀರಿದರೆ, ಫಲಾನುಭವಿಗೆ ಹಣ ನೀಡುವ ಮುನ್ನ ಶೇ. 30 ಟಿಡಿಎಸ್ ಮತ್ತು ಸರ್ಚಾರ್ಜ್ ಹಾಗೂ ಸೆಸ್ ಅನ್ನು ಕಡಿತಗೊಳಿಸಿ ನೀಡಲಾಗುತ್ತಿದೆ" ಎಂದು ಫೆಲಿಕ್ಸ್ ಅಡ್ವೈಸರಿಯ ಸಹ ಸಂಸ್ಥಾಪಕ ಅಮಿತ್ ಜಿಂದಾಲ್ ಅವರು ಹೇಳಿದ್ದಾರೆ.
ಇದನ್ನು ಓದಿ: ಕೇಂದ್ರ ಬಜೆಟ್ 2023: ಇವಿ ಸೇರಿದಂತೆ ಸಂಪೂರ್ಣ ಆಮದು ಮಾಡಲಾದ ಕಾರುಗಳು ಇನ್ಮುಂದೆ ದುಬಾರಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಫಲಾನುಭವಿಯು ಈ ಮೊತ್ತವನ್ನು ತೋರಿಸಬೇಕಾಗುತ್ತದೆ. ಒಂದು ವೇಳೆ ಈ ಬಗ್ಗೆ ವರದಿ ಮಾಡದಿದ್ದರೆ ತೆರಿಗೆ ಮೊತ್ತದ ಶೇ. 200ರಷ್ಟು ದಂಡ ವಿಧಿಸಲಾಗುತ್ತಿದೆ ಎಂದಿದ್ದಾರೆ.
ಪ್ರಸ್ತಾವಿತ ಹಣಕಾಸು ಮಸೂದೆ 2023 ರ ಪ್ರಕಾರ, 1 ಜುಲೈ 2023 ರಿಂದ ಜಾರಿಗೆ ಬರುವಂತೆ, ಆನ್‌ಲೈನ್ ಗೇಮಿಂಗ್ ವಲಯದಲ್ಲಿ ಖರ್ಚು ಮಾಡುವ ಮತ್ತು ಗೆಲ್ಲುವ ಹಣದ ಹರಿವನ್ನು ನಿಯಂತ್ರಿಸಲು ಟಿಡಿಎಸ್‌ಗೆ ಕನಿಷ್ಠ 10,000 ರೂ ಮಿತಿಯನ್ನು ತೆಗೆದುಹಾಕಿದೆ ಎಂದು ಅವರು ತಿಳಿಸಿದ್ದಾರೆ.